ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತು ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಪರ್ಯಾಯ ಇಂಧನ ಬಳಕೆಯ ವಾಹನಗಳತ್ತ ಮುಖಮಾಡುತ್ತಿದ್ದು, ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಯಲ್ಲಿ ಇದೀಗ ಹೊಸದೊಂದು ಕ್ರಾಂತಿ ಶುರುವಾಗಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಜಗತ್ತಿನ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಯೊಂದಿಗೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರೆನಾಲ್ಟ್ ಸಂಸ್ಥೆಯು ಸಹ ತನ್ನ ಕನಸಿನ ಕೂಸಾದ ಕೆ-ಜೆಡ್ಇ ಕಾನ್ಸೆಪ್ಟ್ ಅನಾವರಣಗೊಳಿಸಿರುವುದಲ್ಲದೇ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಕ್ವಿಡ್ ವಿನ್ಯಾಸವನ್ನೇ ಆಧಾರಿಸಿರುವ ಹೊಸ ಎಲೆಕ್ಟ್ರಿಕ್ ಕಾರು ಕೆಲವು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಬಹುತೇಕ ಸಾಮಾನ್ಯ ಮಾದರಿಯಲ್ಲೇ ಸಿದ್ದಗೊಂಡಿದ್ದು, ಹೊಸ ಕಾರಿನ ಬಗೆಗೆ ಮೊದಲ ಬಾರಿಗೆ ಶಾಂಘೈನಲ್ಲಿ ನಡೆದಿರುವ ಆಟೋ ಮೇಳದಲ್ಲಿ ಅನಾವರಣಗೊಳಿಸಲಾಗಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಇನ್ನೊಂದು ವಿಶೇಷ ಅಂದ್ರೆ, ಹೊಸ ಕಾರಿನ ಡಿಸೈನ್‌ಗಳನ್ನು ಚೆನ್ನೈನಲ್ಲಿರುವ ರೆನಾಲ್ಟ್ ಕಾರು ಉತ್ಪಾದನಾ ಕೇಂದ್ರದಲ್ಲಿ ಸಿದ್ದಪಡಿಸಲಾಗಿದ್ದು, ಮೊದಲ ಹಂತವಾಗಿ ಹೊಸ ಕಾರು ಚೀನಾದಲ್ಲಿ ಹಾಗೂ ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಸಾಮಾನ್ಯ ಮಾದರಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಹೋಲಿಕೆ ಇರುವ ಕೆ-ಜೆಡ್ಇ ಕಾನ್ಸೆಪ್ಟ್ ಕಾರು ಸ್ಲಿಕ್ ಹೆಡ್‌ಲ್ಯಾಂಪ್ಸ್, ಮರು ವಿನ್ಯಾಸಗೊಳಿಸಲಾದ ಗ್ರೀಲ್, ಸ್ಪೋರ್ಟಿ ಬಂಪರ್ ಮತ್ತು ಕಾರಿನ ಬಹುತೇಕ ಕಡೆ ಇರಿಸಲಾಗಿರುವ ಬ್ಲ್ಯೂ ಅಸೆಸ್ಟ್ಸ್ ಕಾರಿನ ಲುಕ್ ಹೆಚ್ಚಿಸಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಕಾರಿನ ಮೈಲೇಜ್ ಕೆ-ಜೆಡ್ಇ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ವೈಶಿಷ್ಟ್ಯತೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ ಬರೋಬ್ಬರಿ 250ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರನ್ನು ನಿಸ್ಸಾನ್ ಜೊತೆಗೂಡಿ ಅಭಿವೃದ್ಧಿ ಮಾಡಲಾಗುತ್ತಿದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಭಾರತದಲ್ಲಿ ಬಿಡುಗಡೆ ಯಾವಾಗ?

ಮೇಲೆ ಹೇಳಿದ ಹಾಗೆ ಮೊದಲು ಚೀನಾದಲ್ಲಿ ಬಿಡುಗಡೆಗೊಳಿಸಿದ ನಂತರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೆನಾಲ್ಟ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳಿಗೆ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಕೇಂದ್ರ ಸರ್ಕಾರವು ಸಹ ಇವಿ ಕಾರುಗಳು ಪೂರಕವಾಗುವಂತೆ 2019ರ ಸೆಪ್ಟೆಂಬರ್ ಹೊತ್ತಿಗೆ ಪ್ರತಿ 3 ಕಿ.ಮಿ ಗೆ ಒಂದು ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ ಆಯ್ತು..!

ಹೀಗಾಗಿ ಹೊಸ ರೆನಾಲ್ಟ್ ಎಲೆಕ್ಟ್ರಿಕ್ ಕಾರು 2020ರ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಬ್ಯಾಟರಿ ತಯಾರಿಕೆಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎದುರು ನೋಡುತ್ತಿವೆ.

Most Read Articles

Kannada
English summary
2020 Renault Kwid Electric Makes Debut — India Launch Possible!
Story first published: Tuesday, April 16, 2019, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X