ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

7 ಸೀಟರ್ ಕಾರುಗಳ ವಿಭಾಗದಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜಾಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಯ ಎರ್ಟಿಗಾ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

By Praveen Sannamani

7 ಸೀಟರ್ ಕಾರುಗಳ ವಿಭಾಗದಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜಾಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಯ ಎರ್ಟಿಗಾ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಒದಗಿಸಬಹುದಾದ ತಾಂತ್ರಿಕ ಅಂಶಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಸದ್ಯ ಇಂಡೋನೇಷ್ಯಾ ಅಂತಾರಾಷ್ಟ್ರೀಯ ಮೋಟಾರ್ ಮೇಳದಲ್ಲಿ ಪ್ರದರ್ಶನಗೊಂಡಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿಗಳು ಎಂಪಿವಿ ಕಾರು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದ್ದು, ಈ ಹಿಂದಿನ ಕಾರು ಮಾದರಿಗಿಂತ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಪ್ರಿಮಿಯಂ ವಿನ್ಯಾಸಗಳೇ ಎರ್ಟಿಗಾ ಫೇಸ್‌ಲಿಫ್ಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ವಿಸ್ತರಿತ ಕ್ಯಾಬಿನ್ ಸಹ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದಾದ ವ್ಯವಸ್ಥೆಯನ್ನು ಹೊಂದಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಕಾರಿನ ಡಿಸೈನ್ ಮತ್ತು ಎಂಜಿನ್ ವಿಭಾಗದಲ್ಲೂ ಸಹ ಸುಲಭ ಕಾರು ಚಾಲನೆಗಾಗಿ ಬದಲಾವಣೆ ತರಲಾಗಿದ್ದು, ಕಾರಿನ ಫ್ರಂಟ್ ಎಂಡ್‌‌ನಲ್ಲಿ ಗುರತರ ಬದಲಾವಣೆಗಾಗಿ ನ್ಯೂ ಗ್ರಿಲ್, ಹೊಸತನದ ಹೆಡ್‌ಲ್ಯಾಂಪ್, ಸ್ಪೋರ್ಟಿ ಬಂಪರ್, ಟ್ರೈಯಾಂಗಲ್ ಫಾಗ್ ಲ್ಯಾಂಪ್ ಮತ್ತು ಸೆಂಟ್ರಲ್ ಏರ್ ಡ್ಯಾಮ್ ಜೋಡಣೆ ಮಾಡಲಾಗಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಇನ್ನು ಕಾರಿನ ಸೈಡ್ ಪ್ರೋಫೈಲ್‌ನಲ್ಲೂ ಬದಲಾವಣೆ ತರಲಾಗಿದ್ದು, ಶೋಲ್ಡರ್ ಲೈನ್, ಟೈಲ್ ಲ್ಯಾಂಪ್ ಕ್ಲಸ್ಟರ್, ಫ್ಲೋಟ್ರಿಂಗ್ ರೂಫ್ ಡಿಸೈನ್ ಸೇರಿಸಲಾಗಿದೆ. ಇದರಿಂದ ಎಂಪಿವಿ ಮಾದರಿಗಳಲ್ಲೇ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಎರ್ಟಿಗಾ ಕಾರು ಹಳೆಯ ಎರ್ಟಿಗಾ ಕಾರಿಗಿಂತ ಸಾಕಷ್ಟು ಭಿನ್ನತೆ ಹೊಂದಿದೆ ಎನ್ನಬಹುದು.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಜೊತೆಗೆ ಪ್ರಿಮಿಯಂ ಗುಣಲಕ್ಷಣಗಳಾದ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಎರ್ಟಿಗಾ ಎಮ್‍‍ಪಿವಿ ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍ ಆಯ್ಕೆಗಳಲ್ಲಿ ಬರಲಿವೆ. ಪೆಟ್ರೋಲ್ ಮಾದರಿಯ ಕಾರು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಸಹಾಯದಿಂದ 102ಬಿಹೆಚ್‍‍ಪಿ ಮತ್ತು 138ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಆದರೆ, ಭಾರತಕ್ಕೆ ಬರಲಿರುವ ಎರ್ಟಿಗಾ ಡೀಸೆಲ್ ಮಾದರಿಯ ಕಾರುಗಳು 1.3 ಲೀಟರ್ ಡೀಸೆಲ್ ಎಂಜಿನ್ ಅನ್ನು ಪದೆದಿದ್ದು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿದೆ ಜೋಡಿಸಲಾಗಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಸುರಕ್ಷಾ ಸೌಲಭ್ಯಗಳು

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಸ್ಪೆಷಲ್ ಏನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಎಂಪಿವಿ ಮಾರಾಟದಲ್ಲಿ ಟೊಯೊಟಾ ಕ್ರಿಸ್ಟಾ ನಂತರದ ಸ್ಥಾನದಲ್ಲಿರುವ ಎರ್ಟಿಗಾ ಕಾರುಗಳು ಇದೀಗ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗುವ ಮೂಲಕ ಜಾಗತಿಕವಾಗಿ ಮತ್ತಷ್ಟು ಸದ್ದು ಮಾಡುವ ಭರವಸೆಯಲ್ಲಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....

ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್

ಗ್ರಾಹಕನ ಸಮಸ್ಯೆ ಪರಿಹರಿಸದ ಕಾರ್ ಡೀಲರ್ಸ್‌ಗೆ ಬಿತ್ತು 9.23 ಲಕ್ಷ ದಂಡ..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

Most Read Articles

Kannada
Read more on maruti suzuki mpv
English summary
New Maruti Ertiga 2018: All You Need To Know About The Next-Gen MPV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X