ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

By Praveen Sannamani

ಮಾರುತಿ ಸುಜುಕಿಸಂಸ್ಥೆಯು ಬಿಡುಗಡೆ ಮಾಡಲಿರುವ ಪ್ರಮುಖ ಕಾರುಗಳಲ್ಲಿ ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಕೂಡಾ ಭಾರೀ ಭರವಸೆ ಹುಟ್ಟುಹಾಕಿದ್ದು, ಹೊಸ ಕಾರಿನ ಬಿಡುಗಡೆಯ ಕುರಿತಾದ ಮಹತ್ವದ ಮಾಹಿತಿಯೊಂದನ್ನು ಇದೀಗ ಬಹಿರಂಗಗೊಳಿಸಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾರಾಟ ದಾಖಲೆ ಕಾಣುತ್ತಿರುವ ಆಲ್ಟೋ ಕಾರುಗಳು ಬಿಡುಗಡೆ ನಂತರ ಹಲವು ಬದಲಾವಣೆಗಳ ಜೊತೆ ಜೊತೆಗೆ ಇದುವರೆಗೆ ಬರೋಬ್ಬರಿ 35 ಲಕ್ಷ ಕಾರುಗಳು ಮಾರಾಟವಾಗುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, ಇದೇ ಉದ್ದೇಶದಿಂದಲೇ ಮತ್ತಷ್ಟು ಹೊಸತನವನ್ನು ಪಡೆದುಕೊಂಡಿರುವ ಆಲ್ಟೊ ಕಾರುಗಳನ್ನು ಪರಿಚಯಿಸುವ ಬೃಹತ್ ಯೋಜನೆಗೆ ಮಾರುತಿ ಸುಜುಕಿ ಚಾಲನೆ ನೀಡಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಎಲ್ಲವೂ ಅಂದುಕೊಂಡಂತೆ ಆದಲ್ಲಿ 2019ರ ಫೆಬ್ರುವರಿ ಮೊದಲ ವಾರವೇ ಹೊಸ ಆಲ್ಟೊ ಕಾರುಗಳು ಖರೀದಿಗೆ ಲಭ್ಯವಾಗಲಿದ್ದು, ಮಾಲಿನ್ಯ ತಡೆಗೆ ಪರಿಣಾಮಕಾರಿ ಮಾರ್ಗವಾದ ಬಿಎಸ್ 6 ವೈಶಿಷ್ಟ್ಯತೆಗಳು ಈ ಕಾರಿನಲ್ಲಿ ಅಳವಡಿಸಲಾಗಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಹೊಸ ಕಾರಿನ ವಿಶೇಷತೆ ಏನು?

ಹೌದು, ಈ ಹಿಂದಿನ ಆಲ್ಟೊ ಕಾರುಗಳಿಂತಲೂ ನ್ಯೂ ಜನರೇಷನ್ ಆಲ್ಟೊ ಕಾರುಗಳು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಭಾರತ್ ನ್ಯೂ ವೆಹಿಕಲ್ ಅಸೆಸ್ಮೆಂಟ್ ಪ್ರೋಗ್ರಾಂ(ಬಿಎನ್‌ವಿಎಸ್ಎಪಿ) ಆಧಾರದ ಮೇಲೆ ಹೊಸ ಕಾರು ಅಭಿವೃದ್ಧಿಯಾಗಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಕೇಂದ್ರ ಸರ್ಕಾರದ ಜಾರಿಗೆ ತರುತ್ತಿರುವ ಭಾರತ್ ನ್ಯೂ ವೆಹಿಕಲ್ ಅಸೆಸ್ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ಉತ್ತೀರ್ಣವಾಗುವ ಕಾರುಗಳಿಗೆ ಮಾತ್ರ ಇನ್ಮುಂದೆ ಬಿಡುಗಡೆಗೆ ಅವಕಾಶ ಸಿಗಲಿದ್ದು, ಬಿಎನ್‌ವಿಎಸ್ಎಪಿ ಕಾಯ್ದೆ ಅನ್ವಯ ಹೊಸ ಕಾರುಗಳು ಕೆಲವು ಮಹತ್ವದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲೇಬೇಕಾಗುತ್ತದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಹೀಗಾಗಿ ಬರಲಿರುವ ಹೊಸ ಆಲ್ಟೊ ಕಾರುಗಳಲ್ಲಿ ಕೆಲವು ಪ್ರಮುಖ ಸುರಕ್ಷಾ ಸೌಲಭ್ಯಗಳು ಕಡ್ಡಾಯವಾಗಿ ಅಳವಡಿಕೆ ಇರಲಿದ್ದು, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಎಲೆಕ್ಟ್ರಿಕ್ ಪವರ್ ವೀಂಡೋಗಳು ಇದರಲ್ಲಿವೆ. ಜೊತೆಗೆ ಎಲೆಕ್ಟ್ರಿಕ್ ಒಆರ್‌ವಿಎಂ ಗಳು ಸಹ ಇದರಲ್ಲಿವೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಇನ್ನು ಪ್ರಯಾಣಿಕ ಸುರಕ್ಷತೆಗಾಗಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಹೊಂದಿರಲಿದ್ದು, ಜಪಾನ್‌ನಲ್ಲಿ ಮಾರಾಟವಾಗುತ್ತಿರುವ ಆಲ್ಟೊ ಕಾರುಗಳ ವಿನ್ಯಾಸಗಳನ್ನೇ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಆಲ್ಟೊ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿ ಮಾರಾಟಾವಾಗುತ್ತಿರುವ ಆಲ್ಟೊ ಕೆ10 ಮಾದರಿಯಲ್ಲೇ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಲಿರುವ ಹೊಸ ಆಲ್ಟೊ ಕಾರುಗಳು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 67-ಬಿಎಚ್‌ಪಿ ಮತ್ತು 91-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಕಾರಿನ ಬೆಲೆಗಳು

ಹೊಸ ವಿನ್ಯಾಸ, ಸುಧಾರಿತ ಸುರಕ್ಷಾ ಕ್ರಮಗಳ ಜೋಡಣೆ ಹೊಂದಿರುವ ಹೊಸ ಆಲ್ಟೊ ಕಾರುಗಳ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 4 ಲಕ್ಷದಿಂದ ರೂ.5.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಇನ್ನು ಮಾರುತಿ ಸುಜುಕಿ ಸಂಸ್ಥೆಯು ತನ್ನ ಪ್ರಮುಖ ಕಾರು ಮಾದರಿಗಳಾದ ಸಿಯಾಜ್, ಎರ್ಟಿಗಾ ಕಾರುಗಳನ್ನು ಸಹ ಹೊಸ ಎಂಜಿನ್ ಮತ್ತು ವಿನ್ಯಾಸಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹಂತದಲ್ಲಿವೆ.

ನ್ಯೂ ಜನರೇಷನ್ ಆಲ್ಟೊ ಕಾರುಗಳ ಬಿಡುಗಡೆ ಕುರಿತಾದ ಟೈಮ್‌ಲೈನ್ ರಿವೀಲ್

ಇದೇ ಕಾರಣಕ್ಕೆ ಆಲ್ಟೋ ಮತ್ತು ವ್ಯಾಗನ್ ಆರ್ ಕಾರುಗಳನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿದ್ದಪಡಿಸುವ ಮೂಲಕ ಎಂಟ್ರಿ ಲೆವಲ್ ಕಾರು ಮಾದರಿಗಳನ್ನು ಖರೀದಿಸುವ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಂದಾಗಿದ್ದು, 2019ರ ಮೊದಲ ತ್ರೈಮಾಸಿಕ ಹೊತ್ತಿಗೆ ಮಾರುತಿ ಸುಜುಕಿ ಎಲ್ಲಾ ಕಾರು ಮಾದರಿಗಳು ಸಹ ನ್ಯೂ ಟೆಕ್ನಾಲಜಿ ಪ್ರೇರಣೆಯೊಂದಿಗೆ ಖರೀದಿಗೆ ಲಭ್ಯವಾಗಲಿವೆ.

Most Read Articles

Kannada
English summary
New Maruti Suzuki Alto India Launch Timeline Revealed.
Story first published: Tuesday, June 19, 2018, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X