ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಜರ್ಮನ್ ಮೂಲದ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ 2018ರ ವಿಶೇಷ ಕಾರು ಆವೃತ್ತಿಗಳ ರೋಡ್‍‍ಮ್ಯಾಪ್ ಅನಾವರಣಗೊಳಿಸಿದ್ದು, 2017ರ ಅವಧಿಯಲ್ಲಿ ಜನಪ್ರಿಯತೆಯಲ್ಲಿ ಮಹತ್ತರ ಬದಲಾವಣೆಯನ್ನು ಕಂಡುಕೊಂಡಿದೆ.

By Rahul Ts

ಫೋಕ್ಸ್‌ವ್ಯಾಗನ್ ಸಂಸ್ಥೆಯು ಟಿಗ್ವಾನ್ ಮತ್ತು ಹೊಸ ತಲೆಮಾರಿನ ಪಸ್ಸಾಟ್ ಕಟೆರಿಂಗ್ ಪ್ರಿಮಿಯಂ ಸೆಗ್ಮೆಂಟ್‍ನಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ 2018ರಲ್ಲಿ ಸಂಸ್ಥೆಯು ತನ್ನ ಹೊಸ ಕಾರುಗಳ ಆವೃತ್ತಿ ಮತ್ತು ಸ್ಪೆಷಲ್ ಎಡಿಷನ್ ಗಳನ್ನು ಪರಿಚಯಿಸಲು ಮುಂದಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಮಾಹಿತಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಹೊಸ ಆಮಿಯೊ ಜಿಟಿ ಟಿಎಸ್ಐ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದ್ದು, ಇದು ತನ್ನ ಹಳೆಯ ಸ್ಪೋರ್ಟಿ ಮಾದರಿಯಲ್ಲದೇ ಸಾಧರಣ ಸೆಡಾನ್ ಮಾದರಿಯಲ್ಲಿ ಬಿಡುಗಡೆಗೊಳ್ಳಲಿದೆ. ಹೊಸ ಕಾರನ್ನು ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಎಂಜಿನ್ ಸಾಮರ್ಥ್ಯ

ಹೊಸ ಎಮಿಯೊ ಜಿಟಿ ಟಿಎಸ್ಐ ಕಾರು ಪೋಲೊ ಜಿಟಿ ಟಿಎಸ್ಐ ಕಾರಿನ ಪವರ್ ರ್ಟ್ರೈನ್ ಆಧರಿಸಲಿದ್ದು, 1.2 ಲೀಟರ್ ಟರ್ಬೋಚಾರ್ಜ್ಸ್ಡ್ ಪೆಟ್ರೋಲ್ ಎಂಜಿನ್ 104ಬಿಹೆಚ್‍ಪಿ ಮತ್ತು 175ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗೆಯೇ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಎಮಿಯೊ ಜಿಟಿ ಟಿಎಸ್ಐ ಕಾರು ಸೆಡಾನ್ ಕಾರುಗಳು ಸರಣಿಯಲ್ಲಿ ಶಕ್ತಿಶಾಲಿಯಾದ ಸಬ್‍ ಕಂಪಾಕ್ಟ್ ಆಗಿದ್ದು, ಪೋಲೋ ಜಿಟಿ ಟಿಎಸ್ಐಗಿಂತ ಫೋಕ್ಸ್‌ವ್ಯಾಗನ್ ವೆಂಟೊ ಟಿಎಸ್ಐ ತೂಕದಲ್ಲಿ ಭಾರವಾಗಿದೆ ಆದರೂ ಹ್ಯಾಚ್‌ಬ್ಯಾಕ್ ಉತ್ತಮ ಶಕ್ತಿಯಿಂದ ತೂಕದ ಅನುಪಾತಕ್ಕೆ ಲಾಭದಾಯಕವಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಹಿಂದಿನ ದಿನಗಳಲ್ಲಿ ಸಂಸ್ಥೆಯು ಎಮಿಯೊ ಡೀಸೆಲ್ ಮಾದರಿಯನ್ನು ಆಟೋಮ್ಯಾಟಿಕ್ ಜೊತೆಗೆ ನೀಡುತಿತ್ತು. ಆದರೆ ಜಿಟಿ ಟಿಎಸ್ಐ ಜೊತೆಗೆ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಗಳಲ್ಲಿ ದೊರೆಯಲಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಎಕ್ಸ್ಂಟ್, ಹೊಸ ಹೋಂಡಾ ಅಮೇಜ್ ಮತ್ತು ಫೋರ್ಡ್ ಆಸ್ಫೈರ್ ಕಾರುಗಳಿಗೆ ಇದು ಪೈಪೋಟಿಯನ್ನು ನೀಡಲಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಹೊಸ ಹೋಂಡಾ ಅಮೇಜ್ ಮತ್ತು ಹ್ಯುಂಡೈ ಡಿಜೈರ್ ಕಾರುಗಳು ಎಮಿಯೋ ಜಿಟಿ ಟಿಎಸ್ಐ ಕಾರಿಗೆ ತೀವ್ರ ಪೋಟಿಯಾಗಿದ್ದು, ಎರಡೂ ಸಂಸ್ಥೆಯ ಕಾರುಗಳು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಗೆ ಆಯ್ಕೆಯಾಗಿ ನೀಡಲಿವೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಎಮಿಯೊ ಜಿಟಿ ಟಿಎಸ್ಐಯೊಂದಿಗೆ ಫೋಕ್ಸ್‌ವ್ಯಾಗನ್ ಮಾರುಕಟ್ಟೆಯಲ್ಲಿ ತನ್ನ ಮೊದಲ ಸಬ್‍‍ಕಾಂಪಾಕ್ಟ್ ಸೆಡಾನ್ ಅನ್ನು ಉತ್ತಮಗೊಳಿಸಲಿದ್ದು, ಈ ಕಾರು ತನ್ನ ಸರಣಿಯಲ್ಲಿ ಹೊಸ ಇತಿಹಾಸವನ್ನು ಬರೆಯಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಹೊಸ ಫೋಕ್ಸ್‌ವ್ಯಾಗನ್ ಜಿಟಿ ಟಿಎಸ್‍ಐ

ಇನ್ನು ಮೈಲೇಜ್ ವಿಷಯದಲ್ಲಿ ಹೇಳುವುದಾದರೆ ಎಮಿಯೊ ಜಿಟಿ ಟಿಎಸ್ಐ ಕಮ್ಮಿ ಮೈಲೇಜ್ ನೀಡುವುದರಿಂದ ಭಾರತದ ಗ್ರಾಹಕರು ಹೆಚ್ಚು ಮೈಲೇಜ್ ಕೊಡುವ ವಾಹನಗಳನ್ನು ಖರೀದಿಸಲು ಇಚ್ಛಿಸುತ್ತಿದ್ದು, ಆದ್ದರಿಂದ ಭಾರತದಲ್ಲಿ ಹೆಚ್ಚು ಗ್ರಾಹಕರನ್ನು ಗಳಿಸಲು ಸಂಸ್ಥೆಯು ತನ್ನ ಎಮಿಯೊ ಜಿಟಿ ಟಿಎಸ್ಐ ಕಾರಿನಲ್ಲಿ ಹೆಚ್ಚು ಮೈಲೇಜ್ ಅನ್ನು ನೀಡಬೇಕು ಎನ್ನಲಾಗಿದೆ.

Most Read Articles

Kannada
Read more on volkswagen sedan
English summary
Volkswagen Ameo GT TSI Launch Date Details: Expected Price, Specs And Features.
Story first published: Saturday, March 3, 2018, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X