ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

Written By: Rahul TS

ಜರ್ಮನ್ ಮೂಲದ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಹೊಸ ಐ.ಡಿ ವಿಜನ್ ಕಾರಿನ ಪರಿಕಲ್ಪನೆಯನ್ನು 2018ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಇದು ಆಟೊನೊಮಸ್ ಎಲೆಕ್ಟ್ರಿಕ್ ಕಾರ್ ಪರಿಕಲ್ಪನೆಯಾಗಿದೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಫೋಕ್ಸ್‌ವ್ಯಾಗನ್ ಐ.ಡಿ ವಿಜನ್ ಪರಿಕಲ್ಪನೆ ಸಂಸ್ಥೆಯ ಎಲೆಕ್ಟ್ರಿಕ್ ಎಂಇಬಿ ವೇದಿಕೆಯನ್ನು ಆಧರಿಸಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದ ಆಕ್ಸಿಲ್ ಎಲೆಕ್ಟ್ರಿಕ್ ಮೋಟಾರ್ಸ್ 306 ಬಿಹೆಚ್‍ಪಿ ಉತ್ಪಾದಿಸುವ ಔಟ್‍‍ಪುಟ್ ಪಡೆಲಿದೆ. ಹೀಗಾಗಿ ಕಾರಿನಲ್ಲಿ 111 ಕಿಲೋವ್ಯಾಟ್ಸ್ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, ಸುಮಾರು 665 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿರಲಿದೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಇನ್ನು ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸಾಮಾನ್ಯ ಮಾದರಿಗಳಿಂತ ಭಿನ್ನವಾಗಿದ್ದು, ಧ್ವನಿ ಆದೇಶಗಳು ಮತ್ತು ಸಜ್ಞೆಗಳ ಮೂಲಕ ಕಾರನ್ನು ನಿಯಂತ್ರಿಸಬಹುದಾಗಿದೆ. ಹಾಗೆಯೇ ಕಾರಿನ ನೆಟ್‍‍ವರ್ಕ್ಸ್ ಸೆನ್ಸಾರ್‍‍ಗಳು ಮತ್ತು ಕೃತಕ ಬುದ್ದುಮತ್ತೆ ಸಹಾಯದಿಂದ ಕಾರಿನ ಚಲಾವಣೆಯನ್ನು ನಿಯಂತ್ರಿಸಬಹುದಂತೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಕಾರಿನ ವಿನ್ಯಾಸವು ಬೇರೆ ಐ.ಡಿ ಕಾರುಗಳ ವಿನ್ಯಾಸವನ್ನು ಹೋಲಲಿದ್ದು, ಹೆಡ್‍ಲ್ಯಾಂಪ್ ಐ.ಡಿ ಕ್ರೋಜ್‍ನಿಂದ ಪಡೆದುಕೊಂಡಿದೆ. ಇನ್ನು ಐ.ಡಿ ವಿಜನ್ ಪರಿಕಲ್ಪನೆಯ ರೂಫ್‍‍ಲೈನ್ ಕವಚಗಳು ಕಾರಿನ ಭವಿಷ್ಯದ ರೂಪವನ್ನು ನೀಡಿದೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಐ.ಡಿ ಪರಿಕಲ್ಪನೆಯ ಕಾರುಗಳು ಲೆಸರ್ಸ್, ರಾಡರ್ಸ್ ರಾಡರ್ ಸೆಂಸಾರ್ಸ್, ಕ್ಯಾಮೆರಾ ಮತ್ತು ಇನ್ನಿತರೆ ತಂತ್ರಜ್ಞಾನವನ್ನು ಹೊಂದಿದ್ದು, ಕಾರಿನ ಆನ್‍‍ಬೋರ್ಡ್ ಕಂಪ್ಯೂಟರ್ ಕ್ಲೌಡ್ ಸಹಾಯದಿಂದ ಟ್ರಾಫಿಕ್ ಅನ್ನು ಮಾನಿಟರ್ ಮಾಡಲಿದೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಕಾರಿನ ಒಳ ವಿನ್ಯಾಸವು ಕ್ಯಾಪ್ಟೈನ್ ಸೀಟ್ ಮತ್ತು ದಪ್ಪದಾದ ಕಾರ್‍‍ಪೆಟಿಂಗ್ ಪಡೆದಿದ್ದು, ಉದ್ದವಾದ ಕಿಟಕಿಗಳು ಮತ್ತು ಗ್ಲಾಸ್ ರೂಫ್ ಅನ್ನು ಪಡೆದಿದೆ. ಇದಲ್ಲದೆ ಮೈಕ್ರೋಸಾಫ್ಟ್ ನ ಹಾಲೊಲೆನ್ಸ್ ವಾಸ್ತವಿಕತೆಯನ್ನು ಹೆಚ್ಚಿಸಲಿದ್ದು, ಮುಂಭಾಗದ ಸವಾರರಿಗೆ ವರ್ಚುವಲ್ ಡಿಸ್ಪ್ಲೇ ಮಾಡಲಿದೆ.

ಕೃತಕ ಬುದ್ಧಿಮತ್ತೆ ಸಹಾಯದಿಂದ ಚಲಿಸುತ್ತೆ ಈ ಕಾರು..!

ಮುಂದಿನ ತಲೆಮಾರಿನ ವಿನ್ಯಾಸ ಮತ್ತು ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಸೆಡಾನ್ ಕಾರು ಗ್ರಾಹಕರಿಗೆ ಹೊಸ ಕಾರಿನ ಹೊಸ ಆವಿಷ್ಕಾರದ ವಿನ್ಯಾಸದ ಅನುಭವವನ್ನು ಸವಿಯಬಹುದಾಗಿದ್ದು, ಇನ್ನು ಕಾರು ಬಿಡುಗಡೆಗೊಂಡಲ್ಲಿ ಕಾರುಗಳ ಜಗತ್ತಿನ ನೋಟವನ್ನೇ ಬದಲಾಯಿಸಲಿದೆ.

Read more on volkswagen evergreen sedan
English summary
Volkswagen I.D. Vizzion Concept Revealed.
Story first published: Tuesday, March 6, 2018, 19:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark