ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

By Praveen

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ತನ್ನ ಬಹುನೀರಿಕ್ಷಿತ ನಿರೊ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯ ಪರಿಕಲ್ವನೆಯನ್ನು ಲಾಸ್ ವೆಗಾಸ್ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದೆ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಕಿಯಾ ಮೋಟಾರ್ಸ್ ಪ್ರದರ್ಶನಗೊಳಿಸಿರುವ ನಿರೊ ಎಸ್‌ಯುವಿ(ಪೆಟ್ರೋಲ್ ಮತ್ತು ಡೀಸೆಲ್) ಮಾದರಿಗಳು ಸದ್ಯ ದಕ್ಷಿಣ ಕೊರಿಯಾ ಸೇರಿದಂತೆ ಯುರೋಪಿನ ಕೆಲವು ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಈ ಹಿನ್ನೆಲೆ ನಿರೊ ಎಸ್‌ಯುವಿ ಮಾದರಿಯನ್ನೇ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಸ್ಪೋರ್ಟಿ ಏರೋ ಡೈನಾಮಿಕ್ ಸೇರಿದಂತೆ ವಿವಿಧ ಸೌಲಭ್ಯಗಳೊಂದಿಗೆ ಎಲೆಕ್ಟ್ರಿಕ್ ನಿರೊ ಆವೃತ್ತಿಗಳು ಅಭಿವೃದ್ಧಿಗೊಂಡಿದ್ದು, ಫ್ರಂಟ್ ಫಾಸಿಯಾ, ಬ್ಲ್ಯಾಕ್ ಲೊವರ್ ಬಾಡಿ ಕಿಟ್ ಮತ್ತು ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿದೆ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಜೊತೆಗೆ ಕಾರಿನ ಇಂಟಿರಿಯರ್ ವಿಭಾಗದಲ್ಲಿ ಹೆಚ್ಎಂಐ (ಹ್ಯುಮನ್ ಮಷಿನ್ ಇಂಟರ್‌ಫೇಸ್) ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಸುಧಾರಿತ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ವಿಚ್ ಗೇರ್, ಇಂಟರ್ ಆಕ್ಟಿವ್ ಲೈಟಿಂಗ್ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒದಗಿಸಲಾಗಿದೆ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಈ ಮೂಲಕ ಟೆಸ್ಲಾ ಕಾರುಗಳ ಹಿಂದಿಕ್ಕುವ ಯೋಜನೆ ಹೊಂದಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಒಂದೇ ಬಾರಿ ಚಾರ್ಜ್ ಮಾಡಿದಲ್ಲಿ 383 ಕಿಮಿ ಮೈಲೇಜ್ ನೀಡಬಲ್ಲ ಅತ್ಯಾಧುನಿಕ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ನೀಡಲಾಗಿದೆ.

Trending On DriveSpark Kannada:

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಹೀಗಾಗಿ ಕಿಯಾ ಮೋಟಾರ್ಸ್ ಅಭಿವೃದ್ಧಿಗೊಳಿಸಿರುವ ನಿರೊ ಎಲೆಕ್ಟ್ರಿಕ್ ಕಾರುಗಳು ಜಾಗತಿಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, 2018ರ ಅಂತ್ಯಕ್ಕೆ ಹೊಸ ಕಾರುಗಳು ಖರೀದಿಗೆ ಲಭ್ಯವಾಗಲಿವೆ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಆದ್ರೆ ಕಿಯಾ ನಿರೊ ಇವಿ ಕಾರುಗಳು ಭಾರತದಲ್ಲಿ ಸದ್ಯಕ್ಕೆ ಲಭ್ಯವಾಗಲ್ಲವಾದರೂ 2020ರ ವೇಳೆಗೆ ಭಾರತೀಯ ಮಾರುಕಟ್ಟೆಗೂ ಪರಿಚಯಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಟೆಸ್ಲಾ ಕೂಡಾ ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ನೀಡುತ್ತಿದ್ದು, ಕಿಯಾ ನಿರೊ ಎಲೆಕ್ಟ್ರಿಕ್ ಆವೃತ್ತಿಗಳು ಕೂಡಾ ಭಾರತ ಪ್ರವೇಶವನ್ನು ಅಲ್ಲಗಳೆಯುವಂತಿಲ್ಲ.

ಭಾರತಕ್ಕೂ ಬರಲಿದೆಯಾ ಕಿಯಾ ಮೋಟಾರ್ಸ್ ನಿರ್ಮಾಣದ ನಿರೊ ಎಲೆಕ್ಟ್ರಿಕ್ ಎಸ್‌ಯುವಿ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಗೆ ಹೊಸ ಪ್ರವೇಶ ಪಡೆಯುತ್ತಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವಿಶೇಷ ಒತ್ತು ನೀಡುತ್ತಿದ್ದು, ಪ್ರಯಾಣಿಕ ಕಾರುಗಳನ್ನು ಪರಿಚಯಿಸಿದ ನಂತರವಷ್ಟೇ ತನ್ನ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಕೂಡಾ ಬಿಡುಗಡೆ ಮಾಡಲಿದೆ.

Trending On DriveSpark Kannada:

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

Kannada
English summary
CES 2018: Kia Niro EV Concept Revealed.
Story first published: Wednesday, January 10, 2018, 19:13 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more