ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಜಾಗತಿಕವಾಗಿ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ವಿಶ್ವಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳ ಬಳಕೆಗೆ ಕಡಿವಾಣ ಹಾಕಲು ಹತ್ತಾರು ಪ್ರಯತ್ನಗಳು ನಡೆಯುತ್ತಲೇ ಇವೆ.

By Praveen Sannamani

ಜಾಗತಿಕವಾಗಿ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ವಿಶ್ವಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳ ಬಳಕೆಗೆ ಕಡಿವಾಣ ಹಾಕಲು ಹತ್ತಾರು ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಮಧ್ಯೆ ವೊಲ್ಪೋ ಸಂಸ್ಥೆಯು ಪ್ರಕಟಿಸಿರುವ ಹೊಸ ನಿರ್ಧಾರವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆಗೆ ಸೃಷ್ಠಿಯಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸರ್ಕಾರದಿಂದ ಕೂಡಾ ವಿಶೇಷ ಪ್ರೋತ್ಸಾಹ ಕೂಡಾ ದೊರೆಯುತ್ತಿದೆ. ಈ ಹಿನ್ನೆಲೆ ಸ್ವಿಡನ್ ಮೂಲದ ಜನಪ್ರಿಯ ಕಾರು ಉತ್ಪಾದನೆ ಸಂಸ್ಥೆಯಾದ ವೊಲ್ವೋ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗಾಗಿ ಬೃಹತ್ ಯೋಜನೆ ರೂಪಿಸಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಮಾಲಿನ್ಯ ಉತ್ಪಾದನೆಯಲ್ಲಿ ಅತಿದೊಡ್ಡ ಪಾಲು ಹೊಂದಿರುವ ಡಿಸೇಲ್ ಎಂಜಿನ್‌ ಉತ್ಪಾದನೆಗೆ ಗುಡ್ ಬೈ ಹೇಳಿರುವ ವೊಲ್ವೋ ಸಂಸ್ಥೆಯು ಇನ್ಮುಂದೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ ಉತ್ಪಾದನೆಗೆ ಮುಂದಾಗಿದ್ದು, 2019ರ ನಂತರ ಪೆಟ್ರೋಲ್ ಕಾರು ಮಾದರಿಗಳ ಉತ್ಪಾದನೆಯನ್ನು ಕೈಬಿಡುವ ಸುಳಿವು ನೀಡಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

2030ರ ವೇಳೆಗೆ ದೇಶದಲ್ಲಿ ಶೇ.90ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಹಲವು ಕ್ರಮಕೈಗೊಳ್ಳುತ್ತಿದ್ದು, ಪರಿಣಾಮ ಪ್ರತಿಷ್ಠಿತ ಕಾರು ಉತ್ಪಾದಕರು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಆಸಕ್ತಿ ವಹಿಸುತ್ತಿದ್ದಾರೆ. ಜೊತೆಗೆ ಭವಿಷ್ಯದ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಕೂಡಾ ಮಾಡುತ್ತಿದ್ದಾರೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಸದ್ಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ವೊಲ್ವೋ ಕೂಡಾ ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿದ್ದು, ಇನ್ಮುಂದೆ ಡೀಸೆಲ್ ಕಾರುಗಳನ್ನು ಉತ್ಪಾದನೆ ಮಾಡದಿರಲು ನಿರ್ಧರಿಸಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಕಾರುಗಳಿಗೂ ಗುಡ್ ಬೈ ಹೇಳಲಿದ್ದು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳನ್ನು ಮಾತ್ರ ಅಭಿವೃದ್ಧಿಗೊಳಿಸಲಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಈ ಹಿನ್ನೆಲೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಿದ್ದು, ಸದ್ಯದಲ್ಲೇ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ನಡೆಸಲಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಇದಲ್ಲದೇ 2019ರ ನಂತರ ಉತ್ಪಾದನೆಗೊಳ್ಳುವ ಪ್ರತಿಯೊಂದು ವೊಲ್ವೋ ಕಾರು ಮಾದರಿಗಳು ಎಲೆಕ್ಟ್ರಿಕ್ ಎಂಜಿನ್‌ ಪ್ರೇರಣೆ ಹೊಂದಲಿದ್ದು, ಈ ಮೂಲಕ ಮೆಕ್ ಇನ್ ಇಂಡಿಯಾ ಯೋಜನೆಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತಪಡಿಸುತ್ತಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದು ಭವಿಷ್ಯದ ದೃಷ್ಠಿಯಿಂದ ಅನಿವಾರ್ಯವಾಗಿದ್ದು, 2030ರ ವೇಳೆಗೆ ಎಲ್ಲಾ ಆಟೋ ಉತ್ಪಾದಕರು ಶೇ. 90ರಷ್ಟು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸುವ ತವಕದಲ್ಲಿದ್ದಾರೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಇದನ್ನು ಈಗಾಗಲೇ ಕಾರ್ಯರೂಪಕ್ಕೆ ತಂದಿರುವ ವೊಲ್ವೋ ಸಂಸ್ಥೆಯು ತನ್ನ ಹೊಸ ಸೆಡಾನ್ ಮಾದರಿಯಾದ ಎಸ್60 ಕಾರುಗಳನ್ನು ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಮಾತ್ರ ಹೊರತಂದಿದ್ದು, ಇನ್ಮುಂದೆ ಉತ್ಪಾದನೆಯಾಗುವ ಯಾವುದೇ ಕಾರು ಕೂಡಾ ಡೀಸೆಲ್ ಆವೃತ್ತಿಯನ್ನು ಹೊಂದಿರುವುದಿಲ್ಲ ಎಂದಿದೆ.

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವೊಲ್ವೋ ಸಂಸ್ಥೆಯು ಪ್ರಕಟಿಸಿರುವ ನಿರ್ಧಾರವು ಆಟೋ ಉದ್ಯಮದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದಲ್ಲದೇ ಇದೇ ನಿರ್ಧಾರವನ್ನು ಇನ್ನುಳಿದ ಆಟೋ ಉತ್ಪಾದಕರು ಸಹ ಕಠಿಣ ನಿರ್ಣಯಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಗಳಿದ್ದು, ಪೂರ್ಣ ಪ್ರಮಾಣದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಗೆ ಗುಡ್ ಬೈ ಹೇಳುವ ಕಾಲ ಸನ್ನಿಹಿತವಾಗಿದೆ.

Most Read Articles

Kannada
English summary
Volvo says goodbye to diesels.
Story first published: Tuesday, May 22, 2018, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X