ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಜಿಮ್ಮಿ ಶೇರ್‌ಗಿಲ್‌ಗೆ ಐಷಾರಾಮಿ ಕಾರು ಕಲೆಕ್ಷನ್ ಮೇಲೆ ಎಲ್ಲಿಲ್ಲದ ಕ್ರೇಜ್. ಹೀಗಾಗಿಯೇ ಮೊನ್ನೆಯಷ್ಟೇ ತಮ್ಮ ನೆಚ್ಚಿನ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಖರೀದಿಸಿ ಬಾಲಿವುಡ್ ಮಂದಿಗೆ ಸರ್ಫೈಸ್ ನೀಡಿದ್ದಾರೆ.

By Praveen Sannamani

ಪಂಜಾಬಿ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟ ಹಾಗೂ ನಿರ್ಮಾಪಕನಾಗಿ ಜನಪ್ರಿಯತೆ ಸಾಧಿಸಿರುವ ಜಿಮ್ಮಿ ಶೇರ್‌ಗಿಲ್‌ಗೆ ಐಷಾರಾಮಿ ಕಾರು ಕಲೆಕ್ಷನ್ ಮೇಲೆ ಎಲ್ಲಿಲ್ಲದ ಕ್ರೇಜ್. ಹೀಗಾಗಿಯೇ ಮೊನ್ನೆಯಷ್ಟೇ ತಮ್ಮ ನೆಚ್ಚಿನ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಖರೀದಿಸಿ ಬಾಲಿವುಡ್ ಮಂದಿಗೆ ಸರ್ಫೈಸ್ ನೀಡಿದ್ದಾರೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಬಾಲಿವುಡ್ ಅಂಗಳದಲ್ಲಿ ಹತ್ತಾರು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಅಭಿಮಾನಿ ವರ್ಗವನ್ನು ಹೊಂದಿರುವ ನಟ ಜಿಮ್ಮಿ ಶೇರ್‌ಗಿಲ್ ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಉದ್ಯಮ ಕ್ಷೇತ್ರದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಈಗಾಗಲೇ ಮೂರು ನಾಲ್ಕು ದುಬಾರಿ ಐಷಾರಾಮಿ ಕಾರುಗಳನ್ನು ಖರೀದಿಸಿರುವ ಜಿಮ್ಮಿ ಶೇರ್‌ಗಿಲ್‌, ಇದೀಗ ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಮುಂಬೈನಲ್ಲಿ ಹೊಸ ಕಾರು ಖರೀದಿ ಮಾಡಲಾಗಿದ್ದು, ಆಪ್ ರೋಡಿಂಗ್ ಕೌಶಲ್ಯ ಹಾಗೂ ಸುಧಾರಿತ ತಂತ್ರಜ್ಞಾನ ಪ್ರೇರಿತ ಮರ್ಸಿಡಿಸ್ ಎಎಂಜಿ ಜಿ63 ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಆಪ್ ರೋಡಿಂಗ್ ಬಗೆಗೆ ಸಾಕಷ್ಟು ಕ್ರೇಜ್ ಹೊಂದಿರುವ 47 ವರ್ಷದ ಜಿಮ್ಮಿ ಶೇರ್‌ಗಿಲ್‌, ಹೊಸ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸುವ ಬಗ್ಗೆ ಈ ಹಿಂದೊಮ್ಮೆ ಸುಳಿವು ನೀಡಿದ್ದಲ್ಲದೇ ಇದೀಗ ತಮ್ಮ ಕನಸಿನ ಕಾರನ್ನು ಖರೀದಿಸಿ ಖುಷಿ ವ್ಯಕ್ತಪಡಿಸಿದ್ದಾರೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

5.5-ಲೀಟರ್ ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು 571-ಬಿಎಚ್‌ಪಿ ಮತ್ತು 560-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಕೌಶಲ್ಯ ಪ್ರದರ್ಶನ ಮಾಡಬಲ್ಲವು.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಜೊತೆಗೆ 4x4 ಡ್ರೈವ್ ಟೆಕ್ನಾಲಜಿ ಹೊಂದಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ಕೇವಲ 5.4 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಪಡೆದುಕೊಳ್ಳುವುದಲ್ಲದೇ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಸಾಧಿಸುವ ಗುಣ ಹೊಂದಿವೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಹೀಗಾಗಿಯೇ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಕೇವಲ 5ಕಿಮಿ ಮೈಲೇಜ್ ನೀಡುವ ಮರ್ಸಿಡಿಸ್ ಎಎಂಜಿ ಜಿ63 ಕಾರುಗಳು ದೈನಂದಿನ ಬಳಕೆಗಿಂತ ಆಪ್ ರೋಡ್‌ಗೆ ಹೆಚ್ಚು ಸೂಕ್ತವಾಗಿದ್ದು, ಜಿಮ್ಮಿ ಶೇರ್‌ಗಿಲ್‌ ಕೂಡಾ ಇದೇ ಉದ್ದೇಶಕ್ಕಾಗಿ ಈ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಎಎಂಜಿ ಜಿ63 ಕಾರಿಗಿಂತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಎಎಂಜಿ ಜಿ65 ಕಾರುಗಳು ಇನ್ನು ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿದ್ದು, 6-ಲೀಟರ್ ಟ್ವಿನ್ ಟರ್ಬೋ ವಿ12 ಎಂಜಿನ್‌ನೊಂದಿಗೆ ಅಲ್ಟ್ರಾ ಲಗ್ಷುರಿ ಮೆಬ್ಯಾಚ್ ಎಸ್600 ಕಾರಿಗೆ ಸರಿಸಮನಾಗಿವೆ.

ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿದ ನಟ ಜಿಮ್ಮಿ ಶೇರ್‌ಗಿಲ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಬಿಡುಗಡೆಯಾದ ಹೋಂಡಾ ಆಕ್ಟಿವಾ 5ಜಿ ಬಗ್ಗೆ ನಿಮಗೆಷ್ಟು ಗೊತ್ತು.?

More from DriveSpark

Article Published On: Saturday, April 21, 2018, 14:13 [IST]
English summary
Jimmy Sheirgill Buys A Mercedes-AMG G63.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+