ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ಭಾರತದ ಎಥೆನಾಲ್ ಆರ್ಥಿಕತೆಯು ರೂ.2 ಲಕ್ಷ ಕೋಟಿಗಳವರೆಗೆ ಬೆಳೆಯುವ ಸಾಧ್ಯತೆಗಳಿರುವುದರಿಂದ ದೇಶಾದ್ಯಂತ ಎಥೆನಾಲ್ ಫ್ಯೂಯಲ್ ಸ್ಟೇಷನ್‍ಗಳನ್ನು ಸ್ಥಾಪಿಸಲು ತಮ್ಮ ಕಚೇರಿಯು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಸಲ್ಲಿಸಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ತಿಳಿಸಿದ್ದಾರೆ. ಈ ಕ್ರಮದಿಂದಾಗಿ ದೇಶಾದ್ಯಂತ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುವುದರ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಾಗಲಿದೆ ಎಂದು ಗಡ್ಕರಿರವರು ಅಭಿಪ್ರಾಯಪಟ್ಟಿದ್ದಾರೆ.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ಭಾರತದ ಮೊದಲ ಎಥೆನಾಲ್ ಚಾಲಿತ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 200 ಎಫ್ಐ ಇ100 ಬೈಕ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿತಿನ್ ಗಡ್ಕರಿರವರು ಎಥೆನಾಲ್ ಆಧಾರಿತ ಫ್ಯೂಯಲ್ ಸ್ಟೇಷನ್‍‍ಗಳನ್ನು ನಿರ್ಮಿಸಲು ಅವಕಾಶ ನೀಡುವಂತೆ ತಮ್ಮ ಕಚೇರಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವನ್ನು ಕೋರಲಿದೆ ಎಂದು ಹೇಳಿದ್ದಾರೆ. ಎಥೆನಾಲ್ ಅನ್ನು ಭಾರೀ ಪ್ರಮಾಣದಲ್ಲಿ ತಯಾರಿಸಲು ಭಾರತವು ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

2018-19ರ ಆರ್ಥಿಕ ವರ್ಷದಲ್ಲಿ ಎಥೆನಾಲ್‍‍ನ ಆರ್ಥಿಕತೆಯ ಸಾಮರ್ಥ್ಯವು ರೂ.11,000 ಕೋಟಿಗಳಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.20,000 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ವಲಯವನ್ನು ರೂ.2 ಲಕ್ಷ ಕೋಟಿಗಳಿಗೇರಿಸುವ ಗುರಿಯನ್ನು ನಮ್ಮ ಇಲಾಖೆಯು ಹೊಂದಿದೆ ಎಂದು ಗಡ್ಕರಿ ಹೇಳಿದರು. ರೈತರಿಗೆ ರೂ.2 ಲಕ್ಷ ಕೋಟಿಗಳನ್ನು ವೈವಿಧ್ಯಮಯಗೊಳಿಸಲು ಸಾಧ್ಯವಾದರೆ, ಅದು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿ, ದೇಶದ ಆಮದು ನೀತಿಯನ್ನು ಕಡಿಮೆಗೊಳಿಸಿ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತದೆ ಎಂದು ಸಚಿವ ಗಡ್ಕರಿ ಹೇಳಿದರು.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ಕಳೆದ 12 ವರ್ಷಗಳಿಂದ, 100% ಬಯೋ ಎಥೆನಾಲ್‌ನಲ್ಲಿ ಚಲಿಸುವ ವಾಹನಗಳನ್ನು ತಯಾರಿಸುವಂತೆ ಭಾರತೀಯ ವಾಹನ ತಯಾರಕರನ್ನು ಒತ್ತಾಯಿಸುತ್ತಿದ್ದೇನೆ. ಕಚ್ಚಾ ತೈಲದ ಆಮದುಗಾಗಿ ನಾವು ರೂ.7 ಲಕ್ಷ ಕೋಟಿಗಿಂತ ಹೆಚ್ಚು ಖರ್ಚು ಮಾಡುತ್ತಿದ್ದೇವೆ. ಇದರ ಜೊತೆಗೆ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಜನರಿಗೆ, ವಿಶೇಷವಾಗಿ ದೆಹಲಿಯಲ್ಲಿ ವಾಸಿಸುತ್ತಿರುವವರಿಗೆ ಮಾಲಿನ್ಯದ ಪರಿಣಾಮಗಳ ಬಗ್ಗೆ ಮನವರಿಕೆಯಾಗಿದೆ.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ವಾಯು ಮಾಲಿನ್ಯ ಸಮಸ್ಯೆಯನ್ನು ನಿಭಾಯಿಸುವ ಸಮಯ ಈಗ ಬಂದಿದೆ ಎಂದು ಅವರು ಗಡ್ಕರಿರವರು ಹೇಳಿದ್ದಾರೆ. ದೇಶವು ಎಥೆನಾಲ್ ತಯಾರಿಸಲು ಬೇಕಾದ ಸಾಕಷ್ಟು ತಂತ್ರಜ್ಞಾನವನ್ನು ಹೊಂದಿದೆ ಎಂಬುದು ಸಚಿವರ ಅಭಿಪ್ರಾಯವಾಗಿದೆ. ಮಾಲಿನ್ಯದ ವಿರುದ್ಧ ಹೋರಾಡಲು ಈ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಸಚಿವಾಲಯವು ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಿಲ್ಲ.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವಾಹನ ತಯಾರಕರು ಎಥೆನಾಲ್ ಅನ್ನು ಇಂಧನವಾಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸದೇ ಇರುವುದೇ ಇದಕ್ಕೆ ಕಾರಣ. ಈ ಸಂಬಂಧ ನಾನು ತಕ್ಷಣವೇ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ. ನೀತಿ ಆಯೋಗದ ಸಭೆ ಕರೆದು ಮಾತನಾಡುತ್ತೇನೆ ಎಂದು ಗಡ್ಕರಿರವರು ತಿಳಿಸಿದರು.

ಶೀಘ್ರದಲ್ಲೇ ತಲೆ ಎತ್ತಲಿವೆ ಎಥೆನಾಲ್ ಫ್ಯೂಯಲ್ ಸ್ಟೇಷನ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಥೆನಾಲ್‍ ಅನ್ನು ಎಂಜಿನ್ ಇಂಧನವಾಗಿ ಹಾಗೂ ಇಂಧನ ಸಂಯೋಜಕವಾಗಿ ಬಳಸಲಾಗುತ್ತದೆ. ಎಥೆನಾಲ್ ಅನ್ನು ರಾಕೆಟ್ ಇಂಧನವಾಗಿಯೂ ಸಹ ಬಳಸಲಾಗುತ್ತದೆ. ಹಗುರವಾದ ರಾಕೆಟ್-ಚಾಲಿತ ರೇಸಿಂಗ್ ವಿಮಾನಗಳಲ್ಲಿಯೂ ಬಳಸಲಾಗುತ್ತಿದೆ. ಎಥೆನಾಲ್‍‍ನ ಬೆಲೆಯು ಪ್ರತಿ ಲೀಟರ್‍‍ಗೆ ರೂ.52ಗಳಾದರೆ, ಪೆಟ್ರೋಲ್‌ ಬೆಲೆ ಲೀಟರ್‍‍ಗೆ ರೂ.72ಗಳಾಗುತ್ತದೆ.

Most Read Articles

Kannada
English summary
Ethanol Fuel Stations Coming Soon — Nitin Gadkari Ready To Talk With Petroleum Ministry - Read in kannada
Story first published: Saturday, July 13, 2019, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more