ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಕೇಂದ್ರ ಸಾರಿಗೆ ಸಚಿವಾಲಯವು, ಎಲೆಕ್ಟ್ರಿಕ್ ವಾಹನಗಳನ್ನು ಜಾರಿಗೊಳಿಸಲು ಯಾವುದೇ ಗಡುವನ್ನು ವಿಧಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದೆ. ಈ ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಗಡುವನ್ನು ವಿಧಿಸಲಾಗಿದೆ ಎಂಬ ವದಂತಿಗಳು ಹರಡಿದ್ದವು.

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಸ್ಪಷ್ಟನೆ ನೀಡಿರುವುದರಿಂದ ಆಟೋಮೊಬೈಲ್ ಉದ್ಯಮವು ನಿರಾಳವಾಗಿದೆ. ಕೆಲ ತಿಂಗಳ ಹಿಂದೆ, ನೀತಿ ಆಯೋಗವು ಕೆಲವು ಮಾರ್ಗಸೂಚಿ ಅಂಶಗಳನ್ನು ರಚಿಸಿತ್ತು. ಇಂಟರ್‍‍ನಲ್ ಕಂಬಸ್ಚನ್ ಎಂಜಿನ್‍ ವಾಹನಗಳ ಬದಲಿಗೆ ಹಂತಹಂತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಗಡುವನ್ನು ನಿಗದಿಪಡಿಸಿತ್ತು. 150 ಸಿಸಿ ಹಾಗೂ ಅದಕ್ಕಿಂತ ಕೆಳಗಿನ ಎಲ್ಲಾ ದ್ವಿಚಕ್ರ ವಾಹನಗಳು ಎಲೆಕ್ಟ್ರಿಕ್ ಆಗಿರಬೇಕು ಎಂದೂ ಸೂಚಿಸಲಾಗಿತ್ತು.

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಇಂಟರ್ನಲ್ ಕಂಬಸ್ಜನ್ ಎಂಜಿನ್ ವಾಹನಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿಲಾಗಿತ್ತು. ನೀತಿ ಆಯೋಗದ ಮಾರ್ಗಸೂಚಿಗಳಿಗೆ ಪ್ರತಿಕ್ರಿಯಿಸಿರುವ ನಿತಿನ್ ಗಡ್ಕರಿರವರು ತಮ್ಮ ಸಚಿವಾಲಯವು ಯಾವುದೇ ಗಡುವನ್ನು ನಿಗದಿ ಪಡಿಸಿಲ್ಲ ಎಂದು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಈ ಬಗ್ಗೆ ಮಾತನಾಡಿರುವ ನಿತಿನ್ ಗಡ್ಕರಿರವರು ಹಲವು ರಾಜ್ಯಗಳು ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುತ್ತಿವೆ. ವಾಹನಗಳ ಎಲೆಕ್ಟ್ರಿಕರಣವು ಸಹಜವಾಗಿಯೇ ಜರುಗಲಿದೆ ಎಂದು ತಿಳಿಸಿದ್ದಾರೆ. ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಮಿತಾಭ್ ಕಾಂತ್ ನೇತೃತ್ವದ ಸಮಿತಿಯು ಈ ವರ್ಷದ ಜೂನ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ನೀಲ ನಕ್ಷೆಯನ್ನು ರೂಪಿಸಿತ್ತು.

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ಸಲುವಾಗಿ, ಬ್ಯಾಟರಿ ತಯಾರಕ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಿತಿಯು ಕ್ರಮವಾಗಿ 2023 ಹಾಗೂ 2025ರ ವೇಳೆಗೆ 150 ಸಿಸಿ ಹಾಗೂ ಅದಕ್ಕಿಂತ ಕೆಳಗಿನ ಎಲ್ಲಾ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳನ್ನು ಬದಲಿಸುವ ಯೋಜನೆಯನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಗೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸುವ ಮೊದಲು ಸಂಬಂಧಪಟ್ಟವರ ಸಭೆ ಕರೆಯುವುದಾಗಿ ನಿತಿನ್ ಗಡ್ಕರಿರವರು ಈ ಹಿಂದೆಯೇ ತಿಳಿಸಿದ್ದರು. ದೇಶದ ಆಟೋಮೊಬೈಲ್ ಉದ್ಯಮವು 19 ವರ್ಷಗಳಲ್ಲಿ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ.

MOST READ: ಐ‍‍ಆರ್‍‍ಸಿ‍‍ಟಿ‍‍ಸಿಗೆ ಹಸ್ತಾಂತರಗೊಳ್ಳಲಿದೆ ತೇಜಸ್ ಎಕ್ಸ್ ಪ್ರೆಸ್

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಹೊರಹಾಕಲು ಉದ್ದೇಶಿಸಿರುವ ನೀತಿಯ ವಿರುದ್ಧ ಆಟೋಮೋಬೈಲ್ ಉದ್ಯಮವು ಲಾಬಿ ನಡೆಸುತ್ತಿದೆ. ಸರ್ಕಾರದ ಅಂಗ ಸಂಸ್ಥೆಯಾದ ನೀತಿ ಆಯೋಗವು ಗೊಂದಲದಲ್ಲಿರುವಂತೆ ಕಾಣುತ್ತಿದೆ.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಒಂದು ಬಾರಿ ಎಲ್ಲಾ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವುದಾಗಿ ತಿಳಿಸಿದರೆ, ಮತ್ತೊಮ್ಮೆ ಈ ರೀತಿ ಬದಲಾವಣೆ ಮಾಡಲು ಯಾವುದೇ ರೀತಿಯ ಗಡುವು ವಿಧಿಸಿಲ್ಲವೆಂದು ಹೇಳುತ್ತದೆ. ನೀತಿ ಆಯೋಗವು ಯಾವುದೇ ದೃಢವಾದ ಯೋಜನೆಯನ್ನು ಹೊಂದಿಲ್ಲವೆಂದು ಕಾಣುತ್ತದೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಎಲೆಕ್ಟ್ರಿಕ್ ವಾಹನ ಅಳವಡಿಕೆಗೆ ಯಾವುದೇ ಗಡುವು ಇಲ್ಲವೆಂದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಬದಲಾವಣೆಗೆ ಯಾವುದೇ ಗಡುವು ವಿಧಿಸಿಲ್ಲವೆಂಬ ನಿತಿನ್ ಗಡ್ಕರಿರವರ ಹೇಳಿಕೆಯ ನಂತರ ದೇಶದ ಆಟೋಮೊಬೈಲ್ ಉದ್ಯಮವು ನಿರಾಳವಾಗಲಿದೆ. ಇದರಿಂದಾಗಿ ಭಾರೀ ಸಂಕಷ್ಟದಲ್ಲಿರುವ ದೇಶಿಯ ಆಟೋಮೊಬೈಲ್ ಉದ್ಯಮವು ಸ್ವಲ್ಪವಾದರೂ ಚೇತರಿಸುವ ಕೊಳ್ಳುವ ಸಾಧ್ಯತೆಗಳಿವೆ.

Article Published On: Friday, August 23, 2019, 10:45 [IST]
English summary
Deadline Not Set For Transition To Electric Vehicles Says Nitin Gadkari - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+