ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ನಿರ್ಮಾಣದ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಮಾರಾಟ ದಾಖಲೆಯನ್ನು ಹೊಂದಿದೆ. ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಇದೀಗ ಹೊಸ ಕಾರು ಉತ್ಪನ್ನ ಒಂದನ್ನು ಪರಿಚಯಿಸುತ್ತಿದೆ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಸದ್ಯ ಎಸ್‌ಯುವಿ ವಿಭಾಗದಲ್ಲಿ ಇಕೋಸ್ಪೋರ್ಟ್ ಮತ್ತು ಎಂಡೀವರ್ ಕಾರು ಆವೃತ್ತಿಗಳು ಫೋರ್ಡ್ ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಕಂಪ್ಯಾಕ್ಟ್ ಯುಟಿಲಿಟಿ ವೆಹಿಕಲ್(ಸಿಯುವಿ) ಕಾರು ಮಾದರಿಯನ್ನು ಪರಿಚಯಿಸುತ್ತಿದೆ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಮೂಲಗಳ ಪ್ರಕಾರ ಇದೇ ತಿಂಗಳು 31ಕ್ಕೆ ಫೋರ್ಡ್ ಹೊಸ ಕಾರು ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದ್ದು, ಬಿಡುಗಡೆಯಾಗಲಿರುವ ಹೊಸ ಕಾರಿನ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಆದರೇ ಫೋರ್ಡ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಹೊಸ ಕಾರು ಫಿಗೋ ಕ್ರಾಸ್ ಓವರ್ ಮಾದರಿಯಲ್ಲೇ ಅಭಿವೃದ್ಧಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಮೊನ್ನೆಯಷ್ಟೇ ಸ್ಪಾರ್ಟ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ಹೊರ ವಿನ್ಯಾಸಗಳು ಮತ್ತು ಎಂಜಿನ್ ವಿವರಗಳು ಲಭ್ಯವಾಗಿವೆ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಹೀಗಾಗಿ ಬರಲಿರುವ ಫಿಗೋ ಕ್ರಾಸ್ ಓವರ್ ಹಾಗೂ ಜ.30ಕ್ಕೆ ಬಿಡುಗಡೆ ಮಾಡುತ್ತಿರುವ ಸಿಯುವಿ ಕಾರಿಗೂ ಸಾಕಷ್ಟು ಸಾಮತ್ಯೆ ಇದ್ದು, ಬಾಡಿ ಕ್ಯಾಡಿಂಗ್, ಟ್ವಿನ್ ಸ್ಪೋಕ್ ಬ್ಲ್ಯಾಕ್ ಅಲಾಯ್ ವೀಲ್‌ಗಳು ಎಲ್ಇಡಿ ಡಿಆರ್‌ಎಲ್‌ಗಳು, ಡ್ರ್ಯಾಗನ್ ಎಂಜಿನ್ ಹೊಂದಿರಲಿವೆ.

Trending On DriveSpark Kannada:

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬರಲಿರುವ ಸಿಯುವಿ ವಿನ್ಯಾಸದ ಫೋರ್ಡ್ ಹೊಸ ಕಾರು 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಇದರ ಜೊತೆಗೆ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳಾದ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ವಿನೂತನ ಕ್ಯಾಬಿನ್ ಸೆಟ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಎಸ್‌ವೈಎನ್‌ಸಿ3 ಕನೆಕ್ಟಿವಿಟಿ ಸಿಸ್ಟಂ ಒದಗಿಸಲಾಗಿದೆ.

ಜನವರಿ ಅಂತ್ಯಕ್ಕೆ ಫೋರ್ಡ್‌ನಿಂದ ವಿನೂತನ ಸಿಯುವಿ ಕಾರು ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ ತಿಂಗಳು ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ ಮಾಡಿರುವ ಫೋರ್ಡ್ ಸಂಸ್ಥೆಯು ಸದ್ಯಕ್ಕೆ ಸಿಯುವಿ ಕಾರು, ಫಿಗೋ ಫೇಸ್‌ಲಿಫ್ಟ್, ಹೊಸ ಮಾದರಿಯ ಕೂಗಾ ಎಸ್‌ಯುವಿ ಬಿಡುಗಡೆಗೆ ಎದುರು ನೋಡುತ್ತಿದೆ. ಹೀಗಾಗಿ ಜ.30ಕ್ಕೆ ಬಿಡುಗಡೆಯಾಗಲಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರಿನ ಬಿಡುಗಡೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ನೀಡಲಿದೆ.

Trending On DriveSpark Kannada:

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Trending DriveSpark YouTube Videos

Subscribe To DriveSpark Kannada YouTube Channel - Click Here

Read more on ford ಫೋರ್ಡ್
English summary
Ford Compact Utility Vehicle (CUV) Debut Date Announced.
Story first published: Tuesday, January 23, 2018, 13:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark