ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಅಮೇರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಕಾಂಪ್ಯಾಕ್ಟ್ ಎಸ್‍‍ಯುವಿಯಾದ ಇಕೋಸ್ಪೋರ್ಟ್ ಅನ್ನು ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸುತ್ತಿದೆ. ಹೀಗೆ ಅಭಿವೃದ್ಧಿಪಡಿಸುತ್ತಿರುವ ಹೊಸ ಎಸ್‍‍ಯುವಿಯನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಎಸ್‍‍ಯುವಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

2020ರ ಏಪ್ರಿಲ್ 1ರಿಂದ ಹೊಸ ಮಾಲಿನ್ಯ ನಿಯಮಗಳು ಜಾರಿಯಾಗಲಿವೆ. ಈ ನಿಯಮಗಳು ಜಾರಿಯಾಗುವ ಮುನ್ನವೇ ಬಿಎಸ್6 ಎಂಜಿನ್ ಹೊಂದಿರುವ ಇಕೋಸ್ಪೋರ್ಟ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಕಂಪನಿಯು ತನ್ನ ಸರಣಿಯ ಎಲ್ಲಾ ಕಾರುಗಳನ್ನು ಹೊಸ ನಿಯಮಗಳು ಜಾರಿಯಾಗುವ ಮುನ್ನವೇ ಬಿಎಸ್6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಫೋರ್ಡ್ ಇಕೋಸ್ಪೋರ್ಟ್ ಅನ್ನು ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 1.5 ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 121 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಅಳವಡಿಸಲಾಗುವುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

1.0 ಲೀಟರಿನ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 123 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 1.5 ಲೀಟರಿನ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಫೋರ್ಡ್, ಬಿಎಸ್6 ನಿಯಮಗಳಿಗೆ ಹೊಂದಿಕೊಳ್ಳುವ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಹೆಚ್ಚು ವೆಚ್ಚವಾಗುವ ಕಾರಣಕ್ಕೆ 1.0 ಲೀಟರಿನ ಇಕೋಬೂಸ್ಟ್ ಎಂಜಿನ್ ಅನ್ನು ಹೊಸ ತಲೆಮಾರಿನ ಇಕೋಸ್ಪೋರ್ಟ್‌ನಲ್ಲಿ ಅಳವಡಿಸಲಾಗುವುದಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

1.0 ಲೀಟರಿನ ಇಕೋಬೂಸ್ಟ್ ಎಂಜಿನ್ ಬದಲಿಗೆ ಮಹೀಂದ್ರಾ ಕಂಪನಿಯ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಮಹೀಂದ್ರಾ ಕಂಪನಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಟಿಯುವಿ 300ನಲ್ಲಿ ಅಳವಡಿಸಲಾಗಿದೆ. ಮಹೀಂದ್ರಾ ಹಾಗೂ ಫೋರ್ಡ್ ಕಂಪನಿಗಳು ವಾಹನಗಳ ಉತ್ಪಾದನೆಗಾಗಿ ಸಹಭಾಗಿತ್ವವನ್ನು ಹೊಂದಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಫೋರ್ಡ್ ಜೂನ್‌ನಲ್ಲಿ ಇಕೋಸ್ಪೋರ್ಟ್‌ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಸ್‍‍ಯುವಿಯಲ್ಲಿ ಮಾಡಲಾಗಿರುವ ಸಣ್ಣ ವಿನ್ಯಾಸದ ಬದಲಾವಣೆಗಳು ಯುವ ಜನತೆಯನ್ನು ಆಕರ್ಷಿಸುತ್ತಿವೆ. ಈ ಹೊಸ ಕಾಂಪ್ಯಾಕ್ಟ್ ಎಸ್‍‍ಯುವಿಗೆ ಥಂಡರ್ ಎಂದು ಹೆಸರಿಡಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿರುವ ಹಲವಾರು ಬಿಡಿಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಇಕೋಸ್ಪೋರ್ಟ್ ಎಸ್‍‍ಯುವಿಯ ಮುಂಭಾಗದಲ್ಲಿ, ಫಾಗ್ ಲ್ಯಾಂಪ್ ಬೆಜೆಲ್, ಗ್ರಿಲ್ ಹಾಗೂ ಫಾಕ್ಸ್ ಸ್ಕಿಡ್ ಪ್ಲೇಟ್‍‍ಗಳಿದ್ದು ಇವುಗಳೆಲ್ಲವೂ ಗ್ಲಾಸ್ ಬ್ಲಾಕ್ ಬಣ್ಣವನ್ನು ಹೊಂದಿವೆ. ಮುಖ್ಯ ಬದಲಾವಣೆಯೆಂದರೆ ಡ್ಯುಯಲ್-ಟೋನ್ ಬಾನೆಟ್. ಇದರ ಬಹು ಭಾಗವು ಗ್ಲಾಸ್ ಬ್ಲಾಕ್ ಬಣ್ಣವನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯುವಿಯ ಥಂಡರ್ ಮಾದರಿಯು ಹೊಸ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಅಲಾಯ್ ವ್ಹೀಲ್‍‍ಗಳೂ ಸಹ ಕಪ್ಪು ಬಣ್ಣವನ್ನು ಹೊಂದಿವೆ. ಆದರೆ ಸ್ಯಾಟಿನ್ ಮ್ಯಾಟ್ ಫಿನಿಶ್ ಹೊಂದಿವೆ. ಡೋರ್‍‍ಗಳ ಮೇಲೆ ಕಪ್ಪು ಬಣ್ಣದ ಡೆಕಾಲ್‌ಗಳಿವೆ. ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್‌ ಕಂದು ಬಣ್ಣದ ಡ್ಯುಯಲ್ ಟೋನ್ ಥೀಮ್ ಹೊಂದಿದೆ. ಸೀಟುಗಳು, ಡೋರ್ ಪ್ಯಾನೆಲ್‍‍ಗಳು, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಸೆಂಟರ್ ಆರ್ಮ್‌‍‍ರೆಸ್ಟ್ ಹಾಗೂ ಸೆಂಟರ್ ಕನ್ಸೋಲ್‌ಗಳು ಕಂದು ಬಣ್ಣವನ್ನು ಹೊಂದಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ 2013ರಿಂದಲೂ ಮಾರಾಟವಾಗುತ್ತಿದೆ. ಈ ಸೆಗ್‍‍ಮೆಂಟಿನಲ್ಲಿರುವ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಇದು ಜನಪ್ರಿಯವಾಗಿರುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಹೆಚ್ಚಿನ ಪೈಪೋಟಿ ಇರುವ ಈ ಸೆಗ್‍‍ಮೆಂಟಿನಲ್ಲಿ ಹೊಸ ಇಕೋಸ್ಪೋರ್ಟ್ ಜನಪ್ರಿಯವಾಗುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಹೊಸ ಇಕೋಸ್ಪೋರ್ಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೇರೆ ಕಾರು ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಸಣ್ಣ ಸಾಮರ್ಥ್ಯದ ಡೀಸೆಲ್ ಎಂಜಿನ್ ಕಾರುಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರೂ, ಫೋರ್ಡ್ ಬಿಎಸ್6 ನಿಯಮಗಳಿಗೆ ತಕ್ಕಂತೆ ಎಂಜಿನ್ ಅಭಿವೃದ್ಧಿಪಡಿಸುವ ಮೂಲಕ ಡೀಸೆಲ್ ಎಂಜಿನ್ ವಾಹನಗಳ ಮಾರಾಟವನ್ನು ಮುಂದುವರೆಸಲಿದೆ. ಡೀಸೆಲ್ ಎಂಜಿನ್ ವಾಹನಗಳಿಂದಾಗಿಯೇ ಭಾರತದಲ್ಲಿ ಫೋರ್ಡ್ ಕಂಪನಿಯು ಯಶಸ್ಸನ್ನು ಸಾಧಿಸಿದೆ. ಅದಕ್ಕಾಗಿ ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತಹ ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸುತ್ತದೆ.

Source: Autocarindia

Article Published On: Tuesday, September 3, 2019, 17:08 [IST]
English summary
Ford EcoSport BS-VI Spotted Testing Ahead Of India Launch: Spy Pics And Details - Read in kannada
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+