ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಈಗಾಗಲೇ ಅತ್ಯುತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಟಿಯಾಗೋ ಕಾರಿನಲ್ಲಿ ಇದೀಗ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೊಸ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಜೆಡ್ ಪ್ಲಸ್ ಎನ್ನುವ ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ ಮಾಡಲಾಗಿದೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಟಿಯಾಗೋ ಎಕ್ಸ್‌ಜೆಡ್ ಆವೃತ್ತಿಯೇ ಟಾಪ್ ಎಂಡ್ ಆಗಿ ಮಾರಾಟಗೊಳ್ಳುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಲಾಗಿರುವ ಎಕ್ಸ್‌ಜೆಡ್ ಪ್ಲಸ್ ಆವೃತ್ತಿಯು ಅದಕ್ಕಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಮತ್ತೆರಡು ವಿನೂತನ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಿದೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.5.57 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಈ ಹಿಂದಿನ ಬಣ್ಣಗಳ ಆಯ್ಕೆಯೊಂದಿಗೆ ಹೊಸದಾಗಿ ಕೆನಾಯ್ ಆರೇಂಜ್ ಮತ್ತು ಓಸಿಯನ್ ಬ್ಲ್ಯೂ ಎನ್ನುವ ಎರಡು ಹೆಚ್ಚುವರಿ ಬಣ್ಣದಲ್ಲೂ ಸಹ ಹೊಸ ಕಾರು ಲಭ್ಯವಿವೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಗ್ರಾಹಕರ ಆದ್ಯತೆ ಮೇರೆಗೆ ಕಾರಿನಲ್ಲಿ ಡ್ಯುಯಲ್ ಟೋನ್ ಪೇಟಿಂಗ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತಿದ್ದು, ಎತ್ತರಿಸಿದ ಸ್ಪಾಯ್ಲರ್, ಕಾರಿನ ಅಂದ ಹೆಚ್ಚಿಸುವ ಕ್ರೊಮ್ ಅಕ್ಸೆಂಟ್ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವ 15-ಇಂಚಿನ ಅಲಾಯ್ ಚಕ್ರಗಳನ್ನು ಪಡೆದಿದೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಹೊಸ ಕಾರಿನಲ್ಲಿ ಒಳಭಾಗದ ವಿನ್ಯಾಸಗಳನ್ನು ಅಷ್ಟೇ ಅಲ್ಲದೇ ಹೊರ ಭಾಗದಲ್ಲೂ ಗುರುತರ ಬದಲಾವಣೆ ತರಲಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಮೋಕ್ಡ್ ಬ್ಲ್ಯಾಕ್ ಬೆಜೆಲ್, ಎಲೆಕ್ಟ್ರಿಕ್ ಸ್ವಿಚ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹಿಂಬದಿ ನೋಟ ಕನ್ನಡಿಗಳು ಇದರಲ್ಲಿವೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಹೀಗಾಗಿ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಕನೆಕ್ಟ್ ನೆಕ್ಸ್ಟ್, ಅಂಡ್ರಾಯಿಡ್ ಆಟೋ, ಧ್ವನಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡಿಜಿಟಲ್ ಸೌಲಭ್ಯ ಮತ್ತು ಆಟೋಮ್ಯಾಟಿಕ್ ಹವಾನಿಯಂತ್ರಣ ಇದರಲ್ಲಿದೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹೊಸ ಕಾರಿನಲ್ಲಿ ಹೊರಭಾಗದ ವಿನ್ಯಾಸಗಳಲ್ಲಿ ಬದಲಾವಣೆ ಹೊರತುಪಡಿಸಿದ ಎಂಜಿನ್ ಮಾದರಿಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, 1.2-ಲೀಟರ್ ರೆವೊಟ್ರೊನ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ರೆವೊಟ್ರೊನ್ ಡಿಸೇಲ್ ಎಂಜಿನ್‌ ಖರೀದಿ ಮಾಡಬಹುದು.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಇದರಲ್ಲಿ ಪೆಟ್ರೋಲ್ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 85-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಕಾರುಗಳು 70-ಬಿಎಚ್‌ಪಿ, 140-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿವೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಯ ಬಗೆಗೆ ಹೇಳುವುದಾದರೇ, ಹೊಸ ಕಾರಿನಲ್ಲಿ ಈ ಹಿಂದಿನಂತೆ ಎಬಿಎಸ್, ಪಾರ್ಕಿಂಗ್ ಸೆನ್ಸಾರ್, ಬ್ರೇಕ್ ಅಸಿಸ್ಟ್, ಚೈಲ್ಡ್ ಸೆಫ್ಟಿ ಲಾಕ್, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಪವರ್ ಡೋರ್ ಲಾಕ್ಸ್, ಕ್ರ್ಯಾಶ್ ಸೆನ್ಸಾರ್, ಆ್ಯಂಟಿ ಥೆಪ್ಟ್ ಡಿವೈಸ್ ಮತ್ತು ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲರ್ ಸೌಲಭ್ಯವಿದೆ.

MOST READ: ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಇನ್ನು ಟಿಯಾಗೋ ಹೊಸ ವೆರಿಯೆಂಟ್ ಮಾದರಿಯನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದು ಕಾರಿನ ವಿನ್ಯಾಸಕ್ಕೆ ಹೊಸ ಮೆರಗು ತಂದಿವೆ.

ಟಾಟಾ ಟಿಯಾಗೋ ಕಾರಿನಲ್ಲಿ ಮತ್ತೊಂದು ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ

ಹೊಸ ಕಾರು ಬಿಡುಗಡೆಯ ಕುರಿತು ಮಾತನಾಡಿದ ಟಾಟಾ ಕಾರು ಮಾರಾಟ ವಿಭಾಗದ ಮುಖ್ಯಸ್ಥ ಎಸ್ಎನ್ ಬರ್ಮನ್ ಅವರು, ಟಿಯಾಗೋ ಕಾರುಗಳು 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯ ನಂತರ ಗ್ರಾಹಕರ ಆದ್ಯತೆ ಮೇರೆಗೆ ಹಲವಾರು ಬದಲಾವಣೆಗಳೊಂದಿಗೆ ಉತ್ತಮ ಮಾದರಿಯ ಕಾರನ್ನಾಗಿ ಪರಿವರ್ತನೆ ಮಾಡಲಾಗಿದ್ದು, ಇದೀಗ ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನದ ಆಧಾರ ಮೇಲೆ ನಿರ್ಮಾಣ ಮಾಡಿರುವುದು ಗ್ರಾಹಕರ ಆಯ್ಕೆ ಹೆಚ್ಚಿನ ಹೆಚ್ಚಿಸಲಿದೆ ಎಂದಿದ್ದಾರೆ.

Most Read Articles

Kannada
English summary
New Tata Tiago XZ+ Variant Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X