Subscribe to DriveSpark

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

Written By:
Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ಅತಿ ವೇಗದಲ್ಲಿದ್ದ ಫೋಕ್ಸ್‌ವ್ಯಾಗನ್ ಪುಂಟೊ ಕಾರೊಂದು ಎರಡು ಲಾರಿಗಳ ಮಧ್ಯೆ ಸಿಲುಕಿದ ಪರಿಣಾಮ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

To Follow DriveSpark On Facebook, Click The Like Button
ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಕೇರಳದ ಕೊಲ್ಲಂ ಬಳಿ ನಿನ್ನೆಯಷ್ಟೇ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರೊಂದು ಎರಡು ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದರೂ ಚಾಲಕ ಸೇರಿ ನಾಲ್ವರು ಪವಾಡ ಸದಶ್ಯ ಪಾರಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಇದಕ್ಕೆ ಕಾರಣ ಅತ್ಯುತ್ತಮ ಬಾಡಿ ಕಿಟ್ ಹೊಂದಿರುವ ಫೋರ್ಕ್ಸ್‌ವ್ಯಾಗನ್ ವೆಂಟೊ ಕಾರು ಭೀಕರ ಅಪಘಾತದಲ್ಲೂ ಪ್ರಯಾಣಿಕರನ್ನು ಸುರಕ್ಷಿಸುವಲ್ಲಿ ಸಫಲವಾಗಿದ್ದು, ಸಣ್ಣ ಪುಟ್ಟ ಗಾಯಗಳನ್ನು ಹೊರತು ಪಡಿಸಿ ಯಾವುದೇ ರೀತಿ ಪ್ರಾಣಾಪಾಯವಾಗದಂತೆ ರಕ್ಷಣೆ ನೀಡಿದೆ.

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಇನ್ನು ಕೊಲ್ಲಂ ಬಳಿ ನಡೆದಿರುವ ಈ ಅಪಘಾತವನ್ನು ಹಿಟ್ ಆ್ಯಂಡ್ ರನ್ ಎಂದು ಹೇಳಲಾಗುತ್ತಿದ್ದು, ವೇಗದಲ್ಲಿದ್ದ ಲಾರಿಯೊಂದು ಫೋಕ್ಸ್‌ವ್ಯಾಗನ್ ಕಾರಿನ ಹಿಂಭಾಗಕ್ಕೆ ವೇಗವಾಗಿ ಗುದ್ದಿದೆ. ಈ ವೇಳೆ ಕಾರಿನ ಮುಂದೆಯೇ ಇದ್ದ ಮತ್ತೊಂದು ಲಾರಿಗೆ ಕಾರು ಡಿಕ್ಕಿ ಹೊಡೆದೆ.

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಪರಿಣಾಮ ಕಾರಿನ ಮುಂಭಾಗ ಮತ್ತು ಹಿಂಭಾಗ ಎರಡು ಭಾಗಗಳು ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಎಂಜಿನ್ ಹಾಗೂ ಬೂಟ್ ಸ್ಪೆಸ್ ಕಿತ್ತು ಹೋಗಿವೆ. ಆದರೂ ಕಾರಿನಲ್ಲಿದ್ದವರು ಸುರಕ್ಷತವಾಗಿ ಪಾರಾಗಿರುವುದೇ ಅಚ್ಚರಿ.

Trending On DriveSpark Kannada:

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಭೀಕರ ಅಪಘಾತದಲ್ಲಿ ಫಾರ್ಚೂನರ್ ಪುಡಿ ಪುಡಿ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಲಭ್ಯವಾಗಿರುವ ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಅಪಘಾತದಲ್ಲಿ ಸಿಲುಕಿದ ಕಾರು ಕರ್ನಾಟಕ ನೋಂದಾಯಿತ ವಾಹನ ಎಂಬ ಮಾಹಿತಿ ಲಭ್ಯವಾಗಿದ್ದು, ಫೋರ್ಕ್ಸ್‌ವ್ಯಾಗನ್ ವೆಂಟೊ ಕಾರಿನ ಮಾಲೀಕರ ಕುರಿತು ಯಾವುದೇ ಹೆಚ್ಚುವರಿ ಮಾಹಿತಿಗಳು ಲಭ್ಯವಾಗಿಲ್ಲ.

ತಪ್ಪಿದ ನಿಯಂತ್ರಣ- ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಫೋಕ್ಸ್‌ವ್ಯಾಗನ್ ವೆಂಟೊ

ಒಟ್ಟಿನಲ್ಲಿ ಭೀಕರ ಅಪಘಾತದ ನಡುವೆಯು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿಗೆ ಕಾರಣವಾಗಿದ್ದು, ಬಲಿಷ್ಠ ಬಾಡಿ ಕಿಟ್ ಫೋಕ್ಸ್‌ವ್ಯಾಗನ್‌ ಕಾರುಗಳ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

English summary
Volkswagen Vento Smashed Between Two Trucks.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark