ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಮುಂದಿನ ತಲೆಮಾರಿನ ಎರ್ಟಿಗಾ ಕಾರನ್ನು ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದ್ದು, ದೇಶದಲ್ಲಿನ ಕೆಲ ಡೀಲರ್‍‍‍ಗಳು ಹೊಸ ಎರ್ಟಿಗಾ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೆ ಶುರು ಮಾಡಲಾಗಿದೆ ಎನ್ನಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಇನ್ನೂ ಮಾರುತಿ ಸುಜುಕಿ ಸಂಸ್ಥೆಯು ಹೊಸ ಕಾರಿನ ಖರೀದಿಗಾಗಿ ಅಧಿಕೃತ ಬುಕ್ಕಿಂಗ್ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಲಿಲ್ಲ. ಮಾರುಕಟ್ಟೆಗೆ ಲಗ್ಗೆಯಿಡಲಿರುವ ಈ ಮಾರುತಿ ಸುಜುಕಿ ಎರ್ಟಿಗಾ ಕಾರು ಈ ಬಾರಿ ದೇಶಿಯವಾಗಿ ತಯಾರಿಗೊಳ್ಳುತ್ತಿರುವು ಮತ್ತೊಂದು ವಿಶೇಷ. ಪ್ಲಾಂಟ್ ಒಂದರಲ್ಲಿ ಎರ್ಟಿಗಾ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಆ ಚಿತ್ರಗಳು ಮತ್ತು ಕಾರಿನ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಹೊಸ ವಿನ್ಯಾಸ

ಎರ್ಟಿಗಾ ಎಮ್‍‍ಪಿವಿ ಕಾರು ಈ ಬಾರಿ ಹೊಸ ವಿನ್ಯಾಸವನ್ನು ಪಡೆದುಕೊಂಡಿರಲಿದೆ. ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ. ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಮ್‍‍ಪಿವಿ ಕಾರಿಗಿಂತಲೂ ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಹೊಸ ಇಂಟೀರಿಯರ್

ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್‍‍ನಲ್ಲಿ ಲೆಧರ್ ಸೀಟ್‍‍ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಉಪಕರಣಗಳು

ಕಳೆದ ದಿನಗಳ ಹಿಂದೆ ಬಿಡುಗಡೆಗೊಂಡ ಡಿಜೈರ್ ಕಾರಿನಲ್ಲಿ ಬಳಸಲಾದ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ. ಈ ಉಪಕರಣವು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಬ್ಲೂತೂತ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆಧರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಎಮ್‍‍ಪಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ ಎರ್ಟಿಗಾ ಕಾರು ಹಳೆಯ ಮಾದರಿಯಲ್ಲಿನ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್‍‍ನ ಜಾಗದಲ್ಲಿ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೊಸ ಎಂಜಿನ್ ಅನ್ನು ಹೊರತು ಪಡಿಸಿ, ಸಿಯಾಜ್ ಕಾರಿನಲ್ಲಿ ಬಳಸಲಾದ 103 ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಜೊತೆಗೆ ಎರಡು ಎಂಜಿನ್‍‍ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಗೇರ್ ಬಾಕ್ಸ್

ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಈ ಕಾರು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು.?

ಹೊಸ ಕಾರಿನ ಬೆಲೆ (ಅಂದಾಜು)

ಬಿಡುಗಡೆಗೊಳ್ಳಲಿರುವ ಹೊಸ ಎರ್ಟೀಗಾ ಎಮ್‍‍ಪಿವಿ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೊ ಎಮ್‍‍ಪಿವಿ, ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: gaadiwaadi

Most Read Articles

Kannada
Read more on maruti suzuki ertiga mpv
English summary
New Maruti Ertiga SPIED without camouflage: Bookings open!
Story first published: Wednesday, October 24, 2018, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X