ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

Written By: Rahul TS

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ 2015ರಲ್ಲಿ ತಮ್ಮ ಐ20 ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರನ್ನು ಬಹಿರಂಗಪಡಿಸಿದೆ. ಇದಲ್ಲದೆ ಸಂಸ್ಥೆಯು ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಹೊಸ 2018ರ ಎಲೈಟ್ ಐ20 ಕಾರ್ ಅನ್ನು ಕೂಡ ಬಿಡುಗಡೆಗೊಳಿಸಿತ್ತು.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಬಹಿರಂಗಗೊಂಡ ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರುಗಳು ಕಾರಿನ ಕೇಸ್‍‍ಕೇಡಿಂಗ್ ಮೇಲಿನ ಸಂಸ್ಥೆಯ ಸಿಗ್ನೇಚರ್ ಅನ್ನು ಕಳೆದುಕೊಂಡಿದ್ದು, ಹಿಂಭಾಗದಲ್ಲಿ ಹೊಸ ಟೈಲ್ ಲೈಟ್ ಕ್ಲಸ್ಟರ್ ಮತ್ತು ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ಟೈಲ್‍‍ಗೇಟ್‍‍ನ ಹತ್ತಿರ ವರ್ಗಾಯಿಸಲಾಗಿದೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಇನ್ನು ಕಾರಿನ ಹೊರಭಾಗದಲ್ಲಿ ಯೂರಿಪಿಯನ್ ದೇಶಗಳಲ್ಲಿ ದೊರೆಯುತ್ತಿರುವ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರುಗಳು ಆಯ್ಕೆಯಾಗಿ ಪ್ಯಾಂಥಮ್ ಬ್ಲಾಕ್ ರೂಫ್ ಮತ್ತು ಇನ್ನೆರಡು ಹೊಸ ಬಣ್ಣಗಳನ್ನು ಪಡೆದುಕೊಂಡಿದ್ದು, ಕಾರಿನ ಒಳಭಾಗದಲ್ಲಿ ಸೀಟ್‍‍ಗಳನ್ನು ಹೊರತು ಪಡಿಸಿ ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ ಎನ್ನಲಾಗಿದೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಇದಲ್ಲದೆ ಯೂರಿಪಿಯನ್ ಸ್ಪೆಕ್ ಮಾದರಿಯ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರುಗಳು ಹೊಸ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮತ್ತು ಐಡಲ್ ಸ್ಟಾರ್ಟ್/ಸ್ಟಾಪ್ ಅನ್ನು ಪಡೆದುಕೊಂದಿದ್ದು, ಸುರಾಕ್ಷತೆಗಾಗಿ ಲೇನ್ ಡಿಪಾರ್ಚುರ್ ವಾರ್ನಿಂಗ್ ಮತ್ತು ಫಾರ್‍‍‍ವಾರ್ಡ್ ಕಿಲ್ಲಿಷನ್ ವಾರ್ನಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಭಾರತಕ್ಕೆ ಕಾಲಿಡಲಿರುವ ಹೊಸ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರುಗಳು 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಳ್ಲಲಿದೆ ಎನ್ನಲಾಗಿದೆ. ಪೆಟ್ರೋಲ್ ಮಾದರಿಯ ಕಾರುಗಳು 81ಬಿಹೆಚ್‍‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು ಇನ್ನುಡೀಸೆಲ್ ಮಾದರಿಯ ಕಾರುಗಳು 88ಬಿಹೆಚ್‍ಪಿ ಮತ್ತು 219ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಪ್ರಸ್ಥುತ ತಲೆಮಾರಿನ ಹ್ಯುಂಡೈ ಐ20 ಕಾರಿನ ಪೆಟ್ರೋಲ್ ಮಾದರಿಗಳು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಪಡೆದಿದ್ದು, ಇನ್ನು ಡೀಸೆಲ್ ಮಾದರಿಯ ಕಾರುಗಳು 6 ಸ್ಪೀಡ್ ಗೆರ್‍‍ಬಾಕ್ಸ್ ಅನ್ನು ಪಡೆದುಕೊಂಡಿವೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಹ್ಯುಂಡೈ ಐ20 ಆಕ್ಟೀವ್ ಫೇಸ್‍‍ಲಿಫ್ಟ್ ಕಾರುಗಳು ಪ್ರಸ್ಥುತ ಲಭ್ಯವಿರುವ ಕಾರಿನ ಮಾದರಿಗಳಿಗಿಂದ ಹೆಚ್ಚುವರಿ ನವೀಕರಣಗಳನ್ನು ಪಡೆದಿಲ್ಲವಾದರೂ, ಈ ಕಾರು ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಟೊಯೊಟಾ ಇಟಿಯೊಸ್ ಕ್ರಾಸ್ ಮತ್ತು ಫಿಯಾಟ್ ಅರ್ಬನ್ ಕ್ರಾಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಬಹಿರಂಗಗೊಂಡ ಹ್ಯುಂಡೈ ಐ20 ಆಕ್ಟಿವ್ ಫೇಸ್‍‍ಲಿಫ್ಟ್ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಬರಲಿದೆ ಬೆಂಗಳೂರಿನಲ್ಲೆ ತಯಾರಿಸಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್..

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

Read more on hyundai
English summary
India-Bound Hyundai i20 Active Facelift Revealed; Expected Launch, Specs, Features & Images.
Story first published: Monday, April 30, 2018, 11:16 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark