ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಇದೀಗ ಪರ್ಯಾಯ ಇಂಧನ ಬಳಕೆಯ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದು, ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಯಲ್ಲಿ ಇದೀಗ ಹೊಸದೊಂದು ಕ್ರಾಂತಿ ಶುರುವಾಗಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಜಗತ್ತಿನ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಯೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರೆನಾಲ್ಟ್ ಸಂಸ್ಥೆಯು ಸಹ ತನ್ನ ಕನಸಿನ ಕೂಸಾದ ಕೆ-ಜೆಡ್ಇ ಕಾನ್ಸೆಪ್ಟ್ ಅನಾವರಣಗೊಳಿಸಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಪ್ಯಾರಿಸ್‌ನಲ್ಲಿ ನಡೆದಿರುವ 2018ರ ಮೋಟಾರ್ ಶೋನಲ್ಲಿ ಹೊಸ ಎಲೆಕ್ಟ್ರಿಕ್ ಪರಿಕಲ್ಪನೆಯ ಮಾದರಿಯನ್ನು ಅನಾವರಣಗೊಳಿಸಿರುವ ರೆನಾಲ್ಟ್ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಗಿಳಿಸುವ ಬಗ್ಗೆ ಸುಳಿವು ನೀಡಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಸಾಮಾನ್ಯ ಮಾದರಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಹೋಲಿಕೆ ಇರುವ ಕೆ-ಜೆಡ್ಇ ಕಾನ್ಸೆಪ್ಟ್ ಕಾರು ಸ್ಲಿಕ್ ಹೆಡ್‌ಲ್ಯಾಂಪ್ಸ್, ಮರು ವಿನ್ಯಾಸಗೊಳಿಸಲಾದ ಗ್ರೀಲ್, ಸ್ಪೋರ್ಟಿ ಬಂಪರ್ ಮತ್ತು ಕಾರಿನ ಬಹುತೇಕ ಕಡೆ ಇರಿಸಲಾಗಿರುವ ಬ್ಲ್ಯೂ ಅಸೆಸ್ಟ್ಸ್ ಕಾರಿನ ಲುಕ್ ಹೆಚ್ಚಿಸಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಇದರ ಹೊರತಾಗಿ ಕಾರಿನ ಎಂಜಿನ್ ತಾಂತ್ರಿಕ ಅಂಶಗಳ ಬಗೆಗೆ ಅಷ್ಟಾಗಿ ಮಾಹಿತಿ ಬಿಟ್ಟುಕೊಡದ ರೆನಾಲ್ಟ್ ಸಂಸ್ಥೆಯು ಸ್ವಂತ ಬಳಕೆಯ ಜೊತೆಗೆ ವಾಣಿಜ್ಯ ಬಳಕೆಗೂ ಅನುಕೂಲಕರವಾಗುವಂತೆ ಚಾರ್ಜಿಂಗ್ ಪಾಯಿಂಟ್‌ಗಳ ಸೌಲಭ್ಯ ಒದಗಿಸಲಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಕಾರಿನ ಮೈಲೇಜ್

ಕೆ-ಜೆಡ್ಇ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ವೈಶಿಷ್ಟ್ಯತೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ ಬರೋಬ್ಬರಿ 250ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರನ್ನು ನಿಸ್ಸಾನ್ ಜೊತೆಗೂಡಿ ಅಭಿವೃದ್ಧಿ ಮಾಡಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಭಾರತದಲ್ಲೂ ಬಿಡುಗಡೆ ಆಗುತ್ತಾ?

ಈ ಬಗ್ಗೆ ಪ್ಯಾರಿಸ್ ಮೋಟಾರ್ ಶೋನಲ್ಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಮಾರುಕಟ್ಟೆ ಇರುವುದರಿಂದಾಗಿ ಹೊಸ ಕಾರು ಬಿಡುಗಡೆಯಾಗುವುದು ಖಚಿತ ಎನ್ನಲಾಗಿದ್ದು, 2019ರ ಫೆಬ್ರುವರಿ ಹೊತ್ತಿಗೆ ಇದು ಚೀನಾದಲ್ಲಿ ಖರೀದಿಗೆ ಲಭ್ಯವಾಗಲಿದೆಯೆಂತೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ನಂತರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಿರುವ ರೆನಾಲ್ಟ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳಿಗೆ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಕೇಂದ್ರ ಸರ್ಕಾರವು ಸಹ ಇವಿ ಕಾರುಗಳು ಪೂರಕವಾಗುವಂತೆ 2019ರ ಹೊತ್ತಿಗೆ ಪ್ರತಿ 3 ಕಿ.ಮಿ ಗೆ ಒಂದು ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ಹೀಗಾಗಿ 2019ರ ಕೊನೆಯ ಹೊತ್ತಿಗೆ ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದು ಖಚಿತವಾಗಿದ್ದು, ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಬ್ಯಾಟರಿ ತಯಾರಿಕೆಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎದುರು ನೋಡುತ್ತಿವೆ.

ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ನೀಡಬಲ್ಲ ಕ್ವಿಡ್ ಎಲೆಕ್ಟ್ರಿಕ್ ಕಾರು ಪ್ರದರ್ಶಿಸಿದ ರೆನಾಲ್ಟ್

ರೆನಾಲ್ಟ್ ಸಂಸ್ಥೆಯ ಕ್ವಿಡ್ ಸಹ ಉತ್ತಮ ಮೈಲೇಜ್ ಹೊಂದಿದ್ದರೂ ಮುಂಬರುವ ದಿನಗಳಲ್ಲಿ ಇದು ಬದಲಾವಣೆಯೊಂದಿಗೆ ಬರುವ ಸಾಧ್ಯತೆಗಳಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಚಾರ್ಜಿಂಗ್‌ಗೆ 300 ರಿಂದ 450ಕಿ.ಮೀ ಮೈಲೇಜ್ ನೀಡುವ ಇವಿ ಕಾರುಗಳ ಉತ್ಪಾದನೆಗಾಗಿ ತಹರೇವಾರಿ ಆವಿಷ್ಕಾರಗಳು ನಡೆದಿವೆ.

Most Read Articles

ರೆನಾಲ್ಟ್ ಕೆ-ಜೆಡ್ಇ ಕಾರಿನ ಫೋಟೋ ಗ್ಯಾಲರಿ..!

Kannada
English summary
2018 Paris Motor Show: Renault Kwid Electric K-ZE Concept Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X