ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಹೋಂಡಾ ಕಾರ್ಸ್ ಇಂಡಿಯಾ, 2018ರಜುಲೈ ತಿಂಗಳಿಗೆ ಹೋಲಿಸಿದರೆ, 2019ರ ಜುಲೈನಲ್ಲಿ ಭಾರೀ ಪ್ರಮಾಣದ ಕುಸಿತವನ್ನು ಕಂಡಿದೆ. ಹೋಂಡಾ ಕಂಪನಿಯು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದ ಮಾರಾಟದಲ್ಲಿ 48.67%ನಷ್ಟು ಕುಸಿತವನ್ನು ಅನುಭವಿಸಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಈ ಕುಸಿತವು ದೇಶಿಯ ಆಟೋಮೊಬೈಲ್ ಉದ್ಯಮವು ಸಂಕಷ್ಟ ಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿದೆ. ಕಳೆದ ವರ್ಷ ಹೋಂಡಾ ಕಂಪನಿಯ ಕಾರುಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. 2018ರ ಹೋಂಡಾ ಅಮೇಜ್ ಕಾರ್ ಅನ್ನು 2018ರ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರಿನ ಬಿಡುಗಡೆಯ ನಂತರ ಹೋಂಡಾ ಕಂಪನಿಯ ಮಾರಾಟವು ವೇಗವನ್ನು ಪಡೆದುಕೊಂಡು, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಹೋಂಡಾ ಅಮೇಜ್‍‍ನ ಸಾವಿರಾರು ಕಾರುಗಳ ಮಾರಾಟವಾಗಿ ಹೋಂಡಾ ಮಾರಾಟಕ್ಕೆ ತನ್ನ ಕೊಡುಗೆಯನ್ನು ನೀಡಿದ್ದವು. 2018ರ ಜುಲೈ ತಿಂಗಳಿನಲ್ಲಿ 19,970 ಹೋಂಡಾ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಏರುಗತಿಯಲ್ಲಿದ್ದ ಹೋಂಡಾ ಕಾರುಗಳ ಮಾರಾಟ ಪ್ರಮಾಣವು ಈ ವರ್ಷ ಭಾರೀ ಕುಸಿತವನ್ನು ಕಂಡಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಈ ವರ್ಷದ ಜುಲೈನಲ್ಲಿ 10,250 ಹೋಂಡಾ ಕಾರುಗಳ ಮಾರಾಟವಾಗಿದೆ. ಇದರಿಂದಾಗಿ ಹೋಂಡಾ ಕಾರುಗಳ ಮಾರಾಟದಲ್ಲಿ 48.67%ನಷ್ಟು ಕುಸಿತ ಉಂಟಾಗಿದೆ. ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದ ಹೋಂಡಾ ಅಮೇಜ್ ಕಾರಿನ ಮಾರಾಟವು ಬಿಡುಗಡೆಯಾದ ಕೆಲವು ತಿಂಗಳುಗಳ ನಂತರ ಕುಸಿದಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಅದಾದ ನಂತರ ಹೋಂಡಾ ಕಂಪನಿಯ ಕಾರುಗಳ ಮಾರಾಟದಲ್ಲಿ ಕುಸಿತವಾಗುತ್ತಲೇ ಇದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಬಹುತೇಕ ಕಾರು ತಯಾರಕ ಕಂಪನಿಗಳ ಮಾರಾಟದಲ್ಲಿ ನಿರಂತರ ಕುಸಿತವಾಗುತ್ತಲೇ ಇದೆ. ಭಾರತೀಯ ಆಟೋಮೊಬೈಲ್ ಉದ್ಯಮವು ನಿಧಾನಗತಿಯಲ್ಲಿದೆ. ಇದು ಮಾರುಕಟ್ಟೆಯಲ್ಲಿ ಹೋಂಡಾ ಕಾರ್ಯಕ್ಷಮತೆಯನ್ನು ಮತ್ತಷ್ಟು ಕುಸಿಯುವಂತೆ ಮಾಡಿದೆ. ಕಂಪನಿಯ ಪ್ರಕಾರ, ಮಾರಾಟದಲ್ಲಿನ ಕುಸಿತವು ಗ್ರಾಹಕರ ಖರೀದಿ ಮನೋಭಾವ ಹಾಗೂ ಗ್ರಾಹಕರು ಖರೀದಿಯನ್ನು ಮುಂದೂಡುತ್ತಿರುವುದರಿಂದ ಉಂಟಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾದ ರಾಜೇಶ್ ಗೋಯೆಲ್‍‍ರವರು ಮಾತನಾಡಿ, ದುರ್ಬಲ ಖರೀದಿ ಮನೋಭಾವ ಹಾಗೂ ಒಟ್ಟಾರೆ ಮಂದಗತಿಯ ಕಾರಣದಿಂದಾಗಿ ವಾಹನ ಉದ್ಯಮದಲ್ಲಿನ ಬೆಳವಣಿಗೆ ಕಳೆದ ತಿಂಗಳು ಮತ್ತಷ್ಟು ಕುಸಿತಗೊಂಡಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಗ್ರಾಹಕರು ಕಾರು ಖರೀದಿಗಳನ್ನು ಮುಂದೂಡುತ್ತಿದ್ದಾರೆ. ಜುಲೈ 19ರನಲ್ಲಿನ ಕುಸಿತವು ಮೊದಲ ತ್ರೈ ಮಾಸಿಕಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷದ ಜುಲೈನಲ್ಲಿಯೂ ಸಹ ಉದ್ಯಮವು ಕುಸಿತವನ್ನು ಕಂಡಿತ್ತು ಎಂದು ಹೇಳಿದರು.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

2018ರಲ್ಲಿ ಈ ಅವಧಿಯಲ್ಲಿಯೂ ಸಹ ವಾಹನ ಉದ್ಯಮವು ಮಂದಗತಿಯನ್ನು ಹೊಂದಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕುಸಿತವಾಗಿರಲಿಲ್ಲ. ಆಟೋ ಉದ್ಯಮವು ಸ್ವಲ್ಪ ಸಮಯದಿಂದ ಕುಸಿಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತೀಯ ವಾಹನ ಉದ್ಯಮವು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಇದು ಕೇವಲ ಮಾರಾಟದಲ್ಲಿನ ಕುಸಿತ ಮಾತ್ರವಲ್ಲದೇ ಒಂದು ರೀತಿಯ ಬದಲಾವಣೆಯ ಪರ್ವವಾಗಿದೆ. ಮಾರುತಿ ಸುಜುಕಿ, ಹೋಂಡಾ, ಟಾಟಾ ಮೋಟಾರ್ಸ್ ಮುಂತಾದ ಕಂಪನಿಗಳು ಮಾರಾಟದಲ್ಲಿ ತೀವ್ರ ಕುಸಿತ ಕಂಡಿವೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಹೋಂಡಾ ಮಾರಾಟ

ಹ್ಯುಂಡೈನ ವೆನ್ಯೂ, ಕೋನಾ, ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮುಂತಾದ ಹೊಸ ವಾಹನಗಳ ಬುಕ್ಕಿಂಗ್‌ನಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಭಾರತೀಯರು ಬದಲಾವಣೆ ಹಾಗೂ ಹೊಸದನ್ನು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮುಂದಿನ ತಿಂಗಳುಗಳಲ್ಲಿ ದೇಶಿಯ ಆಟೋ ಉದ್ಯಮದಲ್ಲಿ ಯಾವೆಲ್ಲಾ ಬೆಳವಣಿಗೆಗಳು ಆಗಲಿವೆ ಎಂಬುದನ್ನು ಕಾದು ನೋಡೋಣ.

Article Published On: Monday, August 5, 2019, 12:58 [IST]
English summary
Honda Records Sharp Drop In July 2019 Car Sales - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+