ಭಾರತದಲ್ಲಿ ಟ್ರೆಂಡ್ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಟಾಪ್ 10 ಎಸ್‌ಯುವಿ ಕಾರುಗಳು
ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ಹೊಸದಾಗಿ ವಹಿವಾಟು ಆರಂಭಿಸುತ್ತಿರುವುದು ಎಸ್‌ಯುವಿ ಪ್ರಿಯರನ್ನು ತಮ್ಮತ್ತ ಸೆಳೆಯುವ ತವಕದಲ್ಲಿವೆ ಎನ್ನಬಹುದು.
Recommended Video

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಮಾದರಿಯ ಎಸ್‌ಯುವಿ ಕಾರು ಆವೃತ್ತಿಗಳು ಮಾರಾಟಕ್ಕೆ ಲಭ್ಯವಿವೆ. ಈ ಮಧ್ಯೆ ಕೆಲವು ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ಹೊಸದಾಗಿ ವಹಿವಾಟು ಆರಂಭಿಸುತ್ತಿರುವುದು ಎಸ್‌ಯುವಿ ಪ್ರಿಯರನ್ನು ತಮ್ಮತ್ತ ಸೆಳೆಯುವ ತವಕದಲ್ಲಿವೆ ಎನ್ನಬಹುದು.

ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಎಸ್‌ಯುವಿ ಪಟ್ಟಿಯಲ್ಲಿ ಕೆಲವು ಕಾರುಗಳು ಟ್ರೆಂಡ್ ಸೃಷ್ಠಿಸುವುದರ ಜೊತೆಗೆ ಭರ್ಜರಿ ಮಾರಾಟ ಪ್ರಮಾಣ ದಾಖಲಿಸಲಿದ್ದು, ಹೊಸ ಕಾರುಗಳ ಬಿಡುಗಡೆ ಮಾಹಿತಿ, ಬೆಲೆ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಮಾರುತಿ ಸುಜುಕಿ ಬ್ರೆಝಾ (ಪೆಟ್ರೋಲ್ ಆವೃತ್ತಿ)
ಎಸ್‌ಯುವಿ ವಿಭಾಗದಲ್ಲಿ ಈಗಾಗಲೇ ಭರ್ಜರಿ ಮಾರಾಟ ಪ್ರಮಾಣ ದಾಖಲಿಸಿರುವ ವಿಟಾರಾ ಬ್ರೆಝಾ ಕಾರುಗಳು ಸದ್ಯಕ್ಕೆ ಡೀಸೆಲ್ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಬಿಡುಗಡೆ(ಅಂದಾಜು)- 2018ರ ಮಧ್ಯಂತರ
ಬೆಲೆ (ಅಂದಾಜು)- 5.5 ಲಕ್ಷದಿಂದ 7 ಲಕ್ಷ

ಹ್ಯುಂಡೈ ಕಾರ್ಲಿನೋ
ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ವಿನೂತನ ಕಾರ್ಲಿನೋ ಬಗ್ಗೆ ಹ್ಯುಂಡೈ ಅಧಿಕೃತ ಮಾಹಿತಿ ಬಹಿರಂಗಗೊಳಿಸಿದ್ದು, 1.2-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಜೊತೆ ಹೊಸ ಕಾರುಗಳು ಖರೀದಿಗೆ ಲಭ್ಯವಾಗಲಿವೆ.
ಬಿಡುಗಡೆ(ಅಂದಾಜು)- 2018ರ ಮಧ್ಯಂತರ
ಬೆಲೆ (ಅಂದಾಜು)- 5 ಲಕ್ಷದಿಂದ 7.5 ಲಕ್ಷ

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್
ದೇಶಿಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಕ್ರೇಟಾ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕ್ರೇಟಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.
ಬಿಡುಗಡೆ(ಅಂದಾಜು)- 2018ರ ಮಧ್ಯಂತರ
ಬೆಲೆ (ಅಂದಾಜು)- 9 ಲಕ್ಷದಿಂದ 14.50 ಲಕ್ಷ
Trending On DriveSpark Kannada:
ಬಹುನೀರಿಕ್ಷಿತ 2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿಗಾಗಿ ಬುಕ್ಕಿಂಗ್ ಆರಂಭ
ಬಲೆರೋ ಮೇಲೆತ್ತಿ ವಿಚಿತ್ರ ಸ್ಟಂಟ್- ನಟ ಬಾಲಯ್ಯನನ್ನು ಕಾಲೆಳೆದ ಆನಂದ್ ಮಹಿಂದ್ರಾ!
ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಡಟ್ಸನ್ ಗೊ ಕ್ರಾಸ್
ಮಹೀಂದ್ರಾ ಕೆಯುವಿ100 ಮತ್ತು ಮಾರುತಿ ಸುಜುಕಿ ಸೆಲೆರಿಯೊಗೆ ಪ್ರತಿಸ್ಪರ್ಧಿ ನೀಡಲು ಯೋಜನೆ ಹೊಂದಿರುವ ಡಟ್ಸನ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಡಟ್ಸನ್ ಗೊ ಕ್ರಾಸ್ ಮಾದರಿಯನ್ನು ಅಭಿವೃದ್ಧಿಗೊಳಿಸಿದ್ದು, 1.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.
ಬಿಡುಗಡೆ(ಅಂದಾಜು)- 2018ರ ಮಾರ್ಚ್
ಬೆಲೆ (ಅಂದಾಜು)- 5.5 ಲಕ್ಷದಿಂದ 7 ಲಕ್ಷ

ಟಾಟಾ ಕ್ಯೂ501
ನೆಕ್ಸಾನ್, ಟಿಗೋರ್, ಹೆಕ್ಸಾ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯದಲ್ಲೇ ವಿನೂತನ ಎಸ್‌ಯುವಿ ಒಂದನ್ನು ಬಿಡುಗಡೆಗೊಳಿಸುತ್ತಿದೆ. ಆದ್ರೆ ಟಾಟಾ ಬಿಡುಗಡೆ ಮಾಡಲಿರುವ ಹೊಸ ಕಾರಿನ ಹೆಸರು ಇದುವರೆಗೆ ಅಧಿಕೃತವಾಗಿ ಲಭ್ಯವಾಗಿಲ್ಲವಾದರೂ ಕ್ಯೂ501 ಕೋಡ್ ಆಧಾರದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.
ಬಿಡುಗಡೆ(ಅಂದಾಜು)- 2018ರ ಜೂನ್ ನಂತರ
ಬೆಲೆ (ಅಂದಾಜು)- 15 ಲಕ್ಷದಿಂದ 20 ಲಕ್ಷ

ಎಂಜಿ ಜಿಎಸ್ ಕಾನ್ಪೆಟ್
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ವಾಣಿಜ್ಯ ವಹಿವಾಟು ಆರಂಭಿಸುತ್ತಿರುವ ಎಂಜಿ ಮೋಟಾರ್ಸ್ ಸಂಸ್ಥೆಯು ಮೊದಲ ಹಂತದಲ್ಲೇ ವಿನೂತನ ಜಿಎಸ್ ಹೆಸರಿನ ಎಸ್‌ಯುವಿ ಬಿಡುಗಡೆಗೆ ಮುಂದಾಗಿದ್ದು, ಜನಪ್ರಿಯ ಕ್ರೇಟಾ ಹಿಂದಿಕ್ಕುವ ಗುರಿಹೊಂದಿದೆ.
ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ
ಬೆಲೆ (ಅಂದಾಜು)- 10 ಲಕ್ಷದಿಂದ 13 ಲಕ್ಷ

2018ರ ಹೋಂಡಾ ಹೆಚ್ಆರ್-ವಿ
ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಹೋಂಡಾ ಸಂಸ್ಥೆಗೆ ತೀವ್ರ ಪ್ರತಿ ಸ್ಪರ್ಧಿ ಸೃಷ್ಠಿಯಾಗುತ್ತಿದ್ದು, ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿಗಳನ್ನು ಪರಿಷ್ಕೃತಗೊಳಿಸುತ್ತಿದೆ. ಹೀಗಾಗಿ ಹೊಸ ನಮೂನೆಯ ಹೆಚ್‌ಆರ್-ವಿ ಕಾರನ್ನು 1.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪರಿಚಯಿಸುತ್ತಿದೆ.
ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ
ಬೆಲೆ (ಅಂದಾಜು)- 12 ಲಕ್ಷದಿಂದ 15 ಲಕ್ಷ

ಬಿಎಂಡಬ್ಲ್ಯು ಎಕ್ಸ್3
50 ಲಕ್ಷ ಒಳಗೆ ಅತ್ಯುತ್ತಮ ಐಷಾರಾಮಿ ಕೊಳ್ಳುವ ಗ್ರಾಹಕರಿಗಾಗಿ ಥರ್ಡ್ ಜನರೇಷನ್ ಎಕ್ಸ್3 ಎಸ್‌ಯುವಿ ಅಭಿವೃದ್ಧಿ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಕಡಿಮೆ ಉತ್ಪಾದನಾ ವೆಚ್ಚದ ಮೂಲಕ ಗ್ರಾಹಕರ ಸ್ನೇಹಿ ಕಾರು ಸೌಲಭ್ಯಗಳೊಂದಿಗೆ ಕಾರನ್ನು ಬಿಡುಗಡೆ ಮಾಡುತ್ತಿದೆ.
ಬಿಡುಗಡೆ(ಅಂದಾಜು)- 2018ರ ಮಾರ್ಚ್ ನಂತರ
ಬೆಲೆ (ಅಂದಾಜು)- 50 ಲಕ್ಷದಿಂದ 60 ಲಕ್ಷ

ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್
ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಈಗಾಗಲೇ ವಿವಿಧ ರೀತಿಯ ಕಾರು ಉತ್ಪನ್ನಗಳ ಮೂಲಕ ಜನಪ್ರಿಯತೆ ಗಳಿಸಿದ್ದು, ಮುಂಬರುವ ದಿನಗಳಲ್ಲಿ ತನ್ನ ನೆಚ್ಚಿನ ಕಾರು ಮಾದರಿಯಾದ ಡಸ್ಟರ್ ಫೇಸ್‌ಲಿಫ್ಟ್ ಬಿಡುಗಡೆಗೊಳಿಸುವ ತವಕದಲ್ಲಿದೆ.
ಬಿಡುಗಡೆ(ಅಂದಾಜು)- 2018ರ ಜೂನ್ ನಂತರ
ಬೆಲೆ (ಅಂದಾಜು)- 10 ಲಕ್ಷದಿಂದ 14 ಲಕ್ಷ
Trending On DriveSpark Kannada:
ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!
ರಸ್ತೆ ಮೇಲಿನ ಗುರುತುಗಳು ಏನನ್ನು ಸೂಚಿಸುತ್ತದೆ ಗೊತ್ತೇನು?
ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

ಸ್ಯಾಂಗ್‌ಯಾಂಗ್ ಟಿವೊಲಿ
ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಂಗ್‌ಯಾಂಗ್ ಸಂಸ್ಥೆಯು ಮಹೀಂದ್ರಾ ಜೊತೆಗೂಡಿ ದೇಶಿಯ ಮಾರುಕಟ್ಟೆಗಾಗಿ ವಿನೂತನ ಎಸ್‌ಯುವಿ ಮಾದರಿಯನ್ನು ಸಿದ್ಧಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಬಿಡುಗಡೆ(ಅಂದಾಜು)- 2018ರ ಮಧ್ಯಂತರ
ಬೆಲೆ (ಅಂದಾಜು)- 14 ಲಕ್ಷದಿಂದ 17 ಲಕ್ಷ

ನಿಸ್ಸಾನ್ ಕಿಕ್ಸ್
ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ನಿಸ್ಸಾನ್ ಸದ್ಯದಲ್ಲೇ ತನ್ನ ಹೊಸ ಮಾದರಿಯ ಕಿಕ್ಸ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 2018ರ ಮೂರನೇ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಹೊಸ ಮಾದರಿಯ ಕಾರು ಅದ್ಭತ ವಿನ್ಯಾಸ ಹೊಂದಿದೆ.
ಬಿಡುಗಡೆ(ಅಂದಾಜು)- 2018ರ ಜೂನ್ ನಂತರ
ಬೆಲೆ (ಅಂದಾಜು)- 12 ಲಕ್ಷದಿಂದ 15 ಲಕ್ಷ
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








