ಬರಲಿದೆ ಬೆಂಗಳೂರಿನಲ್ಲೆ ತಯಾರಿಸಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್..
ದಿನಕಳೆದಂತೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚುತಿದ್ದು, ಬೆಂಗಳೂರಿನ ಮೂಲದ ಎತರ್ ಎನರ್ಜಿ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ದಿನಕಳೆದಂತೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚುತಿದ್ದು, ಬೆಂಗಳೂರಿನ ಮೂಲದ ಎತರ್ ಎನರ್ಜಿ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಎಲೆಕ್ಟ್ರಿಕ್ ಸ್ಕೂಟರಿನ ಖರೀದಿಗಾಗಿ ಜೂನ್ ತಿಂಗಳಿಂದ ಬುಕ್ಕಿಂಗ್ ಅನ್ನು ಪ್ರಾರಂಭಗೊಳಿಸಲಿದೆ ಎನ್ನಲಾಗಿದೆ.

ಎತರ್ ಎನರ್ಜಿ ಸಂಸ್ಥೆಯು ಎರಡು ವರ್ಷಗಳ ಹಿಂದೆಯೆ ತಮ್ಮ ಎಲ್ಕೆಟ್ರಿಕ್ ಸ್ಕೂಟರ್ ಅನ್ನು ಪ್ರದರ್ಷನಗೊಳಿಸಿದ್ದು, ಇದೀಗ ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಈ ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿರಲಿದ್ದು, ಭವಿಷ್ಯದ ದಿನಗಳಲ್ಲಿ ಬೇರೆ ನಗರಗಳಲ್ಲಿಯು ಕೂಡ ದೊರೆಯಲಿದೆ.

ಎತರ್ ಎಸ್340 ಲೆಕೆಟ್ರಿಕ್ ಸ್ಮಾರ್ಟ್‍ಫೋನ್ ಕನೆಕ್ಟಿವಿಟಿ, ನ್ಯಾವಿಗೇಶನ್ ಅಸ್ಸಿಸ್ಟ್, ಪಾರ್ಕಿಂಗ್ ಅಸ್ಸಿಸ್ಟ್ ಆಯ್ಕೆಯನ್ನು ಪಡೆದಂತ ಸ್ಕೂಟರ್ ಏಳು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವೆಹಿಕಲ್ ಚಾರ್ಜಿಂಗ್ ಪಾಯಿಂಟ್ ಟ್ರಾಕರ್, ಎಲ್ಇಡಿ ಲೈಟ್‍ನಿಂಗ್, ಸಿಬಿಎಸ್ ಮತ್ತು ಸೀಟ್ ಸ್ಟೊರೇಜ್ ಲೈಟ್ ಎಂಬ ಹತ್ತುಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಇನ್ನು ಎತರ್ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದು ಬಾರಿ ಚರ್ಜ್‍ಗೆ ಸುಮಾರು 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಗಂಟೆಗೆ 72 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಕೂಡ ಪಡೆದುಕೊಂಡಿದೆ.

ಇನ್ನು ಇದರಲ್ಲಿ ಬಳಸಲಾಗಿರುವ ಫಾಸ್ಟ್ ಚಾರ್ಜರ್‍ನ ಮೂಲಕ ಬ್ಯಾಟರಿಯು ಕೇವಲ 50 ನಿಮಿಷಗಳಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದೆ. ಇದಲ್ಲದೆ ಎಥರ್ ಎನರ್ಜಿ ಸಂಸ್ಥೆಯು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಚಾರ್ಜಿಂಗ್ ಪಾಯಿಂಟ್‍ಗಳನ್ನು ಕೂಡ ಅಳವಡಿಸಲಿದೆಯಂತೆ.

ಇವುಗಳಲ್ಲದೆ ಎತರ್ ಸಂಸ್ಥೆಯು ಬೆಂಗಳೂರಿನ ಇಂದ್ರಾನಗರ್‍ನಲ್ಲಿ ಗ್ರಾಹಕರ ಅನುಭವ ಕೇಂದ್ರವನ್ನು ಕೂಡ ತೆರೆಯಲಿದ್ದು, ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮುನ್ನ ಪರೀಕ್ಷಿಸಬಹುದಂತೆ.

ಬಿಡುಗಡೆಗೊಳ್ಳಲಿರುವ ಎತರ್ ಎಸ್340 ಎಲೆಕ್ಟ್ರಿಕ್ ಸ್ಕೂಟರ್‍ನ ಬೆಲೆಯ ಬಗ್ಗೆ ಯಾವುದೆ ಮಾಹಿತಿಯು ಲಭ್ಯವಿಲ್ಲವಾದರೂ, ದೇಶದಲ್ಲೆ ಮೊದಲು ನಿರ್ಮಾಣಗೊಳುತ್ತಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಲ್ಲಿ ಯಾವ ರೀತಿಯ ಅನುಭವವನ್ನು ನೀಡಲಿದೆ ಎಂದು ಕಾಯ್ದು ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....
ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?
ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?


Click it and Unblock the Notifications