ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಆಟೋಮೊಬೈಲ್ ಉದ್ಯಮವು ನಿಧಾನ ಗತಿಯಲ್ಲಿದ್ದ ಕಾರಣ ಕಳೆದ ಒಂದು ವರ್ಷದಿಂದ ಭಾರತದ ಆಟೋಮೊಬೈಲ್ ಉದ್ಯಮವು ವಾಹನ ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿತ್ತು. ಇದೀಗ ಅಂತಿಮವಾಗಿ ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟವು ಒಂದು ರೀತಿಯ ಚೇತರಿಕೆ ಕಾಣುತ್ತಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಹಬ್ಬದ ವೇಳೆಯಲ್ಲಿ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ರಿಯಾಯಿತಿ ಮತ್ತು ವಿಶೇಷ ಕೊಡೆಗೆಗಳನನ್ನು ಘೋಷಿಸಿವೆ. ಕಾರ್ಪೊರೇಟ್ ತೆರಿಗೆಯನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದಾರೆ. ಅಲ್ಲದೇ ಗ್ರಾಹಕರ ಮನೋಭಾವವು ಕೂಡ ಬದಲಾಗಿದೆ. ಈ ಎಲ್ಲಾ ಕಾರಣದಿಂದ ವಾಹನ ಮಾರಾಟದಲ್ಲಿ ಚೇತರಿಕೆ ಕಂಡಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಇದು ಕೇವಲ ಆರಂಭವಾಗಿದ್ದು, ಪೂರ್ಣ ಪ್ರಮಾಣದ ಚೇತರಿಕೆಯನ್ನು ಕಾಣಲು ಇನ್ನೂ ಕೂಡ ಸಮಯ ತೆಗೆದುಕೊಳ್ಳಬಹುದು. ಪ್ಯಾಸೆಂಜರ್ ಕಾರುಗಳ ತಯಾರಕರ ವರದಿಯ ಪ್ರಕಾರ ಸೆಪ್ಟೆಂಬರ್‍ ತಿಂಗಳಿನ ಮಾರಾಟವು ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13 ರಷ್ಟು ಚೇತರಿಕೆ ಕಂಡಿದೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.26 ರಷ್ಟು ಕಡಿಮೆಯಾಗಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಮಾರುತಿ ಸುಜುಕಿ

ಭಾರತದಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟಾರೆಯಾಗಿ 1,10,454 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.27.1 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ 1,00,000 ಯುನಿ‍‍ಟ್‍‍ಗಳ ಮಾರಾಟದಲ್ಲಿ ಕಡಿಮೆಯಾಗಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಕಂಪನಿಯ ಎಂಟ್ರಿ ಲೆವೆಲ್ ಕಾರು ಎಸ್-ಪ್ರೆಸ್ಸೊ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಪ್ಯಾಸೆಂಜರ್ ಕಾರುಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31.5 ರಷ್ಟು ಕಡಿಮೆಯಾಗಿದೆ. ಎಸ್‍‍ಯು‍‍ವಿ ಸೆಗ್‍‍‍ಮೆಂ‍ಟ್‍‍ನಲ್ಲಿ ಆಗಸ್ಟ್ ತಿಂಗಳಲ್ಲಿ 18,522 ಯು‍‍ನಿ‍ಟ್‍ಗಳು ಮತ್ತು ಸೆಪ್ಟೆಂಬರ್‍‍ನಲ್ಲಿ 21,256 ಯು‍‍ನಿಟ್‍ಗಳು ಮಾರಾಟವಾಗಿವೆ. ಆದರೂ 0.5 ಪ್ರತಿಶತದಷ್ಟು ಕುಸಿತ ಕಂಡಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಹ್ಯುಂಡೈ

ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ಮೋಟಾರ್ಸ್‍‍ನ 40,705 ಪಿ‍‍ವಿ ಯು‍‍ನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 47,781 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.14.8 ರಷ್ಟು ಕಡಿಮೆಯಾಗಿದೆ. ಆಗಸ್ಟ್ ತಿಂಗಳಲ್ಲಿ 38,205 ಯು‍‍ನಿ‍ಟ್‍‍ಗಳು ಮಾರಾಟವಾಗಿದ್ದವು.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಪೋರ್ಡ್ ಮೋಟಾರ್ ಮತ್ತು ಮಹೀಂದ್ರಾ

ಫೋರ್ಡ್ ಮೋಟಾರ್ ಮತ್ತು ಮಹೀಂದ್ರಾ ಅ್ಯಂಡ್ ಮಹೀಂದ್ರಾ ಸಹಭಾಗಿತ್ವದ 14,333 ಪಿವಿ ಯು‍‍ನಿ‍‍ಟ್‍‍ಗಳು ಮಾರಾಟವಾಗಿದ್ದವು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 21,411 ಪಿ‍‍‍ವಿ ಯುನಿಟ್‍‍ಗಳು ಮಾರಾಟವಾಗಿದ್ದವು. ಮಾರಾಟ ಪ್ರಮಾಣವು ಶೇ.33 ರಷ್ಟು ಕಡಿಮೆಯಾಗಿದೆ. ಆಗಸ್ಟ್ ತಿಂಗಳಲ್ಲಿ 13,504 ಯು‍‍ನಿ‍‍ಟ್‍ಗಳ ಮಾರಾಟವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಟೊಯೋಟಾ ಕಿರ್ಲೋಸ್ಕರ್

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍‍ನ 10,203 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ 12,512 ಯು‍‍ನಿ‍ಟ್‍‍ಗಳು ಮಾರಾಟವಾಗಿದ್ದವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.18.45 ರಷ್ಟು ಕುಸಿತ ಕಂಡಿದೆ. ಆಗಸ್ಟ್ ತಿಂಗಳಲ್ಲಿ 10,701 ಯುನಿ‍‍ಟ್‍ಗಳ ಮಾರಾಟವಾಗಿದೆ.

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರುಗಳು ಸೆಪ್ಟೆಂಬರ್ ತಿಂಗಳಲ್ಲಿ 8,097 ಯುನಿ‍‍ಟ್‍ಗಳು ಮಾರಾಟವಾಗಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಬರೊಬ್ಬರಿ ಶೇ.56 ರಷ್ಟು ಕುಸಿತ ಕಂಡಿದೆ. ಆಗಸ್ಟ್ ತಿಂಗಳಲ್ಲಿ 7,390 ಯುನಿ‍‍ಟ್‍ಗಳು ಮಾರಾಟವಾಗಿತ್ತು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಎರಡು ತಿಂಗಳ ನಂತರ ಚೇತರಿಕೆ ಕಂಡ ಕಾರು ಮಾರಾಟ

ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡು ಹಲವು ಪ್ರಮುಖ ಕಂಪನಿಗಳ ವಾಹನ ಮಾರಾಟದಲ್ಲಿ ಇಳಿಕೆಯಾಗಿತ್ತು. ಆದರೆ ಹಲವು ಕಂಪನಿಗಳು ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿವೆ. ಅಲ್ಲದೇ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಾರು ಮಾರಾಟದಲ್ಲಿ ಚೇತರಿಕೆ ಕಂಡಿದೆ. ಕಾರು ಮಾರಾಟವು ಮುಂದಿನ ದಿನಗಳಲ್ಲಿ ನಿಧಾನವಾಗಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
New car, SUV sales up for the first time in two months - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X