ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿಯು ಸದ್ಯದಲ್ಲೇ ಡಿಜೈರ್ ಟೂರ್ ಎಸ್ ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ದಾಖಲೆಗಳು ಸೋರಿಕೆಯಾಗಿವೆ.

By Praveen Sannamani

ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳನ್ನು ಬಿಡುಗಡೆಗೊಳಿಸಲು ಎದರು ನೋಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಇದಕ್ಕಾಗಿ ಸಜ್ಜುಗೊಳ್ಳುತ್ತಿದ್ದು, ಈ ನಡುವೆ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಕೈಪಿಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಮಾಹಿತಿಗಳ ಪ್ರಕಾರ ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು 1.2-ಲೀಟರ್ ಫ್ಲೆಕ್ಸ್ ಫ್ಯೂಲ್ ಎಂಜಿನ್ ಹೊಂದಿರಲಿವೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಇದರಿಂದ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ಮಾದರಿಯಲ್ಲೂ ಇಂಧನ ಬಳಕೆ ಮಾಡುವ ಅವಕಾಶವಿದ್ದು, ಪೆಟ್ರೋಲ್ ಬಳಕೆಯಲ್ಲಿ 82.8-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಸಿಎನ್‌ಜಿ ಬಳಸಿದಾಗ 74-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 2ನೇ ತಲೆಮಾರಿನ ಡಿಜೈರ್ ಟೂರ್ ಎಸ್ ಕಾರ್‌ಗಿಂತಲೂ ಸಿಎನ್‌ಜಿ ಆವೃತ್ತಿಯು ಭಾರೀ ಬದಲಾವಣೆ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಕೂಡಾ ಲಭ್ಯವಿರಲಿದೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ವಿಶೇಷವಾಗಿ ಯೆಲ್ಲೊ ಬೋರ್ಡ್ ಬಳಕೆಯ ಗ್ರಾಹಕರಿಗಾಗಿ ಸಿದ್ದವಾಗಿದ್ದು, ಪ್ರತಿಗಂಟೆಗೆ 80 ಕಿ.ಮೀ ಸ್ಪೀಡ್ ಗರ್ವನರ್ ಅಳವಡಿಕೆಯನ್ನು ಹೊಂದಿರಲಿವೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಇನ್ನು ಕಾರಿನ ಒಳಭಾಗದ ವಿನ್ಯಾಸಗಳ ಬಗೆಗೆ ಹೇಳುವುದಾರೇ, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಫೈ, ಸುಧಾರಿತ ಮಾದರಿಯ ಸೀಟುಗಳು, ಡ್ಯುಯಲ್ ಟೋನ್ ಮಾದರಿ ಕ್ಯಾಬಿನ್ ವೈಶಿಷ್ಟ್ಯತೆಗಳು ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿಗೆ ಮತ್ತಷ್ಟು ಮೆರಗು ನೀಡಲಿವೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಮಧ್ಯಮ ಗಾತ್ರದ ಸೆಡಾನ್ ಕಾರುಗಳಲ್ಲಿ ಒದಗಿಸುವ ಪ್ಲಾಸ್ಟಿಕ್ ಗ್ರೀಲ್, ಸ್ವಿಲರ್ ಕಲರ್ ಸ್ಟೀಲ್ ವೀಲ್ಹ್, ಬ್ಲ್ಯಾಕ್ OVRMಗಳ ಅಳವಡಿಕೆ ಹೊಂದಿದ್ದರು ಕಾರಿನ ಬೆಲೆ ತಗ್ಗಿಸುವ ಉದ್ದೇಶದಿಂದ ಕೆಲ ಸುಧಾರಿತ ತಂತ್ರಜ್ಞಾನಗಳ ಸೌಲಭ್ಯಗಳನ್ನು ಕೈಬಿಡಲಾಗಿದೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಆದ್ರೆ ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ರೀತಿಯ ಇಂಧನಗಳನ್ನು ಬಳಸಬಹುದಾದ ಸೌಲಭ್ಯದಿಂದಾಗಿ ಟ್ಯಾಕ್ಸಿ ಚಾಲಕರಿಗೆ ವರವಾಗಿ ಪರಿಣಮಿಸಬಹುದಾಗಿದ್ದು, ವಾಯು ಮಾಲಿನ್ಯ ತಡೆಯಲು ಸಹ ಸಾಕಷ್ಟು ಸಹಕಾರಿಯಾಗಲಿದೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಲಾಭಾಂಶ

ಹೌದು, ಪೆಟ್ರೋಲ್ ಜೊತೆ ಜೊತೆಗೆ ಸಿಎನ್‌ಜಿ ಬಳಕೆ ಮಾಡುವ ಮೂಲಕ ಕಾರುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಬಹುದಾಗಿದ್ದು, ಇದರಿಂದ ಟ್ಯಾಕ್ಸಿ ಚಾಲಕರ ಆದಾಯವು ಪರೋಕ್ಷವಾಗಿ ಹೆಚ್ಚಳವಾಗಲಿದೆ ಎನ್ನಬಹುದು.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಕಾರಿನ ಬೆಲೆಗಳು (ಅಂದಾಜು)

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಜೈರ್ ಟೂರ್ ಎಸ್ ಕಾರುಗಳು ಎಕ್ಸ್ ಶೋರಂ ಪ್ರಕಾರ ರೂ. 5.24 ಲಕ್ಷದಿಂದ ಆರಂಭವಾಗಲಿದ್ದು, ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ಸಹ ಎಕ್ಸ್‌ಶೋರಂ ಪ್ರಕಾರ 5.20 ಲಕ್ಷದಿಂದ ಆರಂಭವಾಗಲಿವೆ.

ಬಿಡುಗಡೆಯಾಗಲಿರುವ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ವಿಶೇಷತೆ ಏನು?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ದೇಶಾದ್ಯಂತ ಟ್ಯಾಕ್ಸಿ ಚಾಲಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಡಿಜೈರ್ ಟೂರ್ ಎಸ್ ಕಾರುಗಳು ಗ್ರಾಹಕರಿಗೂ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದು, ಇದೀಗ ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ರಸ್ತೆಗಿಳಿಯುವ ಮೂಲಕ ಮತ್ತಷ್ಟು ಜನಪ್ರಿಯವಾಗುವ ತವಕದಲ್ಲಿವೆ.

Most Read Articles

Kannada
Read more on maruti suzuki dzire
English summary
Maruti Dzire Tour S CNG Specifications Leaked Ahead Of Launch.
Story first published: Monday, March 19, 2018, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X