ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

Written By:

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಈಗಾಗಲೇ ಹೊಸ ಪ್ರಯತ್ನದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಹೊಸ ಕಾರು ಮಾದರಿಯೊಂದನ್ನು ಅಭಿವೃದ್ಧಿ ಮಾಡುತ್ತಿದ್ದು, ಜಿನೆವಾದಲ್ಲಿ ನಡೆಯುತ್ತಿರುವ 2018ರ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸುವ ಮೂಲಕ ಇತರೆ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಜಿನೆವಾ ಆಟೋ ಮೇಳದಲ್ಲಿ ಟಾಟಾ ಸಂಸ್ಥೆಯು ಪ್ರದರ್ಶನಗೊಳಿಸಿರುವ ಎಲೆಕ್ಟ್ರಿಕ್ ಕಾರು ಕಾಲ್ಪನಿಕ ಸೆಡಾನ್ ಮಾದರಿಯಾಗಿದ್ದು, OMEGA ಆರ್ಕಿಟೆಕ್ಚರ್ ವಿನ್ಯಾಸದೊಂದಿಗೆ ಸಿದ್ದಗೊಳ್ಳುತ್ತಿದೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಜೊತೆಗೆ ಜನಪ್ರಿಯ ಟೆಸ್ಲಾ ಮಾದರಿಯಲ್ಲೇ ಟಾಟಾ ಕೂಡಾ ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿದ್ದು, ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 300ಕಿಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಈ ಬಗ್ಗೆ ಸ್ವತಃ ಟಾಟಾ ಮೋಟಾರ್ಸ್‌ನ ಎಂಡಿ ಗುಂಟೆರ್​ ಬುಟ್ಸ್ಚೆಕ್ ಅವರೇ ಮಾತನಾಡಿದ್ದು, ಇವಿ ಕಾರುಗಳ ಬ್ಯಾಟರಿ ತಂತ್ರಜ್ಞಾನ ಸುಧಾರಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನದಲ್ಲಿದ್ದು, ಸದ್ಯ ಕಾಲ್ಪನಿಕ ಕಾರುಗಳಲ್ಲಿ ಬಳಕೆ ಮಾಡಿರುವ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿಗಳು ಟೆಸ್ಲಾ ಕಾರುಗಳಿಗೆ ಸರಿಸಮನಾಗಿರಲಿವೆ ಎಂದಿದ್ದಾರೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಇದಲ್ಲದೇ ಟಾಟಾ ಕಾರುಗಳಲ್ಲಿ ಪ್ರತಿ ಚಾರ್ಜಿಂಗ್‌ಗೆ 400 ಕಿಮಿ ಮೈಲೇಜ್ ಒದಗಿಸಬಲ್ಲ ಬ್ಯಾಟರಿ ಆವಿಷ್ಕಾರ ಬಗ್ಗೆಯೂ ಸುಳಿವು ನೀಡಿರುವ ಗುಂಟೆರ್​ ಬುಟ್ಸ್ಚೆಕ್, ಬಿಡುಗಡೆಗಾಗಿ ಸಿದ್ದವಾಗಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಇನ್ನು ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ಮುಕ್ತಾಯವಾದ 2018ರ ಆಟೋ ಮೇಳದಲ್ಲೂ ಟಿಯಾಗೋ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು, ಇಇಎಸ್ಎಲ್ ಸಂಸ್ಥೆಗೆ ಸುಮಾರು 10 ಸಾವಿರ ಎಲೆಕ್ಟ್ರಿಕ್ ಟಿಗೋರ್ ಸೆಡಾನ್ ಕಾರುಗಳನ್ನು ಒದಗಿಸುವ ಗುತ್ತಿಗೆಯನ್ನು ಕೂಡಾ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಲು ಹವಣಿಸುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ನೀಡಬಲ್ಲ ಬ್ಯಾಟರಿ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ವಿಶೇಷ ಆಸಕ್ತಿ ತೋರುತ್ತಿದೆ.

English summary
Tata’s EV Battery Pack With 300 Km Range In Development.
Story first published: Tuesday, March 13, 2018, 17:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark