ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಬಹಳ ವರ್ಷಗಳ ಹಿಂದೆ ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರನ್ನು ಬಿಡುಗಡೆಗೊಳಿಸಿತ್ತು.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಬಹಳ ವರ್ಷಗಳ ಹಿಂದೆ ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಇನ್ನಷ್ಟು ವೈಶಿಷ್ಟ್ಯತೆ ಮತ್ತು ವಿನ್ಯಾಸವನ್ನು ಹೊತ್ತು ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರಲಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಮಾಹಿತಿಗಳ ಪ್ರಕಾರ ಹೊಸ ವ್ಯಾಗನ್ ಆರ್ ಕಾರುಗಳು ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡಗಡೆಗೊಳ್ಳಲಿದ್ದು, ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆಯಲ್ಲಿ ಕಾಣಿಸಿಕೊಂಡಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಕೆಲ ತಿಂಗಳುಗಳ ಹಿಂದಷ್ಟೆ ಬಿಡುಗಡೆಯಾದ ನ್ಯೂ ಜನರೇಷನ್ ಸ್ವಿಫ್ಟ್ ಫ್ಯಾಟ್‌ಫಾರ್ಮ್ ಅಡಿಯಲ್ಲೇ ವ್ಯಾಗನ್ ಆರ್ ಕೂಡಾ ಅಭಿವೃದ್ಧಿಗೊಂಡಿದ್ದು, ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಇದಲ್ಲದೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಮಾರುಕಟ್ಟೆಯಲ್ಲಿನ ಪಾಲನ್ನು ಮತ್ತಷ್ಟು ಬಲಗೊಳಿಸಲು ಪ್ರತೀ ತಿಂಗಳು 18,000 ಯೂನಿಟ್‍‍ನ ಹೊಸ ವ್ಯಾಗನ್ ಆರ್ ಅನ್ನು ರೀಟೈಲ್ ಮಾರಾಟ ಮಾಡುವ ಉದ್ದೇಶ ಹೊಂದಿದೆ ಎಂದು ವರದಿ ಹೇಳಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಪ್ರಸ್ಥುತ ಸಂಸ್ಥೆಯು 14,000 ಯೂನಿಟ್ ಕಾರುಗಳನ್ನು ರೀಟೈಲ್ ಮಾದುತಿದ್ದು, ಸಂಸ್ಥೆಯ ಐದನೆ ಉತ್ತಮ ಮಾರಾಟಗೊಳ್ಳುವ ಕಾರಾಗಿ ನಿಂತಿದೆ. ವಿಶೇಷ ಎಂಜಿನ್ ಆಯ್ಕೆ ನೀಡುವ ಮೂಲಕ ಸಿಎನ್‍ಜಿ ಮತ್ತು ಎಲ್‌ಪಿಜಿ ಎರಡನ್ನು ಬಳಕೆ ಮಾಡಬಹುದಾದ ವ್ಯವಸ್ಥೆಯನ್ನು ಹೊಸ ಮಾದರಿಯ ವ್ಯಾಗನ್ ಆರ್ ಕಾರುಗಳಲ್ಲಿ ಒದಗಿಸಲಾಗಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಹೊಸ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ತನ್ನ ಔಟ್‍‍‍ಗೋಯಿಂಗ್ ಮಾಡಲ್‍ನಂತೆಯೆ ಟಾಲ್ ಬಾಯ್ ಡಿಸೈನ್ ಅನ್ನು ಹೊಂದಿದ್ದು, ಹೊಸದಾಗಿ ರೆವಾಂಪ್ಡ್ ಚೇಸ್ಸಿಸ್ ಮತ್ತು ವಿನ್ಯಾಸದಲ್ಲಿ ಇನ್ನಿತರೆ ಬದಲಾವಣೆಗಳಾನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಆದರೂ ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಶಾರ್ಪ್ ಎಡ್ಜ್‌ಗಳು ಮತ್ತು ಸುರಕ್ಷೆತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಅಳವಡಿಸಲಾಗಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಎಂಜಿನ್ ಸಾಮರ್ಥ್ಯ

1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ವ್ಯಾಗನ್ ಆರ್ ಕಾರುಗಳು 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಹಿಂದಿನ ವ್ಯಾಗನ್ ಆರ್ ಮಾದರಿಯಲ್ಲೇ ಹೊಸ ವ್ಯಾಗನ್ ಆರ್ ಕಾರುಗಳಲ್ಲೂ ಒಂದೇ ರೀತಿಯಾದ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದ್ದರು, ಕಾರಿನ ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವುದು ಸ್ಪೈ ಚಿತ್ರಗಳಲ್ಲಿ ನೋಡಬಹುದಾಗಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಈ ಮೂಲಕ ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಸುರಕ್ಷತೆ ಮತ್ತು ಮತ್ತು ವಿನ್ಯಾಸಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಉತ್ತಮ ಮಾದರಿಯ ಎಂಟ್ರಿ ಲೆವಲ್ ಕಾರು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಆಕರ್ಷಣೆಯಾಗಲಿದೆ.

ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲಿದೆ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು..

ಬೆಲೆ(ಅಂದಾಜು)

ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೆಚ್ಚಿಸಿರುವ ಹಿನ್ನೆಲೆ ಹೊಸ ಕಾರಿನ ಬೆಲೆಯನ್ನು 4.50 ಲಕ್ಷದಿಂದ 5.50 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟೈರ್ ಬಸ್ಟ್‌- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್..

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

More from DriveSpark

Article Published On: Thursday, May 3, 2018, 17:25 [IST]
English summary
New Maruti WagonR Launch Details Revealed.
Read more on maruti suzuki wagonr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+