ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

Written By: Rahul TS

2020ರ ಒಳಗಾಗಿ ಭಾರತದಲ್ಲಿ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ರಸ್ಥೆಗಿಳಿಯಲು ವಾಹನ ತಯಾರಕ ಸಂಸ್ಥೆಗಳು ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಟಾಟಾ ಸಂಸ್ಥೆ ಕೂಡಾ ಕಳೆದ ತಿಂಗಳು ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಳಿಸಿದ್ದ ಟಿಗೋರ್ ಎಲೆಕ್ಟ್ರಿಕ್ ಸೆಡಾನ್ ಆವೃತ್ತಿಯ ಮಾಹಿತಿಯು ಸೋರಿಕೆಯಾಗಿದೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಟಾಟಾ ನಿರ್ಮಾಣ ಮಾಡುತ್ತಿರುವ ಟಿಗೋರ್ ಇವಿ ಕಾರುಗಳು ಎಕ್ಸ್ಇ, ಎಕ್ಸ್ಎಂ, ಮತ್ತು ಎಕ್ಸ್ ಟಿ ಎಂಬ ಮೂರು ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್, ಡ್ಯುಯಲ್ ಟೋನ್ ಇಂಟೀರಿಯರ್, ಸ್ಪ್ಲಿಟ್ ಎಲ್ಇಡಿ ಟೈಲ್‍ ಲ್ಯಾಂಪ್ ಮತ್ತು ಎಲ್ಇಡಿ ಸ್ಟಾಪ್ ಲ್ಯಾಂಪ್ ಮೌಂಟೆಡ್ ಅನ್ನು ಹಿಂಭಾಗದಲ್ಲಿ ಪಡೆದಿದೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಕಾರಿನ ವೈಶಿಷ್ಟ್ಯತೆಗಳು

ಟಾಟಾ ಟಿಗೋರ್ ಇವಿ ಕಾರು ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, 15 ಇಂಚಿನ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್‍ನಿಂದ ಹೊಂದಿಕೊಳ್ಳಬಲ್ಲ ORVMs, ಎಲ್ಇಡಿ ಟರ್ನ್ ಇಂಡಿಕೇಟರ್ಸ್, ಆಟೋಮ್ಯಾಟಿಕ್ ವಾತಾವರಣ ನಿಯಂತ್ರತೆ ಮತ್ತು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆದುಕೊಂಡಿದೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಕಾರಿನ ಸುರಕ್ಷತೆಯನ್ನು ಹೆಚ್ಚಿಸಲು ಮುಂಭಾಗದಲ್ಲಿ ಡ್ಯುಯಲ್ ಏರ್‍‍‍ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಒದಗಿಸಲಾಗಿದೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಎಂಜಿನ್ ಸಾಮರ್ಥ್ಯ

ಟಿಗೋರ್ ಇವಿಯು ಎಲೆಕ್ಟ್ರಲ್ ಇವಿಯಿಂದ ತಯಾರಾದ 216 ಎಹೆಚ್ ಬ್ಯಾಟರಿ ಹೊಂದಿದ್ದು, 40ಬಿಹೆಚ್‍ಪಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ. ಜೊತೆಗೆ 130 ಕಿಲೋಮೀಟರ್ ಡ್ರೈವಿಂಗ್ ರೇಂಜನ್ನು ಪಡೆದಿದ್ದು, ಗಂಟೆಗೆ 100ಕಿಲೋಮೀಟರ್ ಚಲಿಸಬಲ್ಲವು.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಕಾರಿನ ಬ್ಯಾಟರಿಯು ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 6 ಗಂಟೆಗಳ ಸಮಯದಲ್ಲಿ ಪೂರ್ಣ ಚಾರ್ಜ್ ಆಗಲಿದ್ದು, ಫಾಸ್ಟ್ ಚಾರ್ಜರ್ ಸಹಾಯದಿಂದ 90 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಟಾಟಾ ಮೋಟಾರ್ಸ್ ಸಂಸ್ಥೆಯು ಟಿಗೋರ್ ಇವಿ ಕಾರನ್ನು ಇಎಸ್ಎಸ್ಎಲ್ ಗೆ ರವಾನಿಸಲಾಗಿದ್ದು, ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಲಿಲ್ಲ. ಆದರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಇವಿ ಕಾರಿನ ಬೇಡಿಕೆಯು ಹಚ್ಚಿದಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ.

ಲೀಕ್ ಆಯ್ತು ಟಾಟಾ ಟಿಗೋರ್ ಇವಿ ಟ್ರಿಮ್ ಲೆವೆಲ್ಸ್ ಮಾಹಿತಿ..

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಾಗುತಿದ್ದು, ಬೇರೆ ಸಂಸ್ಥೆಗಳಂತೆಯೇ ಟಾಟಾ ಮೋಟಾರ್ಸ್ ಕೂಡಾ ಟಿಗೋರ್ ಮತ್ತು ಟಿಯಾಗೊ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ತಯಾರಿಸುತ್ತಿದ್ದು, ಟಿಗೋರ್ ಎಲೆಕ್ಟ್ರಿಕ್ ಕಾರನ್ನು 2018ರ ಕೊನೆಯಲ್ಲಿ ಅಥವಾ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

English summary
Tata Tigor EV Trim Levels Leaked; Specifications, Features & Images.
Story first published: Monday, March 12, 2018, 12:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark