Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೆಪ್ಟೆಂಬರ್ ಅವಧಿಯ ಎಸ್‌ಯುವಿ ಕಾರು ಮಾರಾಟದಲ್ಲಿ ಸೆಲ್ಟೊಸ್ ನಂ.1
ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಸೆಲ್ಟೊಸ್ ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆ ಪಡೆದುಕೊಳ್ಳುತ್ತಿದ್ದು, 2019ರ ಸೆಪ್ಟೆಂಬರ್ ಅವಧಿಯಲ್ಲಿ ನಂ.1 ಸ್ಥಾನಕ್ಕೇರಿದೆ.

ಅಗಸ್ಟ್ 22ರಂದು ಬಿಡುಗಡೆಗೊಂಡ ನಂತರ ಮೊದಲ ತಿಂಗಳಿನಲ್ಲೇ 6 ಸಾವಿರ ಯುನಿಟ್ ಮಾರಾಟ ದಾಖಲಿಸಿದ್ದ ಸೆಲ್ಟೊಸ್ ಕಾರು ಸೆಪ್ಟೆಂಬರ್ ಅವಧಿಯಲ್ಲೂ ದಾಖಲೆ ಪ್ರಮಾಣದ ಕಾರು ಮಾರಾಟವಾಗಿದ್ದು, ಎರಡನೇ ತಿಂಗಳ ಅವಧಿಯಲ್ಲಿ ಒಟ್ಟು 7,750 ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 16.99 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದ್ದು, ಟೆಕ್ ಲೈನ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮತ್ತು ಜಿಟಿ ಲೈನ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್, ಜಿಟಿಕೆ ಪ್ಲಸ್ ಎಎಂಟಿ ವೆರಿಯೆಂಟ್‌ಗಳಲ್ಲಿ ಲಭ್ಯವಿವೆ. ಟೆಕ್ ಲೈನ್ ಕಾರು ಮಾದರಿಗಳು ಸಾಮಾನ್ಯ ಚಾಲನಾ ತಂತ್ರಜ್ಞಾನ ಹೊಂದಿದ್ದರೆ ಜಿಟಿ ಲೈನ್ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ವೈಶಿಷ್ಟ್ಯತೆ ಹೊಂದಿವೆ.

ಜಿಟಿಎಕ್ಸ್ ಪ್ಲಸ್ ಎಎಂಟಿ ವರ್ಷನ್ ಮಾದರಿಯು ಬಿಎಸ್-6 ನಿಯಮ ಅನುಸಾರ ಅಭಿವೃದ್ಧಿಗೊಂಡಿರುವ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ, ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ. ಜಿಟಿ ಲೈನ್ ಹೊರತುಪಡಿಸಿ ಟೆಕ್ ಲೈನ್ ಕಾರುಗಳಲ್ಲಿ ಪ್ರತಿ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದೆ.

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.
MOST READ: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಯಲಾಯ್ತು ಚೀನಿ ಕಂಪನಿಯ ಎಂಜಿ ಕಾರಿನ ಅಸಲಿಯತ್ತು..!

ಸುರಕ್ಷಾ ಸೌಲಭ್ಯಗಳು
ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.
MOST READ: ರೂ. 5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍ಗಳು

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.