ಬಹುನೀರಿಕ್ಷಿತ 2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿಗಾಗಿ ಬುಕ್ಕಿಂಗ್ ಆರಂಭ
2018ರ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಹೊಸ ಕಾರು ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಈ ಮಧ್ಯೆ ಹೊಸ ಕಾರು ಖರೀದಿಗಾಗಿ ಅಧಿಕೃತ ಬುಕ್ಕಿಂಗ್‌ಗೆ ಚಾಲನೆ ನೀಡಲಾಗಿದೆ.
Recommended Video

ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಹೊಸ ಕಾರು ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಈ ಮಧ್ಯೆ ಹೊಸ ಕಾರು ಖರೀದಿಗಾಗಿ ಅಧಿಕೃತ ಬುಕ್ಕಿಂಗ್‌ಗೆ ಚಾಲನೆ ನೀಡಲಾಗಿದೆ.

ಮುಂದಿನ ತಿಂಗಳು ಫೆಬ್ರುವರಿ 7ರಿಂದ 2018ರ ಇಂಡಿಯನ್ ಆಟೋ ಎಕ್ಸ್‌ಪೋ ನಡೆಯಲಿದ್ದು, ಆಟೋ ಮೇಳದಲ್ಲಿ ಭಾಗಿಯಾಗಲಿರುವ ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಕಾರುಗಳು ಮಾರ್ಚ್‌ನ ಮೊದಲ ವಾರ ಗ್ರಾಹಕರ ಕೈ ಸೇರುವ ಸಾಧ್ಯತೆಗಳಿವೆ.

ಹೀಗಾಗಿ ಹೊಸ ಕಾರುಗಳ ಖರೀದಿ ತವಕದಲ್ಲಿರುವ ಗ್ರಾಹಕರು ಮಾರುತಿ ಸುಜುಕಿ ಅಧಿಕೃತ ಡೀಲರ್ಸ್‌ಗಳ ಬಳಿ ರೂ.11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದ್ದು, ಬುಕ್ಕಿಂಗ್ ಆರಂಭಗೊಂಡ ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚು ಮುಂಗಡಗಳು ಬಂದಿವೆ ಎನ್ನಲಾಗಿದೆ.

ಇದರ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಹಾಟ್ ಫೇವರಿಟ್ ಎಂದೇ ಬಿಂಬಿತವಾಗಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಕಾರಿನ ಬೆಲೆಗಳನ್ನು ಕೂಡಾ ರಿವಿಲ್ ಮಾಡಲಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆ 4.99 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆಯು 7.99 ಲಕ್ಷ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಈ ಹಿಂದೆಯೇ ಮಾತನಾಡಿದ್ದ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಕೈಲಾಸಿ ಅವರೇ ಹೊಸ ಕಾರಿನ ಬೆಲೆಯನ್ನು ಬಹಿರಂಗಗೊಳಿಸಿದ್ದರು.

ಪ್ರಮುಖವಾಗಿ ಬಲೆನೊ ಆರ್‌ಎಸ್ ಮತ್ತು ಡಿಜೈರ್ ಕಾರಿಗಿಂತಲೂ ಕಡಿಮೆ ಬೆಲೆ ಹೊಂದಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Trending On DriveSpark Kannada:
ಆಲ್ಟೋ 800 ಕಾರುಗಳ ಮಧ್ಯೆ ಭೀಕರ ಅಪಘಾತ- ಓರ್ವ ಯುವ ಕ್ರಿಕೆಟರ್ ದುರ್ಮರಣ
ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..
ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!
ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

ಇನ್ನು ಬಿಡುಗಡೆಗೊಳ್ಳಲಿರುವ 2018ರ ಸ್ವಿಫ್ಟ್ ಆವೃತ್ತಿಯು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರುವುದು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಬಹಿರಂಗಗೊಂಡಿದೆ.

ಹೀಗಾಗಿ ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ 50 ಕೆ.ಜಿ ತೂಕವನ್ನು ಕಡಿತಗೊಳಿಸಲಾಗಿದ್ದು, ಡಿಜೈರ್ ಕಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಜೋಡಿಸುವ ಮೂಲಕ ಮಾರುತಿ ಸುಜುಕಿ ಪ್ರಿಯರಿಗೆ ಡಬಲ್ ಧಮಾಕಾ ನೀಡಲಾಗುತ್ತಿದೆ.

ಎಂಜಿನ್ ಸಾಮರ್ಥ್ಯ
1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ಜೊತೆಗೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಮಾದರಿಯನ್ನು ಗ್ರಾಹಕರಿಗೆ ಒದಗಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಸ್ತರಿತ ಬೂಟ್ ಸ್ಪೆಸ್, ಆ್ಯಪಲ್ ಕಾರ್ ಪ್ಲೇ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕೂಡಾ ನೀಡಲಾಗುತ್ತಿದೆ.
Trending On DriveSpark Kannada:
ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ- 2ನೇ ಮಹಡಿಗೆ ಹಾರಿದ ಹೋದ ಕಾರು..!!
ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!
ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








