2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಮಾರುತಿ ಸುಜುಕಿ ನಿರ್ಮಾಣದ ಥರ್ಡ್ ಜನರೇಷನ್ ಸ್ವಿಫ್ಟ್ ಕಾರು ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಕಾರು ಖರೀದಿಸಲು ದಾಖಲೆ ಪ್ರಮಾಣದ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿದೆ.

By Praveen

Recommended Video

Andhra Pradesh State Transport Bus Crashes Into Bike Showroom - DriveSpark

ಭಾರತದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳ ಪೈಕಿ ಮಾರುತಿ ಸುಜುಕಿ ನಿರ್ಮಾಣದ ಥರ್ಡ್ ಜನರೇಷನ್ ಸ್ವಿಫ್ಟ್ ಕಾರು ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಕಾರು ಖರೀದಿಸಲು ದಾಖಲೆ ಪ್ರಮಾಣದ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿರುವ 2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಹೊಸ ಕಾರು ತಮ್ಮದಾಗಿಸಿಕೊಳ್ಳಲು ಲಕ್ಷಾಂತರ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಾಗಿ ಕಾರು ಖರೀದಿಯ ಅಧಿಕೃತ ಬುಕ್ಕಿಂಗ್ ಶುರುವಾದ ಕೇವಲ 5 ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಗ್ರಾಹಕರು ಮುಂಗಡ ಪಾವತಿಸಿ ಹೆಸರು ನೋಂದಾಯಿಸಿದ್ದಾರೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಇದರಿಂದಾಗಿ ಸ್ವಿಫ್ಟ್ ಹೊಸ ಕಾರು ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರು ಮುಂಗಡ ಪಾವತಿಸಿದ ನಂತರ ಹೊಸ ಕಾರುನ್ನು ತಮ್ಮದಾಗಿಸಿಕೊಳ್ಳಲು ಕನಿಷ್ಠ 2 ತಿಂಗಳ ಕಾಲ ಕಾಯಲೇಬೇಕಾದ ಅನಿರ್ವಾಯತೆ ಇದ್ದು, ಈ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಲಭ್ಯವಾಗಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಹಾಟ್ ಫೇವರಿಟ್ ಎಂದೇ ಬಿಂಬಿತವಾಗಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಕಾರಿನ ಬೆಲೆಗಳನ್ನು ಕೂಡಾ ರಿವಿಲ್ ಮಾಡಲಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆ 4.99 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆಯು 7.99 ಲಕ್ಷ ಇರಲಿದೆ ಎಂಬ ಮಾಹಿತಿಯಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಈ ಹಿಂದೆಯೇ ಮಾತನಾಡಿದ್ದ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಕೈಲಾಸಿ ಅವರೇ ಹೊಸ ಕಾರಿನ ಬೆಲೆಯನ್ನು ಬಹಿರಂಗಗೊಳಿಸಿದ್ದರು.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಪ್ರಮುಖವಾಗಿ ಬಲೆನೊ ಆರ್‌ಎಸ್ ಮತ್ತು ಡಿಜೈರ್ ಕಾರಿಗಿಂತಲೂ ಕಡಿಮೆ ಬೆಲೆ ಹೊಂದಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಇನ್ನು ಬಿಡುಗಡೆಗೊಳ್ಳಲಿರುವ 2018ರ ಸ್ವಿಫ್ಟ್ ಆವೃತ್ತಿಯು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರುವುದು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಬಹಿರಂಗಗೊಂಡಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಹೀಗಾಗಿ ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ 50 ಕೆ.ಜಿ ತೂಕವನ್ನು ಕಡಿತಗೊಳಿಸಲಾಗಿದ್ದು, ಡಿಜೈರ್ ಕಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಜೋಡಿಸುವ ಮೂಲಕ ಮಾರುತಿ ಸುಜುಕಿ ಪ್ರಿಯರಿಗೆ ಡಬಲ್ ಧಮಾಕಾ ನೀಡಲಾಗುತ್ತಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಬಿಡುಗಡೆ ಯಾವಾಗ?

ಮುಂದಿನ ತಿಂಗಳು ಫೆ.7ರಿಂದ ಆರಂಭಗೊಳ್ಳಲಿರುವ 2018ರ ಆಟೋ ಎಕ್ಸ್‌ಪೋ ಪ್ರದರ್ಶನವಾಗಲಿರುವ ಹೊಸ ಸ್ವಿಫ್ಟ್ ಕಾರುಗಳು ಫೆಬ್ರುವರಿ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಿರಲಿವೆ.

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಜೊತೆಗೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಮಾದರಿಯನ್ನು ಗ್ರಾಹಕರಿಗೆ ಒದಗಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಸ್ತರಿತ ಬೂಟ್ ಸ್ಪೆಸ್, ಆ್ಯಪಲ್ ಕಾರ್ ಪ್ಲೇ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕೂಡಾ ನೀಡಲಾಗುತ್ತಿದೆ.

Trending On DriveSpark Kannada:

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, January 23, 2018, 18:35 [IST]
English summary
Maruti Swift Waiting Period For 2018 Is Quite A Wait.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+