ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

Written By: Rahul TS

ಜಪಾನ್ ಮೂಲದ ಮೋಟಾರ್ಸ್ ಸಂಸ್ಥೆ ಹೋಂಡಾ ತನ್ನ ಸಿಆರ್-ವಿ ಕಾರಿನ ಡೀಸೆಲ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಬಿಡುಗಡೆಯ ನಂತರ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಡೀಸೆಲ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

ಈ ಬಗ್ಗೆ ಮಾತನಾಡಿರುವ ಹೊಂಡಾ ಇಂಡಿಯಾ ಮುಖ್ಯಸ್ಥ ಯೊಯಿಚೈರೊ ಯುನೊ, "ಸಿಆರ್-ವಿ ಕಾರಿನ ಡೀಸೆಲ್ ಆವೃತ್ತಿಯ ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿರಲಿದೆ ಎಂದಿದ್ದಾರೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

ಇನ್ನು ಥಾಯ್‍‍ಲ್ಯಾಂಡ್ ಮಾರುಕಟ್ಟೆಯಲ್ಲಿ 2018ರ ಹೋಂಡಾ ಸಿಆರ್-ವಿ ಕಾರು 158 ಬಿಹೆಚ್‍‍ಪಿ ಶಕ್ತಿ ಪಡೆಯಬಲ್ಲ 1.6-ಲೀಟರ್ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್‍ ಅನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆ ಮೇರೆಗೆ ಡೀಸೆಲ್ ವಿಶೇಷಣಗಳನ್ನೊಳಗೊಂಡ ಡಿ ಟ್ಯೂನ್ಡ್ ವರ್ಷನ್ ಬಿಡುಗಡೆ ಮಾಡಲಾಗುತ್ತಿದೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

ಸದ್ಯ ಫಿಲಿಫೈನ್ಸ್ ನಲ್ಲಿ ಮಾರಾಟಗೊಳ್ಳುತ್ತಿರುವ 118 ಬಿಹೆಚ್‍‍ಪಿ ಆವೃತ್ತಿಯನ್ನೇ ಭಾರತದಲ್ಲಿಯು ಸಹ ಪರಿಚಯಿಸಬಹುದು ಎನ್ನಲಾಗಿದೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

158 ಬಿಹೆಚ್‍ಪಿ ಆವೃತ್ತಿಯು ಎರಡು ಟರ್ಬೋಚಾರ್ಜ್ ಮತ್ತು 118 ಬಿಹೆಚ್‍ಪಿ ಸಿಂಗಲ್ ಟರ್ಬೋ ಆವೃತ್ತಿಗಳಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, 118 ಬಿಹೆಚ್‍ಪಿ ಸಿಂಗಲ್ ಟರ್ಬೋ ಎಂಜಿನ್ 300 ಎನ್ಎಂ ಟಾರ್ಕ್ ಉತ್ಪಾದನೆ ಮತ್ತು 158 ಬಿಹೆಚ್‍ಪಿ 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರುತ್ತದೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

ಕಾರಿನ ಸಿಂಗಲ್ ಟರ್ಬೋ ಎಂಜಿನ್ 11.2 ಸೆಕೆಂಡಿಗೆ 0-100kph, ಮತ್ತು ಟ್ವಿನ್ ಟರ್ಬೋ ಡೀಸೆಲ್ ಯುನಿಟ್ 9.7 ಸೆಕೆಂಡಿಗೆ ಸ್ಪೀಡ್‍‍ನಲ್ಲಿ ಚಲಾಯಿಸಬಹುದಾದ ಸಾಮರ್ಥ್ಯವನ್ನು ಪಡೆಯಲಿದ್ದು, ಎರಡೂ ಎಂಜಿನ್ ಆವೃತ್ತಿಯನ್ನು 9 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅನಾವರಣಗೊಂಡ ಹೋಂಡಾ ಸಿಆರ್-ವಿ ಡೀಸೆಲ್ ಆವೃತ್ತಿ

ಭಾರತದಲ್ಲಿನ ಗ್ರಾಹಕರ ಆಸಕ್ತಿಗೆ ತಕ್ಕಂತೆ ಹೋಂಡಾ ಸಂಸ್ಥೆಯು ಈ ಕಾರನ್ನು ತಯಾರಿಸಲಾಗಿದ್ದು, ಇನ್ನು ಎಸ್‍ಯುವಿ ಕಾರಿನ ಬಿಡುಗಡೆಯ ನಂತರ ಯಾವ ಮಟ್ಟದ ಯಶಸ್ವಿಯನ್ನು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.

Read more on honda cars
English summary
India-Spec New Honda CR-V Diesel Specifications Revealed.
Story first published: Tuesday, March 6, 2018, 18:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark