ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ಎರಡನೆಯ ಅತಿದೊಡ್ಡ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ದೆಹಲಿಯಲ್ಲಿ ನಡೆಯುತ್ತಿರುವ ಮೂವ್ ಸಮ್ಮಿತ್ ಸಮಾವೇಶದಲ್ಲಿ ತಮ್ಮ ಕೋನಾ ಎಲೆಕ್ಟ್ರಿಕ್ ಕಾರಿನ ಪ್ರೊಡಕ್ಷನ್ ರೆಡಿ ವೇರಿಯಂಟ್ ಅನ್ನು ಪ್ರದರ್ಶಿಸಲಾಗಿದೆ

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಎರಡನೆಯ ಅತಿದೊಡ್ಡ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ದೆಹಲಿಯಲ್ಲಿ ನಡೆಯುತ್ತಿರುವ ಮೂವ್ ಸಮ್ಮಿತ್ ಸಮಾವೇಶದಲ್ಲಿ ತಮ್ಮ ಕೋನಾ ಎಲೆಕ್ಟ್ರಿಕ್ ಕಾರಿನ ಪ್ರೊಡಕ್ಷನ್ ರೆಡಿ ವೇರಿಯಂಟ್ ಅನ್ನು ಪ್ರದರ್ಶಿಸಲಾಗಿದೆ. ಈ ಕಾರಿನ ಪರಿಕಲ್ಪನೆಯನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿತ್ತು.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

2019ರ ಮೊದಲಾರ್ಧದಲ್ಲೇ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸುಳಿವು ನೀಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ. ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ ಸಿದ್ದವಾಗಿರುವ ಕೋನಾ ಕಾರುಗಳು 299 ಕಿ.ಮೀ ಮತ್ತು 482 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳು ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿವೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಸುಧಾರಿತ ತಂತ್ರಜ್ಞಾನದೊಂದಿಗೆ ಚಾಲನೆಗೊಳ್ಳುವ ಈ ಕಾರು ಅನುಕೂಲಕರ ಮತ್ತು ಸಂಪರ್ಕದ ವೈಶಿಷ್ಟ್ಯಗಳೊಂದಿಗೆ ವ್ಯಾಪಕ ಶ್ರೇಣಿ ಮತ್ತು ಸಕ್ರಿಯ ಸುರಕ್ಷತೆ, ಡ್ರೈವಿಂಗ್ ಅಸಿಸ್ಟೆನ್ಸ್ ತಂತ್ರಜ್ಞಾನಗಳಿಂದ ಪ್ರಯೋಜನವನ್ನು ಪಡೆದಿರುತ್ತದೆ ಎಂದು ಹ್ಯುಂಡೈ ಸಂಸ್ಥೆಯು ಹೇಳಿಕೊಂಡಿದೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಮಾಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಹುಂಡೈ ಸಂಸ್ಥೆಯು ತನ್ನ ಮೊದಲ ಇವಿ ಕಾರನ್ನು 2019ರ ಮೊದಲಾರ್ಧದಲ್ಲೇ ಪರಿಚಯಿಸುವ ಇರಾದೆಯಲ್ಲಿದ್ದು, ಜೊತೆಗೆ ಲೋನಿಕ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಹೈಬ್ರಿಡ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಯಾವುದೇ ಸುಳಿವು ಇಲ್ಲಾವಾದರೂ ಎಲೆಕ್ಟ್ರಿಕ್ ಕಾರನ್ನು ಮಾತ್ರ ಭಾರತದಲ್ಲಿ ಪರಿಚಯಿಸುವುದು ಖಚಿತವಾಗಿದೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಬ್ಯಾಟರಿ ವೈಶಿಷ್ಟ್ಯತೆ

ಕೊನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರ ಆಯ್ಕೆ ಮೇಲೆ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೊನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

39.2 ಕೆವಿ ಬ್ಯಾಟರಿ ಪ್ರೇರಿಕ ಕೊನಾ ಕಾರುಗಳು ಪೂರ್ಣಪ್ರಮಾಣದಲ್ಲಿ ಚಾರ್ಜಿಂಗ್‌ಗೊಳ್ಳಲು 6 ತಾಸು 10 ನಿಮಿಷ ಸಮಯ ತೆಗೆದುಕೊಳ್ಳವುದಲ್ಲದೇ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್‌ ಮಾಡಬಹುದು. ಹಾಗೆಯೇ 64 ಕೆವಿ ಬ್ಯಾಟರಿ ಪ್ರೇರಿತ ಕೊನಾ ಕಾರುಗಳು ಸಹ ಪೂರ್ಣಪ್ರಮಾಣದ ಚಾರ್ಜಿಂಗ್‌ಗಾಗಿ 9 ತಾಸು 40 ನಿಮಿಷ ಸಮಯ ತೆಗೆದುಕೊಂಡರೇ, ಕೆವಲ 54 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್ ಮಾಡಬಹುದು.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಕೊನಾ ಕಾರುಗಳ ಬೆಲೆ(ಅಂದಾಜು)

ಅತ್ಯುತ್ತಮ ಬ್ಯಾಟರಿ ಬಳಕೆಯ ಜೊತೆ ಅಧಿಕ ಮೈಲೇಜ್ ರೇಂಜ್ ಹೊಂದಿರುವ ಕೊನಾ ಕಾರುಗಳ ಬೆಲೆಯು ರೂ.15 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಪ್ರದರ್ಶನಗೊಂಡ ಒಂದು ಬಾರಿ ಚಾರ್ಜ್‍‍ಗೆ 482 ಕಿಲೋಮೀಟರ್ ಮೈಲೇಜ್ ನೀಡುವ ಹ್ಯುಂಡೈ ಕೊನಾ ಇವಿ ಕಾರು..

ಹೀಗಾಗಿ ಹ್ಯುಂಡೈ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಕೊನಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಕಾರುಗಳನ್ನು ಸದ್ಯಕ್ಕೆ ಸಿಕೆಡಿ ಮೂಲಕ ಆಮದು ಮಾಡಿಕೊಂಡು ಚೆನ್ನೈ ಬಳಿ ಇರುವ ಹ್ಯುಂಡೈ ಉತ್ಪಾದನಾ ಘಟಕದಲ್ಲಿ ಬ್ಯಾಟರಿ ಜೋಡಣೆ ಮಾಡಲಾಗುತ್ತದೆ.

Source: Rushlane

Most Read Articles

Kannada
English summary
Hyundai Kona electric car with 482 kms range debuts in India.
Story first published: Friday, September 7, 2018, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X