ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಇಂಡಿಯಾ ತಮ್ಮ ಕಂಪಾಸ್ ಎಸ್‍‍ಯುವಿ ಕಾರನ್ನು ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬಿಡುಗಡೆಗೊಳಿಸಲು ಯೋಜನೆಯಲ್ಲಿದೆ. ಮುಂದಿನ ಆರು ತಿಂಗಳಿನಲ್ಲಿ ಜೀಪ್ ಕಂಪಾಸ್ ಇನ್ನಷ್ಟು ಹೊಸ ವೇರಿಯಂಟ್‍‍ಗಳಲ್ಲಿ ಲಭ್ಯವಿರಲಿದೆ. ಭಾರತದಲ್ಲಿ ತಮ್ಮ ವ್ಯಾರವನ

By Rahul Ts

ಜೀಪ್ ಇಂಡಿಯಾ ತಮ್ಮ ಕಂಪಾಸ್ ಎಸ್‍‍ಯುವಿ ಕಾರನ್ನು ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬಿಡುಗಡೆಗೊಳಿಸಲು ಯೋಜನೆಯಲ್ಲಿದೆ. ಮುಂದಿನ ಆರು ತಿಂಗಳಿನಲ್ಲಿ ಜೀಪ್ ಕಂಪಾಸ್ ಇನ್ನಷ್ಟು ಹೊಸ ವೇರಿಯಂಟ್‍‍ಗಳಲ್ಲಿ ಲಭ್ಯವಿರಲಿದೆ. ಭಾರತದಲ್ಲಿ ತಮ್ಮ ವ್ಯಾರವನ್ನು ಹೆಚ್ಚಿಸಿಕೊಳ್ಳಲು ಜೀಪ್ ಸಂಸ್ಥೆಯು ಕಂಪಾಸ್ ಕಾರಿನ ಇನ್ನೆರಡು ವಿನೂತನ ವೇರಿಯಂಟ್ ಅನ್ನು ಪರಿಚಯಿಸಲಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಇಂಡಿಯಾ ಮಾರಾಟಗೊಳಿಸಲಿರುವ ಎರಡು ಮಾಡಲ್‍‍ನಲ್ಲಿ ಒಂದು ಕಂಪ್ಯಾಕ್ಟ್ ಎಸ್‍‍ಯುವಿ, ಇದು ಮಾರುಕಟ್ಟೆಯಲ್ಲಿ ಇರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಎಸ್‍‍ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ. ಬಹುಷಃ ಇದು ಜೀಪ್ ರೆನಿಗೆಡ್ ಆಗಿರಬಹುದಾದ ಸಾಧ್ಯತೆಗಳಿವೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಇಂಡಿಯಾ ಪರಿಚಯಿಸಲಿರುವ ಮತ್ತೊಂದು ಮಾಡಲ್ 7 ಸೀಟರ್ ಎಸ್‍‍ಯುವಿ. ಈ ಕಾರು ನಿಜವಾಗಿಯು ಬಂದಲ್ಲಿ ಮಾರುಕಟ್ಟೆಯಲ್ಲಿರುವ ಟೊಯೊಟಾ ಫಾರ್ಚ್ಯೂನರ್, ಫೋರ್ಡ್ ಏಂಡೀವರ್ ಮತ್ತು ಈ ಸೆಗ್ಮೆಂಟ್‍‍ನಲ್ಲಿರುವ ಇನ್ನಿತರೆ ಮಾಡಲ್‍‍ಗಳಿಗೆ ಪೈಪೋಟಿ ನೀಡಲಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಅಮೇರಿಕಾ ಮೂಲದ ಜೀಪ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದ ಪರವಾಗಿ ಉತ್ತಮ ಪಲಿತಾಂಶವನ್ನು ಪಡೆಯತ್ತುಲಿದೆ. ಜೀಪ್ ಒಟ್ಟಾರೆ ಮಾರಾಟದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇಲ್ ಆದ ಎಸ್‍‍ಯುವಿಯನ್ನು ಈಗ ಮತ್ತೆರದು ಹೊಸ ವೇರಿಯಂಟ್ ಅನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದಾರೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಇದರಲ್ಲಿನ ಭಾಗವಾಗಿಯೆ, ನೂತನವಾಗಿ ಸಿಕ್ಕ ಮಾಹಿತಿಗಳ ಪ್ರಕಾರ ಜೀಪ್ ಎಂಡಿಯಾ ಕಂಪಾಸ್ ಎಸ್‍‍ಯುವಿ ನೈಟ್ ಈಗಲ್ ಮತ್ತು ಟ್ರಯಲ್‍‍ಹೌಕ್ ಎಂಬ ಇನ್ನೆರಡು ವೀನೂತನವಾದ ವೇರಿಯಂಟ್‍‍ನಲ್ಲಿ ಪರಿಚಯಿಸಲು ಯೋಜನೆಯನ್ನು ಪ್ರಾರಂಭಿಸಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಕಂಪಾಸ್ ಟ್ರಯಲ್‍‍ಹೌಕ್ ವೇರಿಯಂಟ್ ಇತರೆ ಕಂಪಾಸ್ ವೇರಿಯಂಟ್‍‍ನ ಆಧಾರವಾಗಿ ರೂಪಿಸಲಾಗಿದೆ. ಇದರಲ್ಲಿ ರಾಕ್ ಮೋಡ್ ಮತ್ತು ಜೀಪ್ ಆಕ್ಟೀವ್ ಡ್ರೈವ್‍ನಲ್ಲಿ ರೇಂಜ್ 4x4 ಸಿಸ್ಟಮ್ ಎಂಬ ಎಷ್ಟೊ ಆಧೂನಿಕ ವೈಶಿಷ್ಟ್ಯತೆಗಳಿವೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಕಂಪಾಸ್ ನೈಟ್ ಈಗಲ್ ವೇರಿಯಂಟ್‍‍ಗಳು ಕೂಡಾ ಲಿಮಿಟೆಡ್ ವೇರಿಯಂಟ್ ಆಧಾರವಾಗು ಡೆವೆಲಪ್ ಮಾಡಲಾಗಿದೆ. ಇದರಲ್ಲಿ ಕಾಸ್ಮೇಟಿಕ್ ಬದಲಾವಣೆಗಳನ್ನು ಬಿಟ್ಟರೆ ಸಾಂಕೇತಿಕವಾಗಿ ಮತ್ತು ವೈಶಿಷ್ಟ್ಯತೆಗಳ ಪರವಾಗಿ ಯಾವತರಖದ ಬದಲಾವಣೆಯನ್ನು ಪಡೆದಿರುವುದಿಲ್ಲ. ಆದರೇ ಪ್ರತ್ಯೇಕವಾದ 18 ಇಂಚಿನ ಅಲಾಯ್ ವ್ಹೀಲ್ಸ್, ಹಲವು ಬಗೆಯ ಗ್ಲಾಸ್ ಬ್ಲಾಕ್ ಡಿಜೈನ್ ಎಲೆಮೆಂಟ್ಸ್ ಅದೇ ವಿಧವಾಗಿ ಸಾಲಿಡ್ ಷಾಡೊ ಬ್ಲಾಕ್ ಅಥವಾ ಮೆಟಾಲಿಕ್ ಕಾರ್ಬನ್ ಬ್ಲಾಕ್ ಬಣ್ಣದಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಕಂಪಾಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದರಲ್ಲಿನ 2.0 ಲೀಟರ್ ಸಾಮರ್ಥ್ಯದ ಮಲ್ಟಿಜೆಟ್ ಡೀಸೆಲ್ ಎಂಜಿನ್ 180ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಜೀಪ್ ಕಂಪಾಸ್ ಪೆಟ್ರೋಲ್ ವೇರಿಯಂಟ್‍‍ನಲ್ಲಿನ 1.4 ಲೀಟರ್ ಮಲ್ಟಿ ಏರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 160 ಬಿಹೆಚ್‍ಪಿ ಮತ್ತು 250ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೆ ಹೊಂದಿರಲಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಪ್ರಸ್ಥುತ ಕಂಪಾಸ ಪೆಟ್ರೋಲ್ ವೇರಿಯಂಟ್‍‍ಗಳು ಮಾತ್ರವೇ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅದೇ ವಿಧವಾಗಿ ಡೀಸೆಲ್ ವೇರಿಯಂಟ್‍‍ನಲ್ಲಿ ಆಲ್-ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶಗಳಿವೆ. ಕಂಪಾಸ ಪೆಟ್ರೋಲ್ ವೇರಿಂಟ್‍ ಕಾರಿನ ಪ್ರಾರಂಭಿಕ ಬೆಲೆಯು ರೂ. 15.34 ಲಕ್ಷ ಮತ್ತು ಡೀಸೆಲ್ ವೇರಿಯಂಟ್ ಪ್ರಾರಂಭಿಕ ಬೆಲೆಯು ರೂ. 16.55 ಲಕ್ಷದ ಎಕ್ಸ್ ಶೋರಂ ಗೆ ನಿಗದಿಪದಿಸಲಾಗಿದೆ.

ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

ಅತೀ ಶೀಘ್ರದಲ್ಲಿ ಬಿಡಗಡೆಗೊಳ್ಳಲಿರುವ ಜೀಪ್ ಕಂಪಾಸ ಹೊಸ ವೇರಿಯಂಟ್‍‍ಗಳ ಬೆಲೆಯ ಅಂದಾಜು

  • ನೈಟ್ ಈಗಲ್ ಪೆಟ್ರೋಲ್ ಕಂಪಾಸ್ ಬೆಲೆ ರೂ. 21 ಲಕ್ಷ
  • ನೈತ್ ಈಗಲ್ ಡೀಸೆಲ್ ಕಂಪಾಸ ಬೆಲೆ ರೂ. 22.5 ಲಕ್ಷ
  • ಟ್ರಯಲ್‍ಹೌಕ್ ಪೆಟ್ರೋಲ್ ಕಂಪಾಸ ಬೆಲೆ ರೂ. 21.5 ಲಕ್ಷ
  • ಟ್ರಯಲ್‍ಹೌಕ್ ಡೀಸೆಲ್ ಕಂಪಾಸ ಬೆಲೆ ರೂ. 23.5 ಲಕ್ಷ
  • ಮತ್ತೆರಡು ಹೊಸ ವೇರಿಯಂಟ್‍‍ನಲ್ಲಿ ಬರಲಿದೆ ಜೀಪ್ ಕಂಪಾಸ್..

    ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

    ಜೀಪ್ ಕಂಪಾಸ್ ಬಿಡುಗಡೆಗೊಂಡಾಗಿನಿಂದಲೂ ರೆಕಾರ್ಡ್ ಸ್ಥಾಯಿಯ ಫಲಿತವನ್ನು ಸಾದಿಸಿದೆ. ಅತೀ ಕಡಿಮೆ ಸಮಯದಲ್ಲಿ ಸುಮಾರು 30,000 ಯೂನಿಟ್‍ಗಳ ಮಾರಾಟವನ್ನು ತಲುಪಿದೆ. ಈಗ ಹೊಸ ನೈಟ್ ಈಗಲ್ ಮತ್ತು ಟ್ರಯಲ್‍‍ಹೌಕ್ ವೇರಿಯಂಟ್‍‍ಗಳನ್ನು ಬಿಡುಗಡೆಗೊಳಿಸಿದ್ದಲೇ ಆದರೇ ಜೀಪ್ ಕಂಪಾಸ ಸೇಲ್ಸ್ ಇನ್ನು ಅಧಿಕಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
Read more on jeep new car suv
English summary
New Jeep Compass Variants To Launch In The Next Six Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X