ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಕೇಂದ್ರ ಸರ್ಕಾರವು 2020ರ ಏಪ್ರಿಲ್ 1ರಿಂದ ಬಿ‍ಎಸ್ 6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಇದರನ್ವಯ ಎಲ್ಲಾ ಬಿ‍ಎಸ್ 4 ಎಂಜಿನ್ ಹೊಂದಿರುವ ಎಲ್ಲಾ ವಾಹನಗಳೂ ಕಡ್ಡಾಯವಾಗಿ ಬಿ‍ಎಸ್ 6 ಎಂಜಿನ್‍‍ಗಳನ್ನು ಹೊಂದಬೇಕಾಗುತ್ತದೆ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಕೇಂದ್ರ ಸರ್ಕಾರವು ನಾಲ್ಕು ಚಕ್ರದ ಆಟೋಗಳಲ್ಲಿಯೂ ಬಿ‍ಎಸ್ 6 ಎಂಜಿನ್ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಈ ನಿಯಮವು ಜಾರಿಗೆ ಬಂದಲ್ಲಿ ಬಿ‍ಎಸ್ 4 ಎಂಜಿನ್ ಹೊಂದಿರುವ ನಾಲ್ಕು ಚಕ್ರದ ಆಟೋಗಳನ್ನು 2020ರ ಏಪ್ರಿಲ್ 1ರಿಂದ ರಿಜಿಸ್ಟರ್ ಮಾಡಲಾಗುವುದಿಲ್ಲ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು 115ನೇ ನಿಯಮವನ್ನು ಮಾರ್ಪಾಡು ಮಾಡುವಂತೆ ಅಧಿಸೂಚನೆ ಹೊರಡಿಸಿದೆ. ಇದರನ್ವಯ ನಾಲ್ಕು ಚಕ್ರದ ಆಟೋ ರಿಕ್ಷಾಗಳಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಈ ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ನಾಲ್ಕು ಚಕ್ರದ ವಾಹನಗಳಿಗೂ 2020ರ ಏಪ್ರಿಲ್ 1ರಿಂದ ಬಿ‍ಎಸ್ 6 ನಿಯಮ ಅನ್ವಯವಾಗಲಿದೆ. ಸದ್ಯಕ್ಕೆ ನಾಲ್ಕು ಚಕ್ರದ ಆಟೋ ರಿಕ್ಷಾಗಳನ್ನು ಬಿ‍ಎಸ್ 4 ಎಂಜಿನ್‍‍ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಆ ಅಧಿಕಾರಿ ಹೇಳಿದರು.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಭಾರತದಲ್ಲಿ ಬಿ‍ಎಸ್ 6 ನಿಯಮಗಳನ್ನು ಯುರೋಪಿಯನ್ ಸ್ಟಾಂಡರ್ಡ್‍‍ಗಳಿಗೆ ತಕ್ಕಂತೆ ಜಾರಿಗೊಳಿಸಲಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರೆ ನಾಲ್ಕು ಚಕ್ರದ ಆಟೋ ರಿಕ್ಷಾಗಳಲ್ಲೂ ಈ ನಿಯಮಗಳು ಜಾರಿಗೆ ಬರಲಿವೆ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಅಧಿಕಾರಿಗಳು ಒಪ್ಪಿಗೆ ಸೂಚಿಸಿದರೆ, ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯ ಮೇಲೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ, ದೂರುಗಳನ್ನು ಸ್ವೀಕರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಬಿ‍ಎಸ್ 4 ಹಾಗೂ ಬಿ‍ಎಸ್ 6 ನಡುವಿರುವ ವ್ಯತ್ಯಾಸ

ಸದ್ಯಕ್ಕೆ ಭಾರತದಲ್ಲಿ ಬಿ‍ಎಸ್ 4 ನಿಯಮಗಳು ಜಾರಿಯಲ್ಲಿವೆ. ಆದರೂ ಬಿ‍ಎಸ್ 6 ನಿಯಮಗಳು ಶೀಘ್ರದಲ್ಲಿಯೇ ಜಾರಿಯಾಗುವುದರಿಂದ ಬಹುತೇಕ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುತ್ತಿವೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಬಿ‍ಎಸ್ 6 ಎಂಜಿನ್‍‍ಗಳಿಗೆ ಹೋಲಿಸಿದರೆ ಬಿ‍ಎಸ್ 4 ಎಂಜಿನ್‍‍ಗಳು ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತವೆ. ಬಿ‍ಎಸ್ 4 ಎಂಜಿನ್‍ಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದಾಗಿ ಕಣ್ಣು, ಮೂಗು ಉರಿ, ತಲೆನೋವು ಹಾಗೂ ಶ್ವಾಸಕೋಶದ ತೊಂದರೆಗಳು ಉಂಟಾಗುತ್ತಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಬಿ‍ಎಸ್ 6 ಎಂಜಿನ್‍‍ನಲ್ಲಿರುವ ಸಲ್ಫರ್ ಅಂಶವು ಬಿಎಸ್ 4 ಎಂಜಿನ್‍‍ಗಳಿಗೆ ಹೋಲಿಸಿದರೆ ಐದು ಪಟ್ಟು ಕಡಿಮೆಯಾಗಲಿದೆ. ಬಿ‍ಎಸ್ 6 ಎಂಜಿನ್‍‍ನಲ್ಲಿ ಅತ್ಯಾಧುನಿಕವಾದ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಇದರಿಂದಾಗಿ ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳಲ್ಲಿ ನೈಟ್ರೊಜೆನ್ ಆಕ್ಸೈಡ್ ಪ್ರಮಾಣವು 68%ನಷ್ಟು ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳಲ್ಲಿ 25%ನಷ್ಟು ಕಡಿಮೆಯಾಗಲಿದೆ.

ನಾಲ್ಕು ಚಕ್ರದ ಆಟೋಗಳಿಗೂ ಕಡ್ಡಾಯವಾಗಲಿದೆ ಬಿ‍ಎಸ್ 6 ನಿಯಮ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದಿನೇ ದಿನೇ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬಿ‍ಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸುವುದರಿಂದ ಮಾಲಿನ್ಯ ಪ್ರಮಾಣವು ಕಡಿಮೆಯಾಗಲಿದೆ.

Article Published On: Saturday, December 28, 2019, 10:57 [IST]
English summary
BS6 norms for quadricycles proposed by goverment - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+