ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಮಹೀಂದ್ರಾ ಸಂಸ್ಥೆಯು ಇನೋವಾ ಕ್ರಿಸ್ಟಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಮರಾಜೊ ಎಂಪಿವಿ ಕಾರು ಮಾದರಿಯನ್ನು ಕಳೆದ ತಿಂಗಳಷ್ಟೇ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆಗೆ ಕಾರಣವಾಗಿರುವ ಮರಾಜೊ ಕಾರುಗಳ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಶಾರ್ಕ್ ಡಿಸೈನ್ ಪ್ರೇರಿತ ಮರಾಜೊ ಕಾರುಗಳ ಖರೀದಿಗಾಗಿ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನಂಪ್ರತಿ 1 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಾಖಲಾಗುತ್ತಿದ್ದು, ಹೊಸ ಕಾರು ಖರೀದಿಸಲು ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ 6 ವಾರಗಳ ಕಾಲ ಕಾಯಲೇಬೇಕು ಎನ್ನಲಾಗಿದೆ. ಹೀಗಾಗಿ ಮರಾಜೊ ಕಾರಿನ ಮೇಲೆ ಹೆಚ್ಚು ಗಮನಹರಿಸಿರುವ ಮಹೀಂದ್ರಾ ಸಂಸ್ಥೆಯು ಕಾಯುವಿಕೆ ಅವಧಿಯನ್ನು ತಗ್ಗಿಸಲು ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನು ಸಿದ್ದಗೊಳಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಎಂ2, ಎಂ4, ಎಂ6 ಮತ್ತು ಎಂ8 ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮರಾಜೊ ಕಾರುಗಳು ಆರಂಭಿಕವಾಗಿ ರೂ. 9.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.13.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಸದ್ಯ ಹೊಸ ಮರಾಜೊ ಕಾರುಗಳಿಗಾಗಿ ದಾಖಲಾಗುತ್ತಿರುವ ಬುಕ್ಕಿಂಗ್‌ಗಳಲ್ಲಿ ಶೇ.80ಕ್ಕೂ ಹೆಚ್ಚು ಗ್ರಾಹಕರು ಟಾಪ್ ಎಂಡ್ ಮಾದರಿಯಾದ ಎಂ8 ವೆರಿಯೆಂಟ್‌ಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರು ಮರಾಜೊ ಖರೀದಿಗೆ ಒಲವು ತೋರುತ್ತಿದ್ದಾರೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಜೊತೆಗೆ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್ಸ್, ಆಕರ್ಷಕ ಬಂಪರ್, 17-ಇಂಚಿನ ಅಲಾಯ್ ಚಕ್ರಗಳು, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಕಾರಿನ ಹಿಂಭಾಗದ ಪ್ರೋಫೈಲ್‌ನಲ್ಲಿ ಶಾರ್ಕ್ ಎಲ್‌ಇಡಿ ಟೈಲ್ ಲೈಟ್ಸ್ , ಹೈ ಸ್ಟಾಪ್ ಲ್ಯಾಂಪ್ ಸೇರಿದಂತೆ ಸ್ಪೋರ್ಟಿ ರಿಯರ್ ಬಂಪರ್ ಪಡೆದಿದೆ.

MOST READ: ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಕಾರಿನ ಒಳಾಂಗಣ ವಿನ್ಯಾಸ

ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್‌ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್‌ ಕಮಾಂಡ್‌ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತುಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಸದ್ಯದಲ್ಲೇ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವರ್ಷನ್‌ಗಳು ಬಿಡುಗಡೆಯಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಕಾರಿನ ಮೇಲೆ ಗರಿಷ್ಠ ವಾರಂಟಿ

ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

ಮಹೀಂದ್ರಾ ಮರಾಜೊ ಕಾರು ಖರೀದಿ ಮಾಡಬೇಕಾದ್ರೆ ಇಷ್ಟು ದಿನ ಕಾಯಲೇಬೇಕಂತೆ..!

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮರಾಜೊ ಕಾರುಗಳು ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಭಾರೀ ಬೇಡಿಕೆ ಹುಟ್ಟುಹಾಕಿವೆ.

Most Read Articles

ಎಂಪಿವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಮಹೀಂದ್ರಾ ಮರಾಜೊ ಕಾರಿನ ಮತ್ತಷ್ಟು ಚಿತ್ರಗಳಿಗಾಗಿ ಈ ಫೋಟೋ ಗ್ಯಾಲರಿ ನೋಡಿ.

Kannada
Read more on mahindra mpv
English summary
Mahindra Marazzo MPV Commands A Waiting Period Of Up To Six Weeks.
Story first published: Monday, September 24, 2018, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X