ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

Written By:

ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಮುಂದಿನ ಪೀಳಿಗೆಯ ಅಮೇಜ್ ಆವೃತ್ತಿಗಳನ್ನು 2018ರ ಅಟೋ ಎಕ್ಸ್‌ ಪೋದಲ್ಲಿ ಭರ್ಜರಿಯಾಗಿ ಪ್ರದರ್ಶನ ಮಾಡಿದ್ದು, ಥೈಲ್ಯಾಂಡ್‌ನಲ್ಲಿರುವ ಹೋಂಡಾದ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದಲ್ಲಿ ಹೊಸ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಸೆಡಾನ್ ಆವೃತ್ತಿಗಳಲ್ಲಿರುವ ತನ್ನ ಕಾರು ಮಾದರಿಗಳ ಉನ್ನತ್ತೀಕರಣಕ್ಕಾಗಿ ವಿಶೇಷ ಯೋಜನೆ ರೂಪಿಸುತ್ತಿರುವ ಹೋಂಡಾ ಸಂಸ್ಥೆಯು ಅಮೇಜ್ ಸೇರಿದಂತೆ ಎಲ್ಲಾ ಮಾದರಿಗಳಲ್ಲೂ ವಿನೂತನ ತಂತ್ರಜ್ಞಾನ ಪರಿಚಯಿಸುವ ಮೂಲಕ ಸೆಡಾನ್ ಪ್ರಿಯರಿಗೆ ಹೊಸ ಚಾಲನಾ ಅನುಭವ ಒದಗಿಸುತ್ತಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಹೀಗಾಗಿಯೇ 2018ರ ಅಮೇಜ್ ಸಬ್ ಕಂಪ್ಯಾಕ್ಟ್ ಸೆಡಾನ್ ಕಾರುಗಳಿಗೆ ಹೊಸ ರೂಪ ನೀಡಿರುವ ಹೋಂಡಾ, ಸ್ಪೋಟಿ ಲುಕ್ ಜೊತೆಗೆ ಶಾರ್ಪ್ ಎಡ್ಜ್ ಮೂಲಕ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲು ತವಕವದಲ್ಲಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಇನ್ನು ಹೊಸ ಅಮೇಜ್‌ಗೆ ರಾಜಸ್ತಾನದ ತಪುಕರಾ ಘಟಕದಿಂದಲೇ ಡೀಸೆಲ್ ಎಂಜಿನ್‌‌ಗಳು ಪೂರೈಕೆಯಾಗಲಿದ್ದು, ಸಬ್‌ ಕಾಂಪ್ಯಾಕ್ಟ್ ಸೆಡಾನ್‌ ಆಗಿರುವ ಹೊಸ ಅಮೇಜ್ 1.5 ಲೀಟರ್‌ ಡೀಸೆಲ್‌ ಎಂಜಿನ್‌ ಹೊಂದಿರಲಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಹಾಗೆಯೇ ಪೆಟ್ರೋಲ್‌ ಮಾದರಿಯು ಕೂಡಾ 1.2-ಲೀಟರ್‌ ಎಂಜಿನ್‌ ಹೊಂದಿದ್ದು, ಹೊಸದಾಗಿ 7 ಇಂಚಿನ ಡಿಜಿಪ್ಯಾಡ್‌ ಟಚ್‌ಸ್ಕ್ರೀನ್‌ ಮತ್ತು ಇನ್‌ಫೋಟೈನ್‌ಮೆಂಟ್‌ ಸಿಸ್ಟಂ ಇದರಲ್ಲಿರಲಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಇದು ಸ್ಮಾರ್ಟ್‌ಫೋನ್‌ ಇಂಟಿಗ್ರೇಷನ್‌, ನೇವಿಗೇಶನ್‌ ಸೇರಿದಂತೆ ಹಲವಾರು ಫೀಚರ್‌ಗಳಿಗೆ ಅನುಕೂಲ ಮಾಡಿಕೊಡಲಿದ್ದು, ಹೋಂಡಾ ಸಿಟಿಯ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಿದ್ದರೂ, ಇನ್ನಷ್ಟು ಆಕರ್ಷಕವಾಗಿದೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಬಿಡುಗಡೆ ಯಾವಾಗ?

ಈ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಇದು ಬರುವ ನಿರೀಕ್ಷೆಯಿದ್ದು, ಸದ್ಯ ಕಾರು ಮಾದರಿಗಿಂತ ತುಸು ದುಬಾರಿ ಬೆಲೆ ಹೊಂದಿರಲಿವೆ.

ಆಟೋ ಎಕ್ಸ್ ಪೋ 2018: ಮುಂದಿನ ಪೀಳಿಗೆಯ ಅಮೇಜ್ ಪರಿಚಯಿಸಿದ ಹೋಂಡಾ

ಒಟ್ಟಿನಲ್ಲಿ ಮಾರುತಿ ಸುಜುಕಿ ಡಿಜೈರ್‌ನ ಯಶಸ್ಸಿನಿಂದ ಪ್ರಭಾವಿತವಾಗಿರುವ ಹೋಂಡಾ ಸಂಸ್ಥೆಯು ಅಮೇಜ್ ಸೆಡಾನ್‌‌ಗೆ ಹೊಸ ರೂಪ ನೀಡಿದ್ದು, ಎಂಜಿನ್‌ ಇನ್ನಷ್ಟು ಇಂಧನ ಕ್ಷಮತೆ ಸಾಧಿಸುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಗಳನ್ನು ಮಾಡಲಾಗಿದೆ.

Read more on honda cars auto expo 2018
English summary
Auto Expo 2018: New Honda Amaze Revealed - To Rival The Maruti Dzire.
Story first published: Friday, February 9, 2018, 16:28 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark