ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಝೆಡ್ಎಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

By Praveen

Recommended Video

Tata Nexon Faces Its First Recorded Crash

ಚೀನಾ ಮೂಲದ ಸೈಕ್ ಸಂಸ್ಥೆಯ ಅಧೀನದಲ್ಲಿರುವ ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಝೆಡ್ಎಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಕಳೆದ 3 ತಿಂಗಳ ಹಿಂದಷ್ಟೇ ಎಂಜಿ ಮೋಟಾರ್ಸ್ ಸಂಸ್ಥೆಯು ಗುಜರಾತ್‌ನಲ್ಲಿ 2 ಸಾವಿರ ಕೋಟಿ ಬಂಡವಾಳದೊಂದಿಗೆ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದು, ಇದೀಗ ಹೊಸ ಕಾರು ಉತ್ಪನ್ನಗಳ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸಿದೆ.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಈ ಮೂಲಕ ಮೊದಲ ಹಂತದಲ್ಲೇ ವಿನೂತನ ಶೈಲಿಯ ಎಸ್‌ಯುವಿಯೊಂದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಉತ್ಸುಕವಾಗಿರುವ ಎಂಜಿ ಮೋಟಾರ್ಸ್, ಜನಪ್ರಿಯ ಹ್ಯುಂಡೈ ಕ್ರೇಟಾ ಎಸ್‌ಯುವಿ ಪ್ರಬಲ ಪ್ರತಿ ಸ್ಪರ್ಧಿಯಾಗುವ ನೀರಿಕ್ಷೆಯಿದೆ.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಇನ್ನು ಎಂಜಿ ಮೋಟಾರ್ಸ್ ನಿರ್ಮಾಣ ಮಾಡಿರುವ ಝೆಡ್‌ಎಸ್ ಎಸ್‌ಯುವಿ ಹಲವು ವಿಶೇಷತೆಗಳನ್ನು ಹೊಂದಿದ್ದು, ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಹೊಂದಿರಲಿದೆ. ಹೀಗಾಗಿ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇಷ್ಟಪಡುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ ಎನ್ನಬಹುದು.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಎಂಜಿನ್ ಸಾಮರ್ಥ್ಯ

ಸದ್ಯ ಯುಕೆನಲ್ಲಿ ಮಾರಾಟವಾಗುತ್ತಿರುವ ಝೆಡ್ಎಸ್ ಆವೃತ್ತಿಗಳು ಪೆಟ್ರೋಲ್ ಎಂಜಿನ್‌ನಲ್ಲೇ ಎರಡು ಆಯ್ಕೆಗಳನ್ನು ಹೊಂದಿದ್ದು, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್ ಅಳವಡಿಕೆ ಇದೆ.

Trending On DriveSpark Kannada:

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

2018ರ ಮಾರುತಿ ಸುಜುಕಿ ಸ್ವಿಫ್ಟ್ ಕುರಿತು ತಿಳಿದುಕೊಳ್ಳಬೇಕಾದ 5 ಪ್ರಮುಖ ವಿಚಾರಗಳಿವು....

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಝೆಡ್ಎಸ್ ಮಾದರಿಯಲ್ಲೂ ಮೇಲಿನ ರೀತಿಯ ಎಂಜಿನ್ ಒದಗಿಸಲಾಗಿದ್ದು, 1.0 -ಲೀಟರ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 1.5-ಲೀಟರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿವೆ.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಇದರೊಂದಿಗೆ ಸ್ಪೋರ್ಟ್ ಮಾದರಿಯ ಲಾರ್ಜ್ ಗ್ರೀಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಆ್ಯಂಡ್ ಡಿಆರ್‌ಎಲ್ಎಸ್ ಸ್ಕಿಡ್ ಪ್ಲೆಟ್, ರೂಫ್ ಮೌಂಟೆಂಡ್ ಸ್ಪ್ಲಾಲರ್, ಡ್ಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜುಗೊಂಡ ಎಂಜಿ ಮೋಟಾರ್ಸ್ ಮೊದಲ ಎಸ್‌ಯುವಿ ಝೆಡ್ಎಸ್..!

ಬೆಲೆ (ಅಂದಾಜು)

ಕಾರುಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡಿರುವ ಎಂಜಿ ಮೋಟಾರ್ಸ್ ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೀಗಾಗಿ ಹೊಸ ಕಾರಿನ ಬೆಲೆಯನ್ನು ರೂ.12 ಲಕ್ಷ ದಿಂದ ರೂ.16 ಲಕ್ಷದವರೆಗೆ ನಿಗದಿ ಮಾಡಬಹುದಾದ ನೀರಿಕ್ಷೆಯಿದ್ದು, 2ನೇ ತ್ರೈಮಾಸಿಕ ಅವಧಿಗೆ ಖರೀದಿಗೆ ಲಭ್ಯವಾಗಲಿವೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
MG Motors ZS SUV India Launch Details Revealed.
Story first published: Thursday, January 25, 2018, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X