ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಬಹುತೇಕರು ಕಾರು ಖರೀದಿ ಮಾಡುವುದು ವಾಣಿಜ್ಯ ಬಳಕೆಗಾಗಿ ಇಲ್ಲವೊ ಕುಟುಂಬದೊಂದಿಗೆ ಹೊರ ಸಂಚಾರಕ್ಕೆ ಬಳಕೆ ಮಾಡುವುದನ್ನು ನೋಡಿದ್ದೇವೆ. ಇನ್ನು ಕೆಲವರು ವಾಹನಗಳ ಮೇಲಿನ ಕ್ರೇಜ್‌ಗಾಗಿ ವಾಹನ ಖರೀದಿ ಮಾಡಿ ಮಾಡಿಫೈ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಐಷಾರಾಮಿ ಕಾರೊಂದನ್ನು ಮಾಡಿಫೈ ಮಾಡಿಸಿ ದಿನಕ್ಕೆ ಸಾವಿರಾರು ರೂಪಾಯಿ ಆದಾಯ ಗಳಿಕೆ ಮಾಡುತ್ತಿದ್ದಾನೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ನೀವು ಈಗಾಗಲೇ ನಾನಾ ನಮೂನೆಯ ಮಾಡಿಫೈ ವಾಹನಗಳನ್ನು ನೋಡಿರುತ್ತೀರಿ. ಆದ್ರೆ ಮಾಡಿಫೈ ವಾಹನದ ಮೂಲಕ ದಿನಕ್ಕೆ ಸಾವಿರಾರು ರೂಪಾಯಿ ಗಳಿಕೆ ಮಾಡುತ್ತಿದ್ದಾನೆ ಅಂದ್ರೆ ನೀವು ನಂಬಲೇಬೇಕು. ಮಾಡಿಫೈಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಇಲ್ಲೊಬ್ಬ ಅದಕ್ಕೆ ತಕ್ಕಂತೆ ಆದಾಯ ಗಳಿಕೆ ಮಾಡುತ್ತಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಅಂದ ಹಾಗೆ ಡ್ಯಾನ್ಸಿಂಗ್ ಕಾರು ಅದು ಅಮಿರ್ ಖಾನ್ ನಟಿಸಿದ 'ಪಿಕೆ' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಡ್ಯಾನ್ಸಿಂಗ್ ಕಾರಾಲ್ಲ ಸ್ವಾಮಿ ಇದು ನಿಜವಾದ ಡ್ಯಾನ್ಸಿಂಗ್ ಕಾರು. ಇದು ತಾಳಕ್ಕೆ ತಕ್ಕ ಹಾಗೆ ಕುಣಿಯಬಲ್ಲದು ಎಂದರೆ ನಂಬುತ್ತೀರಾ.? ಇಲ್ಲಾ ಅಂದ್ರು ನಂಬಲೇಬೇಕು.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಹೌದು, ರಾಜಧಾನಿ ದೆಹಲಿಯಲ್ಲಿ ಇಂತದೊಂದು ಡ್ಯಾನ್ಸಿಂಗ್ ಕಾರಿದೆ ಆದ್ರೆ ಇದು ಯಾವ ಶೋರೂಂನಲ್ಲು ಸಿಗುವುದಿಲ್ಲ. ಏಕೆಂದ್ರೆ ಈ ಟೊಯೊಟಾ ಫಾರ್ಚ್ಯೂನರ್ ಕಾರಿನ ಈ ಮಾಲೀಕ ಮಾಡಿಫೈಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಬಂದು ದೆಹಲಿಯಲ್ಲಿ ವಾಸ ಮಾಡುತ್ತಿರುವ 32 ವರ್ಷದ ಕಮಲ್ ಕಶ್ಮೀರಿ ಎಂಬಾತನೆ ಈ ಡ್ಯಾನ್ಸ್ ಮಾಡುವ ಟೊಯೊಟಾ ಫಾರ್ಚ್ಯೂನರ್ ಎಸ್‍ಯುವಿ ಕಾರಿನ ಮಾಲೀಕನಾಗಿದ್ದು, ಈತ ಫಾರ್ಚ್ಯೂನರ್ ಕಾರನ್ನು ಡ್ಯಾನ್ಸಿಂಗ್ ಕಾರಾಗಿ ಪರಿವರ್ತಿಸಲು ಬರೋಬ್ಬರಿ 8 ಲಕ್ಷ ಖರ್ಚು ಮಾಡಿದ್ದಾನೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಸಾವಿರಾರು ರೂಪಾಯಿ ಸಂಪಾದನೆ

ಇನ್ನು ಮಾಡಿಫೈ ಕಾರಿನ ಡ್ಯಾನ್ಸ್‌ ನೋಡಲು ಜನಮುಗಿಬೀಳುತ್ತಿದ್ದು, ಮದುವೆ ಮತ್ತು ಇನ್ನಿತರೆ ಸಮಾರಂಭಗಳಲ್ಲಿ ಜನರಿಗೆ ಮನರಂಜನೆಯನ್ನು ನೀಡಲು ಕಮಲ್ ಅವರು ತನ್ನ ಫಾರ್ಚೂನರ್ ಕಾರನ್ನು ಈ ರೀತಿ ಮಾಡಿಫೈ ಮಾಡಿಸಿದ್ದಾರೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಸಾಧಾರಣ ಟೊಯೊಟಾ ಫಾರ್ಚೂನರ್ ಕಾರನ್ನು ಡ್ಯಾನ್ಸಿಂಗ್ ಕಾರನ್ನಾಗಿ ಪರಿವರ್ತಿಸಲು ಸುಮಾರು 8 ಲಕ್ಷದ ವೆಚ್ಚ ಮಾಡಿರುವ ಕಾರು ಮಾಲೀಕ ಕಮಲ್, ಡ್ಯಾನ್ಸಿಂಗ್ ಕಾರನ್ನು ಬಳಸಿಕೊಂಡು ದಿನವೊಂದಕ್ಕೆ ರೂ.20 ಸಾವಿರದಿಂದ ರೂ.25 ಸಾವಿರ ಸಂಪಾದನೆ ಮಾಡುತ್ತಿದ್ದಾನೆ ಅಂದ್ರೆ ನಂಬಲೇಬೇಕು.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಯಾಕೆಂದ್ರೆ ಈ ಡ್ಯಾನ್ಸಿಂಗ್ ಕಾರಿಗೆ ದೆಹಲಿ ಮತ್ತು ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಮದುವೆ ಮತ್ತು ಇನ್ನಿತರೆ ಸಮಾರಂಭಳಿಗೆ ಡ್ಯಾನ್ಸಿಂಗ್ ಕಾರನ್ನು ಬಳಸಿಕೊಂಡು ಮನರಂಜಿಸಲು ಸುಮಾರು ಜನ ಬುಕ್ಕಿಂಗ್ ಮಾಡುತ್ತಿದ್ದಾರೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಈ ಕಾರು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದಿದೆ ಎಂದ್ರೆ, ಈಗ ಜನರು ತಮ್ಮ ಕಾರಿನ ಮೂಲಕ ಕಮಲ್ ಅವರನ್ನು ಗುರುತಿಸುತ್ತಿದ್ದು, ಡ್ಯಾನ್ಸಿಂಗ್ ಕಾರಿನ ಪರ್ಫಾಮೆನ್ಸ್ ಕುರಿತಾಗಿ ಸೋಷಿಯಲ್ ಮೀಡಿಯಾಗಳಲ್ಲೂ ಭಾರೀ ಚರ್ಚೆಗಳು ನಡೆಯುತ್ತಿವೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಮಾರು 7 ರಿಂದ 8 ಲಕ್ಷ ಖರ್ಚು ಮಾಡಿ ಮಾಡಿಫೈ ಮಾಡಲಾದ ಈ ಡ್ಯಾನ್ಸಿಂಗ್ ಕಾರನ್ನು ಸಮಾರಂಭಗಳಲ್ಲಿ ಪರ್ಫಾಮೆನ್ಸ್ ಮಾಡಿಸುವುದು ಮತ್ತು ನಿರ್ವಹಣೆಗಾಗಿ ಇಬ್ಬರೂ ಅಸಿಸ್ಟಂಟ್‌ಗಳನ್ನು ಸಹ ಕಾರು ಮಾಲೀಕ ಕಮಲ್ ನೇಮಕ ಮಾಡಿದ್ದಾರೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಕಾರು ಡ್ಯಾನ್ಸ್ ಮಾಡುವುದು ನಿಜವೇ?

ಇಂತದೊಂದು ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಆದ್ರೆ ಪ್ರಶ್ನೆಗೆ ಉತ್ತರ ಅಂದ್ರೆ ಅದು ಹೌದು ಡ್ಯಾನ್ಸ್ ಮಾಡಬಹುದು ಎನ್ನಬಹುದು. ಕಾರಣ, ಕಾರಿನ ಮುಂಭಾಗದ ಸಸ್ಷೆಷನ್‍ಗೆ ಹೈಡ್ರಾಲಿಕ್ಸ್ ಅನ್ನು ಜೋಡಿಸುವ ಮೂಲಕ ಹೀಗೆ ಮಾಡಿಫೈ ಮಾಡಬಹುದು.

ಈಗಾಗಲೇ ದೇಶದಲ್ಲಿ ಹಲವಾರು ಕಾರು ಮಾಲೀಕರು ತಮ್ಮ ಕಾರುಗಳಲ್ಲಿ ಇಂತಹ ಮಾಡಿಫೈ ಸೌಲಭ್ಯವನ್ನು ಹೊಂದಿದ್ದು, ಒಂದು ಹೆಜ್ಜೆ ಮುಂದೆ ಹೋಗಿರುವ ಫಾರ್ಚೂನರ್ ಮಾಲೀಕ ಕಮಲ್ ಇದನ್ನೇ ಆದಾಯ ಗಳಿಕೆಯ ಮೂಲ ಮಾಡಿಕೊಂಡಿರುವುದೇ ಇಲ್ಲಿನ ವಿಶೇಷ ಅಷ್ಟೇ.

Source: IndianExpressOnline

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಇನ್ನು ಡ್ಯಾನ್ಸಿಂಗ್ ಕಾರು ನೋಡಿದ್ದು ಆಯ್ತು ಇದೀಗ ಬಂಗಾರದ ಲೇಪನಗಳನ್ನ ಹೊಂದಿರುವ ರಾಯಲ್ ಎನ್‍ಫೀಲ್ಡ್ ಬೈಕನ್ನು ಎಲ್ಲಾದರೂ ಕಂಡಿದ್ದೀರಾ.? ಹಾಗಾದ್ರೆ ಬಂಗಾರದ ಲೇಪನ ಹೊಂದಿರುವ ಈ ಮಾಡಿಫೈ ರಾಯಲ್ ಎನ್‍ಫೀಲ್ಡ್ ಬೈಕಿನ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ..

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಗೋವಾನಲ್ಲಿನ ಯುವಕನೊಬ್ಬ ತನ್ನ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಬಂಗಾರದ ಫಲಕಗಳಿಂದ ಮಾಡಿಫೈ ಮಾಡಿಸಿದ್ದು, ರಸ್ತೆಯಲ್ಲಿ ಪ್ರಯಾಣಿಸುವಾಗ ಹಲವರ ದೃಷ್ಟಿಯನ್ನು ತನ್ನ ಬೈಕಿನ ಮೇಲೆ ತಿರುಗುವ ಹಾಗೆ ವಿನ್ಯಾಸ ಮಾಡಿದ್ದಾನೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಗೋಲ್ಡ್ ಫಲಕಗಳಿಂದ ಸುತ್ತುವರೆದ ಈ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್ ಗೋವಾನಲ್ಲಿ ಕಾಣಿಸಿಕೊಂಡಿದ್ದು, ಬೈಕಿನ ಹೆಡ್‍‍ಲ್ಯಾಂಪ್‍‍ನಿಂದ ಹಿಡಿದು ಸಸ್ಪೆಂಷನ್‍ನ ವರೆಗು ಗೋಲ್ಡ್ ಪೆಯಿಂಟ್‍‍ನಿಂದ ಸಜ್ಜುಗೊಳಿಸಿರುವುದು ನೀವಿಲ್ಲಿ ಕಾಣಬಹುದಾಗಿದೆ. ಅಷ್ಟೆ ಅಲ್ಲಾ ಬೈಕಿನ ವ್ಹೀಲ್ ಸ್ಪೋಕ್‍‍ಗಳಿಗೂ ಈತ ಗೋಲ್ಡ್ ಪೆಯಿಂಟ್ ಅನ್ನು ನೀಡಿದ್ದಾನೆ ನೋಡಿ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಎಂಜಿನ್ ಭಾಗವನ್ನು ಮಾತ್ರ ಗೋಲ್ಡ್ ಶ್ರಾಡ್‍‍ಗಳಿಂದ ಸಜ್ಜುಗೊಳಿಸಿದ್ದು, ಎಂಜಿನ್ ಕವರ್ ಗೋಲ್ಡ್ ಟ್ರೀಟ್ಮೆಂಟ್ ಅನ್ನು ಪಡೆದುಕೊಂಡಿದೆ. ವಿಚಿತ್ರವೆಂದರೆ ಈ ರಾಯಲ್ ಎನ್‍ಫೀಲ್ಡ್ ಬೈಕಿನ ಶಾಕ್ ಅಬ್ಸಾರ್ಬರ್ ಮತ್ತು ಎಂಜಿನ್ ಕವರ್ ಅನ್ನೂ ಸಹ ಗೋಲ್ಡ್ ಬಣ್ಣದಿಂದ ತುಂಬಿರುವುದು.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಆದರೆ ಬೈಕಿನ ಹೆಚ್ಚಿನ ಭಾಗಗಳಲ್ಲಿ ಈ ಬಣ್ಣವು ಬಹಳ ದಿನಗಳ ವರೆಗು ಉಳಿಯುವುದಿಲ್ಲ ಮತ್ತು ಇದರ ಸ್ಪೋಕ್ಡ್ ರಿಮ್‍‍ಗಳನ್ನು ಪೆಯಿಂಟ್ ಮಾಡಿರುವುದು ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಬೈಕಿನ ಡಿಸ್ಕ್ ಬ್ರೇಕ್ ಮತ್ತು ಹ್ಯಾಂಡಲ್‍‍ಬಾರ್‍‍ಗಳಿಗೆ ಕೂಡಾ ಗೋಲ್ಡ್ ಟ್ರೀಟ್ಮೆಂಟ್ ನೀಡಲಾಗಿದೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ರಾಯಲ್ ಎನ್‍‍ಫೀಲ್ಡ್ ಲಾಂಛನವನ್ನು ಸಹ ಚಿನ್ನದ ಬಣ್ಣದಲ್ಲಿ ಆವರಿಸಲಾಗಿದೆ. ಚಿನ್ನದ ಬಣ್ಣಕ್ಕೆ ಬದಲಾಗುತ್ತಿರುವ ದೇಶದ ಮಧ್ಯಮ ಪೂರ್ವದಲ್ಲಿನ ದುಬಾರಿ ವಾಹನಗಳು ಶುದ್ಧ ಚಿನ್ನದ ಲೇಪಿತವನ್ನು ಪಡೆದಿರುವ ಮಾಡಿಫಿಕೇಷನ್ ಅನ್ನು ಪಡೆಯುತ್ತವೆ. ಆದಾಗ್ಯೂ, ಭಾರತದಲ್ಲಿ, ಇಂತಹ ಕೆಲವು ವಾಹನಗಳನ್ನು ಮಾತ್ರ ಕಾಣಬಹುದಾಗಿದೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಬೈಕಿನ ಬಹುತೇಕ ಭಾಗಗಳನ್ನು ಚಿನ್ನದ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಜೊತೆಗೆ ಮಾಡಿಫೈ ಆದ ಹೆಡ್‍‍ಲೈಟ್‍‍ಗಳನ್ನು ಸಹ ನೀವು ಗಮನಿಸಬಹುದಾಗಿದೆ. ಈ ಮಾಡಿಫೈ ಮಾಡಲಾದ ಹೆಡ್‍ಲ್ಯಾಂಪ್‍‍ಗಳು ಎಲ್ಇಡಿ‍ಗಳನ್ನು ಪಡೆದುಕೊಂಡಿದೆ. ಇವುಗಳನ್ನು ಹೊರತುಪಡಿಸೆ ಬೇರೆಲ್ಲ ಭಾಗಗಳು ಬೈಕಿನೊಂದಿಗೆ ಬಂದಿದೆ ಎಂಬುದು ತಿಳಿಯಬಹುದು.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಈ ಬೈಕ್ ಅನ್ನು ರೀಪೆಯಿಂಟ್ ಮಾಡಲಾಗಿದ್ದು, ದೇಶದಲ್ಲಿ ಯಾವುದೇ ವಾಹನದ ಬಣ್ಣವನ್ನು ಬದಲಾಯಿಸುವುದು ಕಾನೂನಿನ ಪ್ರಕಾರ ಅಪರಾದ. ವಾಹನವನ್ನು ಕೊಳ್ಳುವಾಗ ನೀಡಲಾಗುವ ನೋಂದಣಿ ಧೃಢಿಕರಣ ಪತ್ರದಲ್ಲಿ ಯಾವ ಬಣ್ಣಗಳನ್ನು ಉಲ್ಲೇಖಿಸಲಾಗಿದೆಯೊ ಅದೇ ಬಣ್ಣಗಳಲ್ಲಿ ಆ ವಾಹನಗಳು ಇರಬೇಕು.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ನೀವು ನಿಮ್ಮ ನೆಚ್ಚಿನ ಬಣ್ಣವನ್ನು ನೀಡಬೇಕೆಂಬ ಆಸೆ ಇದ್ದರೆ ಆಗ ನಿಮ್ಮ ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ಮೂಲ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ಉಲ್ಲೇಖಿಸಬೇಕಿರುತ್ತದೆ. ಈಗಲೂ ಸಹ ನೂತನವಾದ ಡ್ಯುಯಲ್ ಟೋನ್ ಬಣ್ಣಗಳ ಬಣ್ಣವನ್ನು ಸಹ ನೋಂದಣಿ ಪ್ರಮಾಣ ಪತ್ರದಲ್ಲಿ ಡ್ಯುಯಲ್ ಟೋನ್ ಬಣ್ಣವೆಂದೇ ಉಲ್ಲೇಖಿಸಲಾಗಿರುತ್ತದೆ.

ಡ್ಯಾನ್ಸ್ ಮಾಡುವ ಈ ಮಾಡಿಫೈ ಕಾರಿನ ದಿನದ ಗಳಿಕೆ ಎಷ್ಟು ಗೊತ್ತಾ?

ಅದಾಗ್ಯೂ ಯಾವುದೇ ವಾಹನದ ನಿಜ ಬಣ್ಣ ಮತ್ತು ಹೊಸ ನೋಟವನ್ನು ನೀಡಲು ವಿವಿಧ ಹೊದಿಕೆಗಳನ್ನು ನೀಡಲಾಗುತ್ತದೆ. ವಾಹನಗಳಿಗೆ ವ್ರ್ಯಾಪಿಂಗ್ ಮಾಡುವುದು ಕಾನೂನುಬದ್ದವಾಗುರುತ್ತದೆ. ಅದಲ್ಲದೇ ಈ ವ್ರ್ಯಾಪಿಂಗ್ ಹೊಸ ಲುಕ್ ಅನ್ನು ನೀಡುವಾಗ ಆ ವಾಹನದ ಮೂಲ ಬಣ್ಣವನ್ನು ಕಾಪಾಡುತ್ತದೆ. ಮತ್ತು ವ್ರ್ಯಾಪಿಂಗ್ ಎಂಬುದು ವಾಹನದ ಪೂರ್ಣ ಬಣ್ಣವನು ಬದಲಾಯಿಸುವುದಕ್ಕಿಂತಾ ಸುಲಭವಂತೆ..!!

Kannada
English summary
Toyota Fortuner SUV modified to dance – Owner earns Rs 25k per performance.
Story first published: Saturday, November 24, 2018, 11:58 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more