ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

By Praveen Sannamani

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ಮೋಟಾರ್ ವೆಹಿಕಲ್ ನಿಯಮದಡಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ಸ್ಕ್ರ್ಯಾಪ್‌ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದ್ದು, ಹೊಸ ನಿಯಮದಿಂದ ಬರೋಬ್ಬರಿ 2.80 ಕೋಟಿಗೂ ಅಧಿಕ ಕಾರುಗಳು ಗುಜುರಿ ಸೇರಲಿವೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ವಿಪರಿತಗೊಂಡ ವಾಹನಗಳ ಸಂಖ್ಯೆಯಿಂದಾಗಿ ನಗರ ಪ್ರದೇಶಗಳಲ್ಲಿ ಉಸಿರಾಡಲು ಸಹ ಹರಸಾಹಸ ಮಾಡಬೇಕಾದ ವಾತಾವರಣ ಸೃಷ್ಠಿಯಾಗುತ್ತಿದ್ದು, ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿಯನ್ನು ಹೇಳತಿರದು. ಈ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಯಲು ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಸಿದ್ದಗೊಳಿಸಿದ್ದು, ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಕೇಂದ್ರ ಸಾರಿಗೆ ಇಲಾಖೆಯು ಈ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದು, ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಕೆಲವು ನಿಯಮಗಳನ್ನು ರೂಪಿಸಿರುವುದಾಗಿ ತಿಳಿಸಿದೆ. ಹೊಸ ನಿಯಮದ ಪ್ರಕಾರ, ಸಾರಿಗೆ ಇಲಾಖೆಯು ಗುರುತಿಸಿರುವ ಅಧಿಕೃತ ಸ್ಕ್ರ್ಯಾರ್ಪ್ ಸೆಂಟರ್‌ಗಳಲ್ಲೇ ಕಾರಿನ ಸ್ಕ್ರ್ಯಾರ್ಪ್ ಮಾಡಿಸತಕ್ಕದ್ದು ಎಂದಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಒಂದು ವೇಳೆ ಸಾರಿಗೆ ಇಲಾಖೆಯ ನಿಯಮಗಳನ್ನು ಮೀರಿ ಹಳೆಯ ಕಾರುಗಳನ್ನು ರಸ್ತೆಗಿಳಿಸಿದ್ದೇ ಆದಲ್ಲಿ ಸೀಜ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದು, ಪೆಟ್ರೋಲ್ ಎಂಜಿನ್, ಸಿಎನ್‌ಜಿ ಎಂಜಿನ್ ಕಾರುಗಳಿಗೆ 15 ವರ್ಷ ಮತ್ತು ಡೀಸೆಲ್ ಕಾರುಗಳಿಗೆ 10 ವರ್ಷ ಮಿತಿ ನಿಗದಿಪಡಿಸಲಾಗಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಅವಧಿಗೂ ಮಿರಿದ ಕಾರುಗಳು ದೆಹಲಿಯಲ್ಲಿ ಚಾಲನೆ ಮಾಡಿದ್ದಲ್ಲಿ ಸೀಜ್ ಮಾಡುವುದರ ಜೊತೆ ಇಂತಿಷ್ಟು ಪ್ರಮಾಣದ ದಂಡವಿಧಿಸುವ ಬಗ್ಗೆ ಹೊಸ ನಿಯಮಗಳನ್ನು ಸಿದ್ದಪಡಿಸಿರುವ ಸಾರಿಗೆ ಇಲಾಖೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಯೋಜನೆ ಚಾಲನೆ ನೀಡಲಿದ್ದಾರೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಮಾಲಕರೇ ಬಂದು ತಮ್ಮ ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡಿದಲ್ಲಿ ಮಾರುಕಟ್ಟೆಗೆ ಅನುಗುಣವಾಗಿ ವಿವಿಧ ಬೆಲೆಗಳನ್ನು ನಿಗದಿಗೊಳಿಸಿರುವ ಸಾರಿಗೆ ಇಲಾಖೆಯು, ಸ್ಕ್ರ್ಯಾರ್ಪಿಂಗ್‌ನಿಂದ ಬಂದ ಹಳೆಯ ಕಾರುಗಳ ಬಿಡಿಭಾಗಗಳನ್ನು ಮತ್ತೆ ಮರುಬಳಿಕೆಗಾಗಿ ಆಟೋ ಉತ್ಪಾದನಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಸೀಜ್ ಆದ್ರೆ ಪರಿಹಾರ ಇಲ್ವಂತೆ..!

ಸ್ವಯಂಪ್ರೇರಿತವಾಗಿ ಬರುವ ಕಾರು ಮಾಲೀಕರಿಗೆ ಸ್ಕ್ರ್ಯಾರ್ಪಿಂಗ್ ನಂತರ ಮಾರುಕಟ್ಟೆಯಲ್ಲಿ ಆ ಕಾರಿನ ಬೆಲೆ ಎಷ್ಟು ಎಂದು ತೀರ್ಮಾನಿಸಿ ಪರಿಹಾರ ನೀಡಲಿದ್ದು, ಒಂದು ವೇಳೆ ಅವಧಿ ಮುಗಿದರೂ ಸ್ಕ್ರ್ಯಾಪಿಂಗ್ ಮಾಡದೇ ಇದ್ದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೇ ಅಂತಹ ಕಾರುಗಳನ್ನು ಪತ್ತೆಹಚ್ಚಿ ಸ್ಕ್ರ್ಯಾರ್ಪಿಂಗ್ ಮಾಡಿಸುವುದಲ್ಲದೇ ಸಿಗಬಹುದಾದ ಪರಿಹಾರಕ್ಕೂ ಕತ್ತರಿ ಹಾಕಲಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ಬರೋಬ್ಬರಿ 2.80 ಕೋಟಿಗೂ ಹೆಚ್ಚು ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿದ್ದು, ಇದರಿಂದ ಶೇ. 65ರಷ್ಟು ಮಾಲಿನ್ಯ ತಗ್ಗಲಿದೆ ಎನ್ನಲಾಗಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿಯವರ ಅಭಿಪ್ರಾಯವಾಗಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಹೀಗಾಗಿ ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಕಾರುಗಳೇ ಹೆಚ್ಚಿನ ಮಟ್ಟದಲ್ಲಿ ಗುಜುರಿ ಸೇರಲಿವೆ ಎನ್ನಲಾಗಿದೆ.

ರಾಜಧಾನಿಯಲ್ಲಿ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಫೆಹರ್ ಸಂಸ್ಥೆಯು ಬಿಡುಗಡೆ ಮಾಡಿರುವ ಈ ಎಸಿ ಹೆಲ್ಮೆಟ್ ಬೆಲೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ..!

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

More from DriveSpark

Article Published On: Thursday, August 30, 2018, 14:32 [IST]
English summary
Delhi Old Vehicle Scrapping Policy — Cars To Be Scrapped Only At Licensed Centres.
Read more on auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+