ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

Written By:
Recommended Video - Watch Now!
Ducati 959 Panigale Crashes Into Buffalo - DriveSpark

ಅಯೋಗ್ಯ ಸಿನಿಮಾ ಶೂಟಿಂಗ್ ಮುಗಿಸಿಕೊಂಡ ವಾಪಸ್ ಬರುತ್ತಿದ್ದಾಗ ನಟ ನೀನಾಸಂ ಸತೀಶ್ ಮಿಟ್ಸುಬಿಸಿ ಪಜೆರೊ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್ ನಟ ಸತೀಶ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಬಳಿ ನಡೆದಿದೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ನಟ ಸತೀಶ್ ಅವರ ಮೇಕಪ್ ಮ್ಯಾನ್, ಚಾಲಕ ಹಾಗೂ ಕೆಲವು ಸಹಚರರು ಅವಘಡಕ್ಕೆ ಈಡಾದ ಕಾರಿನಲ್ಲಿದ್ದರು. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಯೋಗ್ಯ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಡ್ಯಕ್ಕೆ ಸತೀಶ್ ಹೋಗಿದ್ದರು ಎನ್ನಲಾಗಿದೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಅಪಘಾತವಾದಲ್ಲಿ ದುಬಾರಿ ಬೆಲೆಯ ಮಿಟ್ಸುಬಿಸಿ ಪಜೆರೊ ಸ್ಪೋಟ್ ಕಾರು ಸಂಪೂರ್ಣ ನಜ್ಜುಗಜ್ಜಾಗಿದ್ದು, ಅಪಘಾತಕ್ಕೆ ಈಡಾದ ಕಾರಿನಲ್ಲಿದ್ದವರು ಪ್ರಾಣ ಉಳಿಸಿಕೊಂಡಿರುವುದು ಆಶ್ಚರ್ಯ ತಂದಿದೆ ಅಂತ ಸ್ಥಳದಲ್ಲಿದ್ದ ಜನತೆ ಹೇಳಿದ್ದಾರೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಈ ಬಗ್ಗೆ ಚಿತ್ರ ನಿರ್ದೇಶ ಮಹೇಶ್ ಮಾತನಾಡಿದ್ದು, ನಟ ನೀನಾಸಂ ಸತೀಶ್ ಅವರ ಕಾರು ಅಪಘಾತವಾಗಿದೆ. 'ಅಯೋಗ್ಯ' ಸಿನಿಮಾದ ಶೂಟಿಂಗ್ ಮುಗಿಸಿ ಹೊರಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಆದರೆ ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ ಅಂದಿದ್ದಾರೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಕಳೆದ ಒಂದು ವಾರದಿಂದ 'ಅಯೋಗ್ಯ' ಸಿನಿಮಾದ ಚಿತ್ರೀಕರಣ ಮಂಡ್ಯ ಸುತ್ತಮುತ್ತ ನಡೆಯುತ್ತಿದ್ದು, ನಿನ್ನೆ ಕೂಡಾ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಸತೀಶ್ ವಾಪಸ್ ಹೋಗುವ ವೇಳೆ ಈ ಅಪಘಡ ನಡೆದಿದ್ದು, ವೇಗದಲ್ಲಿರುವಾಗ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಕಾರಿನಲ್ಲಿ ನಟ ಸತೀಶ್ ಜೊತೆಗೆ ಇದ್ದ ಕಾರ್ ಡ್ರೈವರ್‌‌ಗೆ ಸ್ವಲ್ಪ ಮಟ್ಟಿಗೆ ತೀವ್ರ ಗಾಯಗಳಾಗಿದ್ದನ್ನು ಹೊರತುಪಡಿಸಿ ಮೇಕಪ್ ಮ್ಯಾನ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರಿಗೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಇನ್ನು ಅಯೋಗ್ಯ' ಸತೀಶ್ ನೀನಾಸಂ ಅಭಿನಯದ ಹೊಸ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ.

Trending On DriveSpark Kannada:

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಅಯೋಗ್ಯ ಸಿನಿಮಾ ಶೂಟಿಂಗ್ ವೇಳೆ ಅವಘಡ- ಕಾರು ಅಪಘಾತದಲ್ಲಿ ಪಾರಾದ ನಟ ನೀನಾಸಂ ಸತೀಶ್

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಚಿತ್ರೀಕರಣ ಸದ್ಯ ಜೋರಾಗಿ ನಡೆಯುತ್ತಿದೆ. ಅಂದಹಾಗೆ, ಈ ಹಿಂದೆ ಕೂಡ ಸತೀಶ್ ನೀನಾಸಂ ಅವರಿಗೆ 'ಟೈಗರ್ ಗಲ್ಲಿ' ಚಿತ್ರೀಕರಣದ ವೇಳೆಯೂ ಗಾಯಗಳು ಆಗಿತ್ತು.

Read more on accident off beat
English summary
Kannada actor 'Lusia' fame Sathish Neenasam injured while car accident in Mandya.
Story first published: Thursday, February 1, 2018, 10:48 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark