ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಹ್ಯುಂಡೈ ಇಂಡಿಯಾ ಸಂಸ್ಥೆಯು ಅಗಸ್ಟ್ ತಿಂಗಳಿನ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅಗಸ್ಟ್ ಅವಧಿಯಲ್ಲಿ ಗ್ರ್ಯಾಂಡ್ ಐ10 ಮತ್ತು ವೆನ್ಯೂ ಕಾರುಗಳು ಹ್ಯುಂಡೈ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿವೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

2019ರ ಅಗಸ್ಟ್ ಅವಧಿಯಲ್ಲಿ ಸುಮಾರು 38 ಸಾವಿರ ಕಾರುಗಳನ್ನು ಮಾರಾಟ ಮಾಡಿರುವ ಹ್ಯುಂಡೈ ಸಂಸ್ಥೆಯು ಕಾರು ಮಾರಾಟದಲ್ಲಿ ಸತತ ಇಳಿಕೆ ಮಧ್ಯದಲ್ಲೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಇದರಲ್ಲಿ ಗ್ರ್ಯಾಂಡ್ ಐ10 ಮತ್ತು ವೆನ್ಯೂ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ ನಾಲ್ಕೈದು ತಿಂಗಳಿನಿಂದ ತೀವ್ರ ಕುಸಿತ ಕಂಡಿದ್ದ ಗ್ರ್ಯಾಂಡ್ ಐ10 ಕಾರು ನಿಯೋಸ್ ಆವೃತ್ತಿಯ ನಂತರ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಹ್ಯುಂಡೈ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಸ್ಯಾಂಟ್ರೊ, ಗ್ರ್ಯಾಂಡ್ ಐ10, ಐ20, ವೆನ್ಯೂ, ಕ್ರೆಟಾ, ವೆನ್ಯೂ, ವೆರ್ನಾ, ಎಕ್ಸ್‌ಸೆಂಟ್, ಕೊನಾ ಎಲೆಕ್ಟ್ರಿಕ್, ಟಕ್ಸನ್, ಎಲಾಂಟ್ರಾ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಗ್ರ್ಯಾಂಡ್ ಐ10, ಐ20, ವೆನ್ಯೂ ಮಾತ್ರ ಉತ್ತಮ ಮಾರಾಟ ದಾಖಲಿಸಿವೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಅಗಸ್ಟ್ ಅವಧಿಯಲ್ಲಿ ಗ್ರ್ಯಾಂಡ್ ಐ10 ಕಾರು 9,403 ಯುನಿಟ್ ಮಾರಾಟವಾದಲ್ಲಿ ವೆನ್ಯೂ ಮಾದರಿಯು 9,342 ಯುನಿಟ್ ಹಾಗೂ ಐ20 ಮಾದರಿಯು 7,071 ಯುನಿಟ್ ಮಾರಾಟಗೊಂಡಿವೆ. ಇದರಲ್ಲಿ ಕ್ರೆಟಾ(6,001 ಯುನಿಟ್) ಮತ್ತು ಸ್ಯಾಂಟ್ರೊ(3,288) ಯನಿಟ್ ಮಾರಾಟವಾದರೂ ಹಿಂದಿನ ವರ್ಷದ ಮಾರಾಟಕ್ಕೆ ಹೊಲಿಕೆ ಮಾಡಿದ್ದಲ್ಲಿ ಶೇ. 46 ರಷ್ಟು ಕುಸಿತ ಕಂಡಿವೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಹೀಗಾಗಿ ಹ್ಯುಂಡೈ ಕಾರು ಮಾರಾಟದಲ್ಲಿ ಗ್ರ್ಯಾಂಡ್ ಐ10 ಮತ್ತು ವೆನ್ಯೂ ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿದ್ದು, ಮುಂಬರುವ ದಿನಗಳಲ್ಲಿ ಬರುವ ಉತ್ಸವಗಳ ಸಂದರ್ಭದಲ್ಲಿ ಕಾರು ಮಾರಾಟವು ಮತ್ತಷ್ಟು ಗದಿಗೆದರುವ ನೀರಿಕ್ಷೆಯಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹ್ಯುಂಡೈ ಸಂಸ್ಥೆಯು ಜನಪ್ರಿಯ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಇನ್ನು ಹ್ಯುಂಡೈ ಸಂಸ್ಥೆಗೆ ವೆನ್ಯೂ ಕಾರು ಭಾರೀ ಜನಪ್ರಿಯತೆ ತಂದುಕೊಡುತ್ತಿದ್ದು, ಸತತ ಎರಡು ವರ್ಷಗಳ ಕಾಲ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿದ್ದ ಅಗ್ರಸ್ಥಾನದಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಸದ್ಯ ಮಾರುಕಟ್ಟೆಯಲ್ಲಿ ಬ್ರೆಝಾ ಕಾರು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಮಾರಾಟಕ್ಕಿದ್ದು, ಪ್ರತಿ ಸ್ಪರ್ಧಿ ವೆನ್ಯೂ ಮಾತ್ರ ಪೆಟ್ರೋಲ್, ಡೀಸೆಲ್ ಮಾದರಿಗಳಲ್ಲಿ ಮಾತ್ರವಲ್ಲದೇ ಪರ್ಫಾಮೆನ್ಸ್ ಆವೃತ್ತಿಯನ್ನು ಹೊಂದಿರುವುದೇ ಅಧಿಕ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ವೆನ್ಯೂ ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 4 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ವೆನ್ಯೂ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.50,000 ದಿಂದ ಟಾಪ್ ಎಂಡ್ ಆವೃತ್ತಿಯು ರೂ.11,10,500 ಬೆಲೆ ಪಡೆದುಕೊಂಡಿದೆ.

MOST READ: ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(0) ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಖರೀದಿಗೆ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮತ್ತು 1.4-ಡೀಸೆಲ್ ಎಂಜಿನ್‌ಗಳು ಸಾಮಾನ್ಯ ಮಾದರಿಯ ಕಾರುಗಳಗಾಗಿ ಮಾರಾಟಗೊಳ್ಳಲಿದ್ದರೆ, ಕಡಿಮೆ ಎಂಜಿನ್ ಸಾಮಾರ್ಥ್ಯದ 1.0-ಲೀಟರ್ ಪೆಟ್ರೋಲ್ ಆವೃತ್ತಿಯು ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನೆಯೊಂದಿಗ ವೆನ್ಯೂ ಟಾಪ್ ಎಂಡ್ ಮಾದರಿಯಾಗಿ ಹೊರಹೊಮ್ಮಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಹಾಗೆಯೇ ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರ್ಯಾಂಡ್ ಐ10 ಕಾರಿನ ನವೀಕೃತ ಆವೃತ್ತಿಯಾದ ಗ್ರ್ಯಾಂಡ್ ಐ10 ನಿಯೋಸ್ ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.99 ಲಕ್ಷ ಆರಂಭಿಕ ಬೆಲೆಯೊಂದಿಗೆ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.

ಹ್ಯುಂಡೈ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಗ್ರ್ಯಾಂಡ್ ಐ10 ಮತ್ತು ವೆನ್ಯೂ..!

ಗ್ರ್ಯಾಂಡ್ ಐ10 ನಿಯೋಸ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಾದ ಎರಾ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.99 ಲಕ್ಷ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯಾದ ಆಸ್ಟಾ ಮ್ಯಾನುವಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ.7.99 ಲಕ್ಷ ಬೆಲೆ ಪಡೆದಿದೆ.

Most Read Articles

Kannada
English summary
Hyundai Model-Wise Sales Report In India For August: Grand i10 & Venue Lead The Sales.
Story first published: Thursday, September 26, 2019, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X