ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ಮಹತ್ವದ ತಾಂತ್ರಿಕ ಅಂಶಗಳು ಸೋರಿಕೆ...
ಮಾರುತಿ ಸುಜುಕಿಯು ಸದ್ಯದಲ್ಲೇ ಡಿಜೈರ್ ಟೂರ್ ಎಸ್ ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಇಂಟಿರಿಯರ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.
ದೇಶಿಯ ಮಾರುಕಟ್ಟೆಯ ನಂ.1 ಮಾರುತಿ ಸುಜುಕಿಯು ಸದ್ಯದಲ್ಲೇ ಡಿಜೈರ್ ಟೂರ್ ಎಸ್ ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಇಂಟಿರಿಯರ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳನ್ನು ಬಿಡುಗಡೆಗೊಳಿಸಲು ಎದರು ನೋಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಇದಕ್ಕಾಗಿ ಸಜ್ಜುಗೊಳ್ಳುತ್ತಿದ್ದು, ಈ ನಡುವೆ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಮಹತ್ವದ ಮಾಹಿತಿಗಳು ಸೋರಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಮಾಹಿತಿಗಳ ಪ್ರಕಾರ ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು 1.2-ಲೀಟರ್ ಫ್ಲೆಕ್ಸ್ ಫ್ಯೂಲ್ ಎಂಜಿನ್ ಹೊಂದಿರಲಿವೆ ಎನ್ನಲಾಗಿದೆ.

ಇದರಿಂದ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ಮಾದರಿಯಲ್ಲೂ ಇಂಧನ ಬಳಕೆ ಮಾಡುವ ಅವಕಾಶವಿದ್ದು, ಪೆಟ್ರೋಲ್ ಬಳಕೆಯಲ್ಲಿ 82.8-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಸಿಎನ್‌ಜಿ ಬಳಸಿದಾಗ 74-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 2ನೇ ತಲೆಮಾರಿನ ಡಿಜೈರ್ ಟೂರ್ ಎಸ್ ಕಾರ್‌ಗಿಂತಲೂ ಸಿಎನ್‌ಜಿ ಆವೃತ್ತಿಯು ಭಾರೀ ಬದಲಾವಣೆ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಕೂಡಾ ಲಭ್ಯವಿರಲಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ವಿಶೇಷವಾಗಿ ಯೆಲ್ಲೊ ಬೋರ್ಡ್ ಬಳಕೆಯ ಗ್ರಾಹಕರಿಗಾಗಿಯೇ ಸಿದ್ದವಾಗಿದ್ದು, ಪ್ರತಿಗಂಟೆಗೆ 80 ಕಿ.ಮೀ ಸ್ಪೀಡ್ ಗರ್ವನರ್ ಅಳವಡಿಕೆಯನ್ನು ಹೊಂದಿರಲಿವೆ.

ಇನ್ನು ಕಾರಿನ ಒಳಭಾಗದ ವಿನ್ಯಾಸಗಳ ಬಗೆಗೆ ಹೇಳುವುದಾರೇ, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಫೈ, ಸುಧಾರಿತ ಮಾದರಿಯ ಸೀಟುಗಳು, ಡ್ಯುಯಲ್ ಟೋನ್ ಮಾದರಿ ಕ್ಯಾಬಿನ್ ವೈಶಿಷ್ಟ್ಯತೆಗಳು ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿಗೆ ಮತ್ತಷ್ಟು ಮೆರಗು ನೀಡಲಿವೆ.

ಮಧ್ಯಮ ಗಾತ್ರದ ಸೆಡಾನ್ ಕಾರುಗಳಲ್ಲಿ ಒದಗಿಸುವ ಪ್ಲಾಸ್ಟಿಕ್ ಗ್ರೀಲ್, ಸ್ವಿಲರ್ ಕಲರ್ ಸ್ಟೀಲ್ ವೀಲ್ಹ್, ಬ್ಲ್ಯಾಕ್ OVRMಗಳ ಅಳವಡಿಕೆ ಹೊಂದಿದ್ದರು ಕಾರಿನ ಬೆಲೆ ತಗ್ಗಿಸುವ ಉದ್ದೇಶದಿಂದ ಕೆಲ ಸುಧಾರಿತ ತಂತ್ರಜ್ಞಾನಗಳ ಸೌಲಭ್ಯಗಳನ್ನು ಇದರಲ್ಲಿ ಕೈಬಿಡಲಾಗಿದೆ.

ಆದ್ರೆ ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ರೀತಿಯ ಇಂಧನಗಳನ್ನು ಬಳಸಬಹುದಾದ ಸೌಲಭ್ಯದಿಂದಾಗಿ ಟ್ಯಾಕ್ಸಿ ಚಾಲಕರಿಗೆ ಇದು ವರವಾಗಿ ಪರಿಣಮಿಸಬಹುದಾಗಿದ್ದು, ವಾಯು ಮಾಲಿನ್ಯ ತಡೆಯಲು ಸಹ ಸಾಕಷ್ಟು ಸಹಕಾರಿಯಾಗಲಿದೆ.

ಬೆಲೆಗಳು (ಅಂದಾಜು)
ಟ್ಯಾಕ್ಸಿ ಚಾಲಕರಿಗೆ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರು ಅತ್ಯುತ್ತಮ ಆಯ್ಕೆಯಾಗಿದ್ದು, ಇದರ ಬೆಲೆಯನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 5.97 ಲಕ್ಷಕ್ಕೆ ದೊರೆಯಲಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈಗಾಗಲೇ ದೇಶಾದ್ಯಂತ ಟ್ಯಾಕ್ಸಿ ಚಾಲಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಡಿಜೈರ್ ಟೂರ್ ಎಸ್ ಕಾರುಗಳು ಗ್ರಾಹಕರಿಗೂ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿವೆ. ಇದೀಗ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ರಸ್ತೆಗಿಳಿಯುವ ಮೂಲಕ ಮತ್ತಷ್ಟು ಜನಪ್ರಿಯವಾಗುವ ತವಕದಲ್ಲಿದ್ದು, ಮುಂದಿನ ತಿಂಗಳು ಮೊದಲ ವಾರ ಇಲ್ಲವೇ ತಿಂಗಳು ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
01.ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್ ಮೆಡ್ 1000 ಸಿಸಿ ಬೈಕ್ ಇದು..
02. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!
03. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
04. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..


Click it and Unblock the Notifications