ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಸದ್ಯ ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಬಳಸದ ಬೈಕ್ ಸವಾರರ ವಿರುದ್ಧ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ಕೈಗೊಳ್ಳಲಾಗುತ್ತಿದ್ದು, ಈ ಮಧ್ಯೆ ಕ್ವಾಲಿಟಿ ಹೆಲ್ಮೆಟ್‌ಗಳನ್ನು ಬಳಸದ ಬೈಕ್ ಸವಾರರಿಗೆ ರಾಜ್ಯ ಹೈಕೋರ್ಟ್ ಮತ್ತೊಂದು ಶಾಕ್ ನೀಡಿದೆ.

By Praveen

Recommended Video

Bangalore Bike Accident At Chikkaballapur Near Nandi Upachar - DriveSpark

ಸದ್ಯ ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಬಳಸದ ಬೈಕ್ ಸವಾರರ ವಿರುದ್ಧ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ಕೈಗೊಳ್ಳಲಾಗುತ್ತಿದ್ದು, ಈ ಮಧ್ಯೆ ಕ್ವಾಲಿಟಿ ಹೆಲ್ಮೆಟ್‌ಗಳನ್ನು ಬಳಸದ ಬೈಕ್ ಸವಾರರಿಗೆ ರಾಜ್ಯ ಹೈಕೋರ್ಟ್ ಮತ್ತೊಂದು ಶಾಕ್ ನೀಡಿದೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಬಿಐಎಸ್ ಮತ್ತು ಐಎಸ್‌ಐ ಗುಣಮಟ್ಟ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್‌ಗಳ ವಿರುದ್ಧ ರಾಜ್ಯ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೆ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದ್ದು, ವಾಹನ ಸವಾರರ ರಕ್ಷಣೆಗೆ ಕಠಿಣ ಕ್ರಮಕೈಗೊಂಡಿದೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹೈರ್ಕೋಟ್ ತೀರ್ಪಿನಲ್ಲಿ ಏನಿದೆ?

"ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಧರಿಸದೇ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡರೆ ಅಥವಾ ಅಂಗ ಊನವಾದರೆ ಹಾಗೂ ಕಾರು ಚಾಲಕರು ಸೀಟ್‌ ಬೆಲ್ಟ್‌ ಹಾಕದಿದ್ದರೆ ವಿಮಾ ಕಂಪನಿ ವಿಮಾ ಹಣ ಪಾವತಿಸಬಾರದು' ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹೀಗಾಗಿ ಐಎಸ್ಐ ಮತ್ತು ಬಿಎಸ್ಐ ಗುಣಮಟ್ಟದ ಹೊಂದಿರದ ಹೆಲ್ಮೆಟ್‌ಗಳು ಧರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದ್ದು, ಕ್ವಾಲಿಟಿ ಹೊಂದಿರುವ ಹೆಲ್ಮೆಟ್‌ಗಳನ್ನೇ ಖರೀದಿ ಮಾಡಿ ಧರಿಸಬೇಕು ಎಂಬ ಸಲಹೆ ನೀಡಿದೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಇದಲ್ಲದೇ ಕಾರು ಚಾಲಕರು ಕೂಡಾ ಸೀಟ್‌ ಬೆಲ್ಟ್‌ ಹಾಕದಿದ್ದರೆ ವಿಮಾ ಕಂಪನಿ ವಿಮಾ ಹಣ ಪಾವತಿಸಬಾರದು ಎಂದಿರುವ ಹೈಕೋರ್ಟ್‌, " ದ್ವಿಚಕ್ರ ಸವಾರರು ಬಳಸುವ ಹೆಲ್ಮೆಟ್‌ಗಳ ಮೇಲೆ ಇಂಡಿಯನ್‌ ಬ್ಯೂರೊ ಆಫ್‌ ಸ್ಟ್ಯಾಂಡರ್ಡ್‌ ಸಂಖ್ಯೆ ಐಎಸ್‌ಐ 4151:1993 ಮುದ್ರೆಯೇ ಇರಬೇಕು" ಎಂದು ತೀರ್ಪಿನಲ್ಲಿ ಹೇಳಲಾಗಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ರಾಜ್ಯದ ಪ್ರತಿ ಹಳ್ಳಿಗೂ ಈ ನಿಯಮ ಅನ್ವಯ

ಹೌದು.. ಮೊದಲು ಈ ನಿಯಮ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಕಲಬುರ್ಗಿಯಲ್ಲಿ ಮಾತ್ರವೇ ಅನ್ವಯವಾಗುತ್ತಿತ್ತು. ಆದರೆ ಐಎಸ್ಐ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ವ್ಯಾಪ್ತಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

News Source:deccanherald

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹಾಫ್ ಹೆಲ್ಮೆಟ್‌ಗಳಲ್ಲಿ ಡೇಂಜರ್ ಕೆಮಿಕಲ್

ಈ ಹಿಂದೆ ಮೈಸೂರು ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಅವುಗಳನ್ನು ಈ ಹಿಂದೆ ವಶಪಡಿಸಿಕೊಂಡು ಪರಿಶೀಲಿಸಲಾಗಿ ಅವು ರಾಸಾಯನಿಕಗಳಿಂದ ಕೂಡಿದೆ ಎನ್ನುವುದು ಪತ್ತೆ ಹಚ್ಚಿದ್ದರು.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹೀಗಾಗಿ ಇವುಗಳನ್ನು ಧರಿಸಿದರೂ ಒಂದೇ ಧರಿಸದಿದ್ದರೂ ಒಂದೇ ಎಂದಿರುವ ಟ್ರಾಫಿಕ್ ಪೊಲೀಸರು, ಐಎಸ್ ಐ ಗುರುತಿಲ್ಲದ ಇಂಥಹ ಹೆಲ್ಮೆಟ್ ಗಳಿಂದ ಅಪಾಯವೇ ಜಾಸ್ತಿ ಆದ್ದರಿಂದ ಸೂಕ್ತ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹಾಗಾದ್ರೆ ಎಂತಹ ಹೆಲ್ಮೆಟ್‌ಗಳು ಧರಿಸಲು ಯೋಗ್ಯ?

ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಹಿನ್ನಲೆ ಬಹುತೇಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದಾದರೊಂದು ಹೆಲ್ಮೆಟ್ ಖರೀದಿಸಿ ಧರಿಸುತ್ತಾರೆ. ಆದ್ರೆ ಕ್ವಾಲಿಟಿ ಬಗ್ಗೆ ಅನೇಕರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಹೀಗಾಗಿ ಓದುಗರಿಗೆ ಸಹಾಯವಾಗುವ ದೃಷ್ಠಿಯಿಂದ ಎಂತಹ ಹೆಲ್ಮೆಟ್‌ಗಳನ್ನು ಧರಿಸಬೇಕೆಂಬ ಬಗ್ಗೆ ಇಲ್ಲಿ ಸಂಪೂರ್ಣ ವಿವರಣೆ ನೀಡಿದೆ ತಪ್ಪದೇ ಓದಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಸಂಪೂರ್ಣವಾಗಿ ಮುಖ ಆವರಿಸಿದ ಹೆಲ್ಮೆಟ್

ಹೆಲ್ಮೆಟ್ ಖರೀದಿ ವೇಳೆ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ, ಇದು ನಿಮ್ಮ ಮುಖ ಹಾಗೂ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಕೆಲವರು ಅಂದಚಂದವಾದ ಹೆಲ್ಮೆಟ್ ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಅಪಘಾತ ವೇಳೆಯಲ್ಲಿ ಇದು ನಿಮ್ಮ ನೆರವಿಗೆಬರಲಾರದು ಎಂಬುದನ್ನು ಗಮನಿಸಲು ಮರೆಯದಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಐಎಸ್‌ಐ ಮುದ್ರೆ

ನೀವು ಕೊಂಡುಕೊಳ್ಳುತ್ತಿರುವ ಶಿರಸ್ತ್ರಾಣ, ಇಂಡಿಯನ್ ಸ್ಟಾಂಡರ್ಡ್ ಇಸ್ಸ್ಟಿಟ್ಯೂಟ್‌ನಿಂದ (ಐಎಸ್‌ಐ) ಧೃಢೀಕರಣ ಪಡೆದುಕೊಂಡಿದ್ದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಹಾಗೆಯೇ ಗ್ಯಾರಂಟಿ ಇತ್ಯಾದಿ ವಿಚಾರಗಳ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದುಕೊಳ್ಳಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ರಸ್ತೆ ಬೀದಿಗಳಲ್ಲಿನ ಹೆಲ್ಮೆಟ್

ಕೆಲವರು ಅಗ್ಗದ ದರಕ್ಕೆ ಮನಸೋತು ರಸ್ತೆ ಬೀದಿಗಳಲ್ಲಿರುವ ಲಭಿಸುವ ಸಾಮಾನ್ಯ ಹೆಲ್ಮೆಟ್‌ಗೆ ಮೊರೆ ಹೋಗುತ್ತೇವೆ. ಗುಣಮಟ್ಟ ರಹಿತ ಇಂತಹ ಹೆಲ್ಮೆಟ್‌ಗಳ ಖರೀದಿ ಸ್ವಯಂ ಆಗಿ ಅಪಾಯವನ್ನು ಆಹ್ವಾನಿಸಿದಂತೆ.

Trending On DriveSpark Kannada:

ನಿಯಂತ್ರಣ ತಪ್ಪಿದ ಹೈ ಸ್ಪಿಡ್‌ ಕಾರು- ಎದುರಿಗೆ ಬರುತ್ತಿದ್ದ ಹಿರೋ ಬೈಕ್ ಪೀಸ್ ಪೀಸ್....

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಬಿಡಿಸುವ ಹೆಲ್ಮೆಟ್

ಹೆಲ್ಮೆಟ್ ಖರೀದಿ ವಿಷಯದಲ್ಲಿ ಗಮನ ವಹಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ನಿಮ್ಮ ಶಿರಸ್ತ್ರಾಣದ ಗಾಜುಗಳು ಬಿಡಿಸುವಂತಿರಬೇಕು. ಇದನ್ನು ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಹೊಂದಾಣಿಸಬಹುದಾಗಿದೆ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಸ್ಟೈಲಿಷ್ ಹೆಲ್ಮೆಟ್

ಕೆಲವೊಂದು ಬಾರಿ ಶೈಲಿ ಹಾಗೂ ವಿನ್ಯಾಸಕ್ಕೆ ಮಾರು ಹೋಗಿ ಅಸುರಕ್ಷಿತ ಹೆಲ್ಮೆಟ್‌ಗಳನ್ನು ನಮ್ಮ ಯುವ ಸಮೂಹ ಖರೀದಿಸುವ ಹಲವಾರು ಪ್ರಸಂಗಗಳನ್ನು ಗಮನಿಸಿರುತ್ತೇವೆ. ಆದರೆ ಹೆಲ್ಮೆಟ್‌ಗಳು ನಿಮ್ಮ ಜೀವರಕ್ಷಕ ಎಂಬುದನ್ನು ಮರೆಯದಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಕಪ್ಪು ಬಣ್ಣದ ಗ್ಲಾಸ್

ಯಾವುದೇ ಕಾರಣಕ್ಕೂ ಕಡು ಕಪ್ಪು ಬಣ್ಣದ ಹೆಲ್ಮೆಟ್ ಗಾಜುಗಳನ್ನು ಬಳಸದಿರಿ. ಇದು ಪಾರದರ್ಶಕತೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಹಾಗೊಂದು ವೇಳೆ ತೆಳು ಕಪ್ಪು ಬಣ್ಣವನ್ನು ಆಯ್ಕೆ ಮಾಡುವುದರಿಂದ ತಪ್ಪೇನಿಲ್ಲ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಗುಣಮಟ್ಟ ಪರೀಕ್ಷಿಸಿ

ಇವೆಲ್ಲದರ ಬಳಿಕ ಹೆಲ್ಮೆಟ್‌ಗೆ ಯಾವುದೇ ಡ್ಯಾಮೇಜ್ ಸಂಭವಿಸಿಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹೆಲ್ಮೆಟ್ ಒಳಮೈ

ಶಿರಸ್ತ್ರಾಣದ ಆಂತರಿಕ ಭಾಗಗಳ ವಿನ್ಯಾಸ ಹೇಗೆ ಗರಿಷ್ಠ ಮಟ್ಟದಲ್ಲಿರುತ್ತದೆಯೋ ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಪರಿಕರಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಯಾಕೆಂದರೆ ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಿದರೆ ಅದು ನಿಮ್ಮ ಕೂದಲುದುರುವಿಕೆಗೂ ಕಾರಣವಾಗಬಹುದು ಎಂಬುದರ ಬಗ್ಗೆ ಹುಷಾರಾಗಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಹೆಲ್ಮೆಟ್ ಗಾತ್ರ

ಇನ್ನು ನಿಮಗೆ ಆರಾಮದಾಯಕವಾಗುವ ರೀತಿಯಲ್ಲಿ ಹೆಲ್ಮೆಟ್ ಗಾತ್ರ ಹೊಂದಿರಬೇಕು. ಯಾವತ್ತೂ ತುಂಬಾನೇ ಬಿಗಿಯಾದ ಅಥವಾ ಸಡಿಲವಾದ ಶಿರಸ್ತ್ರಾಣ ಬಳಸದಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಕಡೆಯದಾಗಿ ಹೆಲ್ಮೆಟ್ ಲಾಕ್

ಏತನ್ಮಧ್ಯೆ ಹಲವಾರು ಪ್ರಕರಣಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಲಾಕ್ ಧರಿಸದೇ ಸವಾರಿ ಮಾಡುವ ಪ್ರಸಂಗ ಎದುರಾಗುತ್ತದೆ. ಹಾಗಾಗಿ ಹೆಲ್ಮೆಟ್ ಲಾಕ್ ಮಾಡಲು ಮರೆಯದಿರಿ. ಹೆಲ್ಮೆಟ್ ಸ್ವಿಚ್ ಸರಿಯಾಗಿ ಕೆಲಸ ನಿರ್ವಹಿಸುತ್ತದೆಯೇ ಎಂಬುದನ್ನು ಸಹ ಖಾತ್ರಿಪಡಿಸಬೇಕು. ಅಂತೆಯೇ ಕುತ್ತಿಗೆ ಹಾಗೂ ಹೆಲ್ಮೆಟ್ ಲಾಕ್ ನಡುವೆಸಾಕಷ್ಟು ಅಂತರವನ್ನು ಕಾಪಾಡಿರಿ.

ಐಎಸ್ಐ ಮುದ್ರಿತ ಹೆಲ್ಮೆಟ್, ಕಾರಿನ ಸೀಟ್ ಬೆಲ್ಟ್ ಬಳಸದ ವಾಹನ ಸವಾರರಿಗೆ ಹೈ ಕೋರ್ಟ್ ಶಾಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಆದರೆ ಹೆಲ್ಮೆಟ್ ಖರೀದಿ ವಿಷಯದಲ್ಲಿ ಖಂಜೂಸ್ ಮಾಡಿಕೂಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಿದರೆ ಒಳಿತು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on helmet driving tips
English summary
Insurance only if victim wears ISI-helmet: Karnataka HC
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X