TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಳ್ಳಲಿದೆ ಹೊಸ ಮಾರುತಿ ಸಿಯಾಜ್ ಕಾರು..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಸಿಯಾಜ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸುವ ತವಕದಲಿದ್ದು, ಸಿ-ಸೆಗ್ಮೆಂಟ್ ಸೆಡಾನ್ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಪ್ರೀಮಿಯಮ್ ಸೆಡಾನ್ ಆವೃತ್ತಿಯಲ್ಲಿ ಮಾರುಕಟ್ಟೆಗೆ ಕಾಲಿಡಲಿರುವ ಈ ಕಾರು ಆಕರ್ಷಕ ವಿನ್ಯಾಸವನ್ನು ಪಡೆದಿದೆ.
ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದ್ದು, ಮಾರುತಿ ಸುಜುಕಿ ಪ್ರತಿಸ್ಪರ್ಧಿಗಳ ಪೈಕಿ ಒಂದು ಕಾರಿನ ಬಿಡುಗಡೆಯ ನಂತರ ಸಿಯಾಜ್ ಕಾರನ್ನು ಬಿಡುಗಡೆಗೊಳಿಸಲು ಸಂಸ್ಥೆಯು ತೀರ್ಮಾನಿಸಿದೆ.
ನೆಕ್ಸಾ ಸಂಸ್ಥೆಯು ಬಿಡುಗಡೆಗೊಳಿಸಿದ ಟೀಸರ್‍ನ ಪ್ರಕಾರ ಸಿಯಾಜ್ ಕಾರು ಇಂಟಿಗ್ರೇಟೆಡ್ ಸ್ಲೀಕ್ ಎಲ್‍ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಫ್ರಂಟ್ ಗ್ರಿಲ್‍ನೊಂದಿಗೆ ಶಾರ್ಪ್ ಹೆಡ್‍ಲ್ಯಾಂಪ್ ಅನ್ನು ಪಡೆದಿರಲಿದ್ದು, ಟೀಸರ್‍ನ ಪ್ರಕಾರ ಇವುಗಳನ್ನು ಹೊರತು ಪಡಿಸಿ ವಿನ್ಯಾಸದಲ್ಲಿ ಬೇರಾವ ಬದಲಾವಣೆಯನ್ನು ಪಡೆದಿರುವುದಿಲ್ಲ ಎನ್ನಬಹುದು.
ಆದರೆ ತಾಂತ್ರಿಕತೆಯಲ್ಲಿ ಬದಲಾವಣೆಯನ್ನು ಕಾಣಬಹುದಾಗಿದ್ದು, ಈ ಬಾರಿ ಸಿಯಾಜ್ ಕಾರಿನಲ್ಲಿ 1.5 ಲೀಟರ್ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 104ಬಿಹೆಚ್‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.
|
ಸಿಯಾಜ್ ಕಾರಿನಲ್ಲಿ ಅಳವಡಿಸಲಾಗಿರುವ ಹೊಸ ಪೆಟ್ರೋಲ್ ಎಂಜಿನ್ ಎಸ್‍ಹೆಚ್‍ವಿಎಸ್ (ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಮ್) ಮೈಕ್ರೊ-ಹೈಬ್ರಿಡ್ ಟೆಕ್ನಾಲಜಿಯನ್ನು ಪಡೆದುಕೊಂಡಿರಲಿದೆ.
ಇನ್ನು ಡೀಸೆಲ್ ಮಾದರಿಯ ಸಿಯಾಜ್ ಫೇಸ್‍ಲಿಫ್ಟ್ ಕಾರುನ್ 1.3 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಸಹಯದಿಂದ 83ಬಿಹೆಚ್‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಬಿಡುಗಡೆಗೊಳ್ಳಲಿರುವ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಶೀಘ್ರವೇ ಪ್ರಾರಂಭವಾಗಲಿದ್ದು, ಹೊಸ ಸಿಯಾಜ್ ಕಾರು ಪ್ರಮುಖ ಬದಾಲವಣೆಯನ್ನು ಪಡೆದಿಲ್ಲದಿದ್ದು, ಕಾರಿನ ಬೆಲೆಯು ಹಿಂದಿನ ತಲೆಮಾರಿನ ಕಾರಿನಂತೆಯೆ ಇರಲಿದೆ.
ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ ತಮ್ಮ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದು, ಕಾರಿನ ವಿನ್ಯಾಸವನ್ನು ಇದರಲ್ಲಿ ತೋರಿಸಲಾಗಿದೆ. ತನ್ನ ಹೊಂದಿನ ತಲೆಮಾರಿನ ಸಿಯಾಜ್ ಕಾರಿಗಿಂತ ಈ ಬಾರಿ ಗುರುತರ ಬದಲಾವಣೆಗಳನ್ನು ಪಡೆದಿರಲಿದ್ದು, ಎಂಜಿನ್‍ಗೆ ಹೈ-ಹೈಬ್ರಿಡ್ ಟೆಕ್ನಾಲಜಿಯನ್ನು ಬಳಸಿರುವುದು ಮತ್ತೊಂದು ವಿಶೇಷ. ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಗೊಂಡಲ್ಲಿ ಹೋಂಡಾ ಸಿಟಿ, ಟೊಯೊಟಾ ಯಾರಿಸ್, ಸ್ಕೋಡಾ ರ್‍ಯಾಪಿಡ್, ಹ್ಯುಂಡೈ ವೆರ್ನಾ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರಿಗೆ ಪೈಪೋಟಿ ನೀಡಲಿದೆ.