ಬಹಿರಂಗಗೊಂಡ ಟೊಯೊಟಾ ರಾವ್4 ಎಸ್‍ಯುವಿ ಕಾರು

ಹೊಸ ಟೊಯೊಟಾ ರಾವ್4 ಕಾರು ಔಟ್‍ಗೋಯಿಂಗ್ ಮಾದರಿಗಿಂತ ಹೆಚ್ಚು ನವೀಕರಣಗಳನ್ನು ಪಡೆದಿದ್ದು, ಹೊಸ ವೇದಿಕೆಯೊಂದಿಗೆ ಮತ್ತೊಮ್ಮೆ ಹೊಸ ರೂಪದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜುಗೊಳ್ಳುತಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಸಂಸ್ಥೆಯು 2018ರ ನ್ಯೂಯಾರ್ಕ್ ಆಟೋ ಶೋನಲ್ಲಿ ತಮ್ಮ ಹೊಸ ಮಾದರಿಯ ರಾವ್4 ಎಸ್‍ಯುವಿ ಕಾರನ್ನು ಬಹಿರಂಗಗೊಳಿಸಿದ್ದು, 2017ರ ಅವಧಿಯಲ್ಲಿ ರಾವ್4 ಹಳೆಯ ಮಾದರಿಯ ಅಮೆರಿಕಾದ ಮಾರುಕಟ್ಟೆಯಲ್ಲಿ ಸುಮಾರು 4 ಲಕ್ಷಕ್ಕಿಂತ ಹೆಚ್ಚು ಮಾರಾಟಗೊಂಡಿದ್ದವು.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ಪಾಶ್ಚಾತ್ಯ ದೇಶಗಳಲ್ಲೂ ಭಾರೀ ಜನಪ್ರಿಯತೆ ಕಂಡಿರುವ ಟೊಯೊಟಾ ಸಂಸ್ಥೆಯು ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್‍ಅನ್ನು ಆಧರಿಸಿದ್ದು, ಹೊಸ ಪ್ರಿಯಸ್, ಕ್ಯಾಮ್ರಿ, ಸಿಹೆಚ್-ಆರ್ ಮತ್ತು ಇತ್ತೀಚೆಗೆ ಅನಾವರಣಗೊಂಡ ಕೊರೊಲ್ಲಾ ಹ್ಯಾಚ್‍ಬ್ಯಾಕ್ ಕಾರುಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸುವ ತವಕದಲ್ಲಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಇವುಗಳಲ್ಲಿ ಪ್ರಮುಖವಾಗಿ ರಾವ್4 ಎಸ್‌ಯುವಿ ಕಾರಿನ ಮುಂಭಾಗದ ವಿನ್ಯಾಸವು ಮಸ್ಕ್ಯುಲರ್ ಲೈನ್‍ಗಳನ್ನು ಹೊಂದಿರುವಂತಹ ಶಾರ್ಪ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ರಗಡ್ ಲುಕ್ಕಿಂಗ್ ಗ್ರಿಲ್, ಅಗಲವಾದ ಏರ್ ಡ್ಯಾಮ್, ಕ್ಲೇಡಿಂಗ್ ಮತ್ತು ಸ್ಕಿಡ್ ಪ್ಲೇಟ್‍‍ಗಳನ್ನು ಅಳವಡಿಸಲಾಗಿದ್ದು, ಕಾರಿನ ಹಿಂಭಾಗದಲ್ಲಿ ರೂಫ್ ಮೌನ್ಟೆಡ್ ಸ್ಪಾಯ್ಲರ್, ಎಲ್ಇಡಿ ಟೈಲ್‍ಲೈಟ್ ಕ್ಲಸ್ಟರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಪೈಪ್‍ಗಳನ್ನು ಅಳವಡಿಸಲಾಗಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಕಾರಿನ ಒಳಭಾಗವು 8 ಇಂಚಿನ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಟೊಯೊಟಾ ಸಂಸ್ಥೆಯ ಎನ್‍ಟ್ಯೂನ್ 3.0 ಆಡಿಯೋ ಸಿಸ್ಟಂ, ಆಪಲ್ ಕಾರ್ ಪ್ಲೇ, ಅಮೆಜಾನ್ ಅಲೆಕ್ಸಾ ಮತ್ತು ನ್ಯಾವಿಗೇಷನ್, ಯುಎಸ್‍ಬಿ ಪೋರ್ಟ್ಸ್, ವೈರ್‍‍ಲೆಸ್ ಫೋನ್ ಚಾರ್ಜರ್ ಮತ್ತು 800 ವ್ಯಾಟ್ ಜೆಬಿಎಲ್ ಆಡಿಯೋ ಸಿಸ್ಟಂ ಅನ್ನು ಪಡೆದಿರಲಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಇದಲ್ಲದೇ ರಾವ್4 ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡೈನಾಮಿಕ್ ಕ್ರೂಸ್ ಕಂಟ್ರೋಲ್, ಫಾರ್‍‍ವರ್ಡ್ ಕೊಲಿಷನ್ ವಾರ್ನಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಶನ್ ಮತ್ತು ಎಮರ್ಜನ್ಸಿ ಬ್ರೇಕಿಂಗ್, ಸ್ಟೀರಿಂಗ್ ಅಸ್ಸಿಸ್ಟ್ ಮತ್ತು ಡಿಪಾರ್ಚುರ್ ವಾರ್ನಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಹಾಗೆಯೇ ಲೇನ್ ಟ್ರೆಸಿಂಗ್ ಅಸ್ಸಿಸ್ಟ್, 19 ಇಂಚಿನ ಅಲಾಯ್ ಚಕ್ರಗಳು, ಆಲ್ ವೀಲ್ ಡ್ರೈವಿಂಗ್ ಸಿಸ್ಟಂ, ಮತ್ತು ಚಕ್ರಗಳಿಗೆ ಹೆಚ್ಚು ಟಾರ್ಕ್ ಅನ್ನು ರವಾನಿಸಲು ವಿಶೇಷವಾಗಿ ಟೊಯೋಟಾ ಸಂಸ್ಥೆಯ ಐ ಹೈಬ್ರಿಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಎಂಜಿನ್ ಸಾಮರ್ಥ್ಯ

ಟೊಯೊಟಾ ರಾವ್4 ಕಾರುಗಳು 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, ಸ್ಟ್ಯಾಂಡರ್ಡ್ ಮತ್ತು ಹೈಬ್ರಿಡ್ ವೇರಿಯಂಟ್‍‍ಗಳಲ್ಲಿ ದೊರೆಯಲಿದೆ. ಹಾಗೆಯೇ ಇದರಲ್ಲಿ ಬಳಸಲಾಗಿರುವ ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಹೈಬ್ರಿಡ್ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜೀಪ್ ಕಾಂಪಸ್‍ಗೆ ಟಾಂಗ್ ನೀಡಲು ಬರಲಿದೆ ಟೊಯೊಟಾ ರಾವ್4 ಎಸ್‍ಯುವಿ

ಹೊಸ ಟೊಯೊಟಾ ರಾವ್4 ಕಾರು ಔಟ್‍ಗೋಯಿಂಗ್ ಮಾದರಿಗಿಂತ ಹೆಚ್ಚು ನವೀಕರಣಗಳನ್ನು ಪಡೆದಿದ್ದು, ಹೊಸ ವೇದಿಕೆಯೊಂದಿಗೆ ಮತ್ತೊಮ್ಮೆ ಹೊಸ ರೂಪದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜುಗೊಳ್ಳುತಿದೆ. ಈ ಮೂಲಕ ಮಾರುಕಟ್ಟೆಯಲ್ಲಿರುವ ಜೀಪ್ ಕಾಂಪಾಸ್ ಮತ್ತು ನಿಸ್ಸಾನ್ ಎಕ್ಸ್-ಟ್ರೈಲ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಭಾರತದಲ್ಲೂ ಈ ಕಾರು ಬಿಡುಗಡೆಯಾಗುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ..

2. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

3. ರಾಜಧಾನಿಯಲ್ಲಿ ಇನ್ಮುಂದೆ ವಾಹನಗಳಿಗೆ ಬಿಎಸ್ 6 ಇಂಧನ ಪೂರೈಕೆ...

4. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

5. ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ..!!

Most Read Articles

Kannada
Read more on toyota
English summary
2018 New York Auto Show: Toyota RAV4 SUV Revealed; Specifications, Features & Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X