ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಜೀಪ್ ಇಂಡಿಯಾ, ತನ್ನ ಆಯ್ದ ಕಂಪಾಸ್ ಎಸ್‌ಯುವಿ ರೂಪಾಂತರಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆಯ್ದ ಕೆಲವು ರೂಪಾಂತರಗಳಿಗೆ ಬರೊಬ್ಬರಿ ರೂ.1.6 ಲಕ್ಷಗಳವರೆಗೆ ಭರ್ಜರಿ ಆಫರ್ ಘೋಷಿಸಿದೆ. ಜೀಪ್ ಇಂಡಿಯಾ ತನ್ನ ಕಂಪಾಸ್ ಮಾದರಿಗಳನ್ನು ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಯನ್ನು ನೀಡಿದ್ದಾರೆ.

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಎಂಟ್ರಿ ಲೆವೆಲ್ ಸ್ಪೋರ್ಟ್ ಟ್ರಿಮ್ 4x2 ಡೀಸೆಲ್ ಮಾದರಿಗೆ ರೂ.1.6 ಲಕ್ಷಗಳವರೆಗೆ ರಿಯಾಯಿತಿಯನ್ನು ಹೊಂದಿದ್ದರೆ, ಪೆಟ್ರೋಲ್ ಮಾದರಿಗೆ ರೂ.70,00ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇನ್ನೂ ಸ್ಪೋರ್ಟ್ ಪ್ಲಸ್ ಡೀಸೆಲ್ ರೂಪಾಂತರಕ್ಕೆ 1.1 ಲಕ್ಷಗಳವರೆಗೆ ಮತ್ತು ಪೆಟ್ರೋಲ್ ಮಾದರಿಗೆ ರೂ.50,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಕಂಪಾಸ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 2.0 ಲೀಟರ್ ಟರ್ಬೋ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಡೀಸೆಲ್ ಎಂಜಿನ್ ಬಿಎಸ್-4 ಮತ್ತು ಬಿಎಸ್-6 ಎಂಬ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಸ್-4 ಎಂಜಿನ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ಎಂಜಿನ್‍‍ನಲ್ಲಿ 9ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಇನ್ನೂ 1.6 ಪೆಟ್ರೋಲ್ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಬಲಿಷ್ಠ ಎಂಜಿನ್ ಮತ್ತು ಆಫ್ ರೋಡ್ ಚಾಲನೆಗೆ ಸಹಕಾರಿಯಾಗುವ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯವು ಜೀಪ್ ಕಂಪಾಸ್ ಖರೀದಿಗೆ ಪ್ಲಸ್ ಪಾಯಿಂಟ್ ಎನ್ನಬಹುದಾಗಿದ್ದು, 16-ಇಂಚಿನ ಅಲಾಯ್ ವೀಲ್ಹ್, ಪನೋರಮಿಕ್ ಸನ್‌ರೂಫ್, ಆಕರ್ಷಕ ಗ್ರಿಲ್ ಸ್ಲಾಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಫೀಚರ್ಸ್ ಹೊಂದಿದೆ.

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್ ಸಂಸ್ಥೆಯು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಆಟೋ, ಸ್ನೋ, ಸ್ಯಾಂಡ್ ಮತ್ತು ಮಡ್ ಮೊಡ್‌ಗಳಲ್ಲಿ ಚಾಲನಾ ಸೌಲಭ್ಯ ನೀಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಹಲವು ತಾಂತ್ರಿಕ ಸೌಲಭ್ಯಗಳು ಇದರಲ್ಲಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದ್ದು, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಜೀಪ್ ಕಂಪಾಸ್ ಎಸ್‍‍ಯು‍ವಿ ಮೇಲೆ ಭರ್ಜರಿ ರಿಯಾಯಿತಿ

ಜೀಪ್ ಇಂಡಿಯಾ, ತನ್ನ ಕಂಪಾಸ್ ಎಸ್‌ಯುವಿಯ 7 ಸೀಟರ್ ಆವೃತ್ತಿಯನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯು‍ವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಜೀಪ್ jeep
English summary
Benefits of up to Rs 1.6 lakh on Jeep Compass - Read in Kannada
Story first published: Saturday, November 16, 2019, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X