ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಫೋರ್ಸ್ ಮೋಟಾರ್ಸ್ ತನ್ನ ಎಸ್‍‍ಯುವಿ ಸರಣಿಯನ್ನು ನವೀಕರಿಸಿ ಕ್ರ್ಯಾಶ್ ಹಾಗೂ ಹೊಸ ಮಾಲಿನ್ಯ ನಿಯಮಗಳ ಅಡಿಯಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದೆ. ಸಂಪೂರ್ಣ ಮರೆಮಾಡಲಾಗಿರುವ ಪರೀಕ್ಷಾ ಮಾದರಿಗಳನ್ನು ಇತ್ತೀಚೆಗೆ ಸಾರ್ವಜನಿಕವಾಗಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ರಶ್ಲೇನ್ ಸ್ಪೈಲೇನ್ ಹೊಸ ಕಾರುಗಳ ಸ್ಪೈ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಫೋರ್ಸ್ ಗೂರ್ಖಾ ಆಫ್ ರೋಡರ್ ತನ್ನ ವಿನ್ಯಾಸವನ್ನು ಹಳೆಯ ಮರ್ಸಿಡಿಸ್ ಜಿ-ವ್ಯಾಗನ್‌ನಿಂದ ಪಡೆದಿದೆ. ಫೋರ್ಸ್ ಗೂರ್ಖಾವನ್ನು ಮಹೀಂದ್ರಾ ಥಾರ್‍‍ನಂತೆ ಹೊಸ ಪೀಳಿಗೆಯಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸಲಾಗುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಪರೀಕ್ಷಾ ಮಾದರಿಗಳಲ್ಲಿ ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಮುಂಭಾಗದ ಸ್ಟೈಲಿಂಗ್‍‍ನಲ್ಲಿ ಬದಲಾವಣೆಗಳಾಗಿದ್ದು, ಫಾಸ್ಕಿಯಾ ಮೇಲೆ ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಸರ್ಕ್ಯುಲರ್ ಹೆಡ್‌ಲ್ಯಾಂಪ್‌ ಹಾಗೂ ಹೊಸ ಬಂಪರ್‌ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಬಾಕ್ಸೀ ಪ್ರೊಫೈಲ್ ಹಾಗೂ ಹಿಂಭಾಗದಲ್ಲಿರುವ ಸರಳವಾದ ಫಾಸ್ಕಿಯಾಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಎಸ್‌ಯುವಿಯಲ್ಲಿರುವ ಫಂಕ್ಷನ್ ಓವರ್ ಫಾರ್ಮ್ ಅಪೀಲ್ ಅನ್ನು ಹಾಗೆಯೇ ಮುಂದುವರಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಇದರ ಜೊತೆಗೆ ಈ ಎಸ್‍‍ಯುವಿ ಆಫ್ ರೋಡಿಂಗ್‌ಗಾಗಿ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಮಾರುಕಟ್ಟೆಯಲ್ಲಿರುವ ಫೋರ್ಸ್ ಗೂರ್ಖಾದ ಇಂಟಿರಿಯರ್ ಅಪೇಕ್ಷಿತವಾಗಿರುವುದನ್ನು ಬಿಟ್ಟುಬಿಡುತ್ತದೆ. ಆದರೆ ಹೊಸ ತಲೆಮಾರಿನ ಮಾದರಿಯಲ್ಲಿ ಇವುಗಳು ಸುಧಾರಿಸುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಹೊಸ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವ್ಹೀಲ್, ಇನ್ಸ್ ಟ್ರೂಮೆಂಟ್ ಕನ್ಸೋಲ್ ಹಾಗೂ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳು ವಾಹನದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಫೋರ್ಸ್ ಟ್ರ್ಯಾಕ್ಸ್ ನಲ್ಲಿ ಎಕ್ಸ್ ಟೆಂಡೆಡ್ ವ್ಹೀಲ್‌ಬೇಸ್ ಹಾಗೂ ಮಲ್ಟಿಪಲ್ ಸೀಟಿಂಗ್ ಸಂರಚನೆಗಳೊಂದಿಗೆ ಪೀಪಲ್ ಮೂವರ್ ಸೆಗ್‍‍ಮೆಂಟಿನ ಮೇಲೆ ಹೆಚ್ಚು ಗಮನಹರಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಹೊಸ ಕ್ರ್ಯಾಶ್ ಪರೀಕ್ಷಾ ನಿಯಮಗಳನ್ನು ಅನುಸರಿಸಲು ಎರಡೂ ವಾಹನಗಳು ಅಸ್ತಿತ್ವದಲ್ಲಿರುವ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಮತ್ತಷ್ಟು ಸುಧಾರಿಸುವ ಸಾಧ್ಯತೆಗಳಿವೆ. ಎಂಜಿನ್ ಬಗ್ಗೆ ಹೇಳುವುದಾದರೆ, ಮೊದಲೇ ವರದಿಯಾದಂತೆ, ಗೂರ್ಖಾದಲ್ಲಿ ಮರ್ಸಿಡಿಸ್ ಮೂಲದ 2.2-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಫೋರ್ಸ್ ಅಳವಡಿಸುವ ಸಾಧ್ಯತೆಗಳಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಈ ಎಂಜಿನ್ ಅನ್ನು 2.6 ಲೀಟರ್ ಡೀಸೆಲ್ ಬಿಎಸ್ 6ನಲ್ಲಿ ನಿರ್ಮಿಸಲಾಗಿದೆ. ಇದೇ ಎಂಜಿನ್ ಅನ್ನು ಟ್ರಾಕ್ಸ್ ನಲ್ಲಿಯೂ ಅಳವಡಿಸುವ ಸಾಧ್ಯತೆಗಳಿವೆ. ಆದರೆ ಹೊಸ ಅವತಾರದಲ್ಲಿ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಟೂಫಾನ್, ಕ್ರೂಸರ್ ಹಾಗೂ ಗಾಮಾ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಟ್ರ್ಯಾಕ್ಸ್ ಮಹೀಂದ್ರಾ ಬೊಲೆರೊ ಕಾರಿಗೆ ಪೈಪೋಟಿ ನೀಡುತ್ತದೆ. ನವೀಕರಿಸಿದ ಫೋರ್ಸ್ ಎಸ್‍‍ಯುವಿಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಖಾಸಗಿ ವಾಹನಗಳ ಜಾಗದಲ್ಲಿ ಫೋರ್ಸ್ ಮೋಟಾರ್ಸ್ ಪ್ರಯತ್ನವು ಎಂದಿಗೂ ಪ್ರಾರಂಭವಾಗಲಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋರ್ಸ್ ಟ್ರಾಕ್ಸ್ ಹಾಗೂ ಗೂರ್ಖಾ

ಕಂಪನಿಯು ಗೂರ್ಖಾವನ್ನು ಬಿಟ್ಟು ಉಳಿದ ವಾಣಿಜ್ಯ ವಾಹನಗಳತ್ತ ತನ್ನ ಗಮನವನ್ನು ಹರಿಸಿತು. ಈ ಕಾರು ಉತ್ಸಾಹಿಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲು ಯಶಸ್ವಿಯಾಯಿತು. ನಿರೀಕ್ಷಿತ ಭವಿಷ್ಯಕ್ಕಾಗಿ ಕಂಪನಿಯು ಈ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರೀಕ್ಷೆಗಳಿವೆ.

Source: Rushlane

More from DriveSpark

Article Published On: Saturday, November 16, 2019, 13:48 [IST]
English summary
2020 Force trax bs6 and gurkha suv spied - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+