ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಹೈಪರ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆ ಬುಗಾಟಿಯು ವಿಶ್ವ ಆಟೋ ಉದ್ಯಮದಲ್ಲಿ ಹತ್ತು ಹಲವು ದಾಖಲೆಗಳೊಂದಿಗೆ ಅತಿ ದುಬಾರಿ ಕಾರುಗಳನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೇ ಮುಂದಿನ ಕೆಲವೇ ದಿನಗಳಲ್ಲಿ 110ನೇ ವರ್ಷಾಚರಣೆಗೆ ಸಿದ್ದವಾಗುತ್ತಿದೆ. ಹೀಗಾಗಿ ಸಂಭ್ರಮಾಚರಣೆಯಲ್ಲಿರುವ ಬುಗಾಟಿ ಸಂಸ್ಥೆಯು ಮಕ್ಕಳಿಗಾಗಿಯೇ ಸಿದ್ದಪಡಿಸಲಾಗಿರುವ ಬೇಬಿ II ಕಾರು ಮಾದರಿಯೊಂದನ್ನು ಅನಾವರಣಗೊಳಿಸಿದೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಬುಗಾಟಿ ಸಂಸ್ಥೆಯು 1909ರಿಂದ ಕಾರು ಉತ್ಪಾದನೆಯಲ್ಲಿ ಹಲವು ಬದಲಾವಣೆಯೊಂದಿಗೆ ವಿಶ್ವದ ಅತಿ ದುಬಾರಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ತನ್ನ 110ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆರಂಭ ದಿನಗಳಲ್ಲಿ ಉತ್ಪಾದನೆಗೊಂಡಿದ್ದ ಕೆಲವು ಜನಪ್ರಿಯ ಕಾರು ಮಾದರಿಗಳ ಹೊಸ ಆವೃತ್ತಿಗಳನ್ನು ಮರುನಿರ್ಮಾಣ ಮಾಡಿ ಅನಾವರಣಗೊಳಿಸುತ್ತಿದೆ. ಕಳೆದ ವಾರವಷ್ಟೇ ವಿಶ್ವದ ಅತಿ ದುಬಾರಿ ಕಾರು ಮಾದರಿಯಾದ ಲೊ ವೆಟ್ರಿ ನವಾ ಕಾರನ್ನು ಅನಾವರಣ ಮಾಡಿದ್ದ ಬುಗಾಟಿ ಇದೀಗ ಮಕ್ಕಳಿಗಾಗಿ 'ಬೇಬಿ II' ಕಾರನ್ನು ಅನಾವರಣಗೊಳಿಸಿದೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

1927ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಟೈಪ್ 35 ಕಾರಿನ ನೆನಪಿಗಾಗಿ ಬೇಬಿ II ಕಾರನ್ನು ಮರುನಿರ್ಮಾಣ ಮಾಡಿ ಅನಾವರಣ ಮಾಡಲಾಗಿದ್ದು, ಎಲೆಕ್ಟ್ರಿಕ್ ಎಂಜಿನ್ ಪ್ರೇರಣೆ ಹೊಂದಿರುವ ಈ ಕಾರುನ್ನು ಚಾಲನೆ ಮಾಡಲು ಯಾವುದೇ ರೀತಿಯ ಲೆಸೆನ್ಸ್ ಬೇಕಿಲ್ಲ ಅಂತಾ ಬುಗಾಟಿ ಸಂಸ್ಥೆಯೇ ಹೇಳಿಕೊಂಡಿದೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಮಕ್ಕಳು ಅಷ್ಟೇ ಅಲ್ಲ ವಯಸ್ಕರು ಕೂಡಾ ಕುಳಿತುಕೊಳ್ಳಬಹುದಾಷ್ಟು ಆಸನದ ಸೌಲಭ್ಯವು ಈ ಬೇಬಿ II ಬುಗಾಟಿ ಕಾರಿನಲ್ಲಿದ್ದು, ಬೇಬಿ II ಕಾರಿನಲ್ಲಿ ಪ್ರಮುಖ ಎರಡು ಮಾದರಿಯ 1ಕೆವಿ ಚೈಲ್ಡ್ ಮೋಡ್ ಮತ್ತು 4ಕೆವಿ ಅಡಲ್ಟ್ ಮೋಡ್ ಎನ್ನುವ ಚಾಲನಾ ಆಯ್ಕೆಗಳನ್ನು ಒದಗಿಸಲಾಗಿದೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

1ಕೆವಿ ಚೈಲ್ಡ್ ಮೋಡ್ ಮೂಲಕ ಗಂಟೆಗೆ 20 ಕಿ.ಮಿ ವೇಗದಲ್ಲಿ ಚಲಿಸಬಹುದಾಗಿದ್ದು, ಯುವಕರಾಗಿದ್ದಲ್ಲಿ 4ಕೆವಿ ಅಡಲ್ಟ್ ಮೋಡ್ ಮೂಲಕ ಗಂಟೆಗೆ 45 ಕಿ.ಮಿ ವೇಗದಲ್ಲಿ ಚಲಿಸಬಹುದು. ಜೊತೆಗೆ ತೆಗೆದುಹಾಕಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ಬೇಬಿ II ಬುಗಾಟಿ ಕಾರಿನಲ್ಲಿ ಕೆಲವೇ ಅತ್ಯಾಧುನಿಕ ಫಿಚರ್ಸ್‌ಗಳನ್ನು ಜೋಡಿಸಲಾಗಿದೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

1926ರ ಅವಧಿಯಲ್ಲಿ ಬುಗಾಟಿ ನೌಕರನಾಗಿದ್ದ ಎರೊಟ್ಟೆ ಎಂಬಾತನು ತನ್ನ ಮಗನ 4ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಟೈಪ್ 35 ಕಾರು ಮಾದರಿಯನ್ನು ನಿರ್ಮಾಣ ಮಾಡಿ ಗಿಫ್ಟ್ ನೀಡಿದ್ದ. ತದನಂತರ ಈ ಕಾರನ್ನು ನೋಡಿದ ಬಹುತೇಕರು ತಮ್ಮ ಮಗನಿಗೂ ಇಂತದ್ದೇ ಒಂದು ಕಾರು ನಿರ್ಮಾಣ ಮಾಡಿಕೊಡುವಂತೆ ಪಟ್ಟುಹಿಡಿದಿದ್ದರಂತೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಹೀಗಾಗಿ ಬುಗಾಟಿ ಸಂಸ್ಥೆಯ ಬಳಿ ಈ ಬಗ್ಗೆ ಚರ್ಚಿಸಿದ ಎರೊಟ್ಟೆಯವರು ಈ ಕಾರುನ್ನು ನಿರ್ಮಾಣ ಮಾಡಲು ಅಧಿಕೃತ ಒಪ್ಪಿಗೆ ಪಡೆದಿದ್ದಲ್ಲದೇ 1927ರಿಂದ ಉತ್ಪಾದನಾ ಕಾರ್ಯಕ್ಕೆ ಚಾಲನೆ ನೀಡಿದ್ದರು. ತದನಂತರ 1936ರ ತನಕ ಖರೀದಿಗೆ ಲಭ್ಯವಿದ್ದ ಈ ಕಾರು 9 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 500 ಕಾರುಗಳು ಮಾರಾಟವಾಗಿದ್ದವು. ಆದ್ರೆ ಕೆಲವೇ ಕೆಲವು ಟೈಪ್ 35 ಕಾರುಗಳು ಮಾತ್ರ ಬುಗಾಟಿ ಕಾರುಗಳ ಸಂಗ್ರಹದಲ್ಲಿವೆ.

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಮಾರಾಟಕ್ಕೆ 500 ಕಾರುಗಳು ಮಾತ್ರ ಲಭ್ಯ..!

ಹೌದು, ಟೈಪ್ 35 ಕಾರಿನ ನೆನಪಿಗಾಗಿ ಉತ್ಪಾದನೆ ಮಾಡಲಾಗುತ್ತಿರುವ ಬೇಬಿ II ಬುಗಾಟಿ ಕಾರುಗಳು ಲಿಮಿಟೆಡ್ ಆವೃತ್ತಿಯಾಗಿದ್ದು, ವಿಶ್ವಾದ್ಯಂತ ಕೇವಲ 500 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ ಹೊಸ ಕಾರು ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಮುಂಗಡವಾಗಿ ಮಾರಾಟಗೊಂಡಿವೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

 ಮಕ್ಕಳಿಗಾಗಿಯೇ ಸಿದ್ದವಾದ ಈ ಬುಗಾಟಿ ಕಾರಿನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಕಾರಿನ ಬೆಲೆ

ಮೂಲಗಳ ಪ್ರಕಾರ, ಹೊಸ ಬೇಬಿ II ಬುಗಾಟಿ ಕಾರಿನ ಬೆಲೆಯು ರೂ. 25.95 ಲಕ್ಷ ಎಂದು ಹೇಳಲಾಗಿದ್ದು, ಹೊಸ ಕಾರಿನಲ್ಲಿ ಐಷಾರಾಮಿ ಆಸನ ಸೌಲಭ್ಯ ಸೇರಿದಂತೆ, 8-ಸ್ಪೋಕ್ ಅಲಾಯ್ ವೀಲ್ಹ್ ಸೇರಿದಂತೆ ದುಬಾರಿ ಬೆಲೆಯ ಶಿರೊನ್ ಕಾರಿನಿಂದ ಕೆಲವು ಫೀಚರ್ಸ್‌ಗಳನ್ನು ಬೇಬಿ II ಕಾರಿನಲ್ಲಿ ಅಳವಡಿಸಲಾಗಿದೆ.

Most Read Articles

Kannada
English summary
The French car manufacturer is digging up the Bugatti Type 35, the company's famous racing car also called the Bugatti Baby, and giving it a modern makeover. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more