ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಭಾರತದಲ್ಲಿ ಫೋರ್ಡ್ ವಾಹನಗಳನ್ನು ಅಭಿವೃದ್ದಿಪಡಿಸುವ, ಮಾರಾಟ ಮಾಡುವ ಮತ್ತು ವಿತರಿಸುವ ಜಂಟಿ ಸಹಭಾಗಿತ್ವಕ್ಕೆ ವಾಹನ ತಯಾರಕ ಸಂಸ್ಥೆಗಳಾದ ಫೋರ್ಡ್ ಮೋಟಾರ್ ಕಂಪನಿ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಮಹೀಂದ್ರಾ ಹೊಸ ಜಂಟಿ ಉದ್ಯಮದಲ್ಲಿ ಶೇ.51 ರಷ್ಟು ನಿಯಂತ್ರಣ ಪಾಲನ್ನು ಹೊಂದಿದೆ ಮತ್ತು ಉಳಿದ ಶೇ.49 ರಷ್ಟು ಫೋರ್ಡ್ ಒಡೆತನದಲ್ಲಿದೆ. ಕಂಪನಿಗಳು ಜಂಟಿಯಾಗಿ ಉತ್ಪನ್ನಗಳನ್ನು ಅಭಿವೃದ್ದಿಪಡಿಸಿದರೂ ತಮ್ಮ ತಮ್ಮ ಸ್ವಂತ ಡೀಲರ್‍‍ಗಳ ಮುಖಾಂತರ ಮಾರಾಟವಾಗುತ್ತದೆ. ಫೋರ್ಡ್ ಗ್ಲೋಬಲ್ ಬಿಸಿನೆಸ್ ಸರ್ವಿಸಸ್ ಯುನಿ‍ಟ್, ಫೋರ್ಡ್ ಕ್ರಿಡಿಟ್ ಮತ್ತು ಫೋರ್ಡ್ ಸ್ಮಾರ್ಟ್ ಮೊಬಲಿಟಿ ಜೊತೆಗೆ ಸನಂದನ ದಲ್ಲಿ ಎಂಜಿನ್ ಪ್ಲಾಂಟ್ ಅನ್ನು ಉಳಿಸಿಕೊಳ್ಳುತ್ತದೆ.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಜಂಟಿ ಸಹಭಾಗಿತ್ವದ ಕುರಿತು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮಾತನಾಡಿ, ಮಹೀಂದ್ರಾ ಮತ್ತು ಫೋರ್ಡ ಸಹಭಾಗಿತ್ವದಲ್ಲಿ ಬರುವುದು ಎರಡು ಕಂಪನಿಗಳ ನಡುವಿನ ಸಹಕಾರ ಮತ್ತು ಪರಸ್ಪರ ಗೌರವದ ಸುದೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಮ್ಮ ಸಂಯೋಜಿತ ಸಾಮರ್ಥಗಳು ಮೌಲ್ಯ ಕೇಂದ್ರಿತ ಎಂಜಿನಿಯರಿಂಗ್‍‍ನಲ್ಲಿ ಮಹೀಂದ್ರಾ ಅವರ ಪರಿಣತಿ ಮತ್ತು ಅದರ ಯಶಸ್ಸಿನ ಅಪರೇಟಿಂಗ್ ಮಾಡೆಲ್ ಮತ್ತು ಪೋರ್ಡ್ ತಾಂತ್ರಿಕ ಪರಿಣಿತಿ ಜಾಗತಿಕ ಮತ್ತು ಭವಿಷ್ಯದ ತಂತ್ರಜ್ಞಾನದ ಪ್ರವೇಶ ಮುಂದೆ ಯಶಸ್ವಿಯಾಗಲಿದೆ ಎಂದು ಹೇಳಿದರು.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಮಹೀಂದ್ರಾ ಮತ್ತು ಫೋರ್ಡ್ ಹೇಳುವಂತೆ ಜಂಟಿ ಸಹಭಾಗಿತ್ವವು ಮೊದಲ ಬಾರಿಗೆ ಸೆಪ್ಟೆಂಬರ್ 2017ರಲ್ಲಿ ಪರಿಚಯಿಸಿದ ಕಾರ್ಯತಂತ್ರದ ಮೈತ್ರಿಯ ಮುಂದಿನ ಹಂತವಾಗಿದೆ. ಜೆ.ವಿ 2020ರ ಮಧ್ಯಭಾಗದಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು ಎರಡೂ ಉತ್ಪಾದಕರಿಂದ ಸದ್ಯಸರನ್ನು ಸಂಯೋಜಿಸುವ ಕಾರ್ಯಗಳು ನಡೆಯುತ್ತದೆ. ಭಾರತದಲ್ಲಿ ಪೋರ್ಡ್ ಇರುವೆಕೆಯನ್ನು ಹೆಚ್ಚಿಸಲು ಮತ್ತು ಅದರ ಉತ್ಪನ್ನಗಳನ್ನು ಕಂಪನಿಯ ಘಟಕಗಳನ್ನು ಜಾಗತಿಕವಾಗಿ ರಫ್ತು ಮಾಡಲು ಜಂಟಿ ಉದ್ಯಮವು ಸಹಕಾರಿಯಾಗಲಿದೆ.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಜಂಟಿ ಸಹಭಾಗಿತ್ವದಲ್ಲಿ ಬ್ರ್ಯಾಂಡ್‍‍ಗಳು ಹೊಸ ಉತ್ಪನ್ನಗಳನ್ನು ಸಹ ಅಭಿವೃದ್ದಿಪಡಿಸಲಿದೆ ಮತ್ತು ಇದು ಫೋರ್ಡ್ ಬ್ರ್ಯಾಂಡ್‍‍ನಡಿಯಲ್ಲಿ ಮೂರು ಹೊಸ ಯು‍‍ವಿ‍ಗಳನ್ನು ಒಳಗೊಂಡಿದೆ. ಇದು ಹೊಸ ಮಧ್ಯಮ ಗ್ರಾತ್ರದ ಎಸ್‍‍‍ಯು‍ವಿ ಯಿಂದ ಪ್ರಾರಂಭವಾಗುತ್ತದೆ ಮತ್ತು ಕಂಪನಿಗಳು ಹಂಚಿಕೊಳ್ಳುವ ಪ್ಲಾಟ್‍‍ಫಾರ್ಮ್ ಮತ್ತು ಪವರ್‍‍ಟ್ರೀನ್ ಅನ್ನು ಹೊಂದಿರುತ್ತದೆ.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ವಾಹನ ತಯಾರಕರು ಪ್ರಸ್ತುತ ಅಭಿವೃದ್ದಿ ಪಡಿಸುತ್ತಿರುವ ಹೊಸ ಪೀಳಿಗೆಯ ಆಸ್ಪೈರ್ ಇವಿ‍ಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಭಾರತೀಯ ವಾಹನ ತಯಾರಕರಿಂದ ಪಡೆದ ಪವರ್ ಟ್ರೇನ್ ಅನ್ನು ಬಳಸುತ್ತಾರೆ.

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಅವರು ಮಾತನಾಡಿ, ಜಂಟಿ ಸಹಭಾಗಿತ್ವದಲ್ಲಿ ಪ್ಲಾಟ್‌ಫಾರ್ಮ್‌ಗಳು ಮತ್ತು ಪವರ್‌ಟ್ರೇನ್‌ಗಳೊಂದಿಗೆ ವಿಶಿಷ್ಟ ಉತ್ಪನ್ನ ಪೋರ್ಟ್ಫೋಲಿಯೊವನ್ನು ಹೊಂದಿರುತ್ತದೆ, ಹೊಸ ತಂತ್ರಜ್ಞಾನ, ಉನ್ನತ ಉತ್ತಮ ಮತ್ತು ಎಂಜಿನಿಯರಿಂಗ್ ಮಾನದಂಡಗಳು ಮಹೀಂದ್ರಾ ಮತ್ತು ಫೋರ್ಡ್ ಎರಡರಿಂದಲೂ, ಉತ್ತಮ ವೆಚ್ಚದಲ್ಲಿ ಹೊಂದಿರಲಿದೆ ಎಂದು ಹೇಳಿದರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಹೊಸದಾಗಿ ಅಭಿವೃದ್ದಿಪಡಿಸಲಿರುವ ಕಾರುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಗೊಳಿಸಲಿದೆ. ಮಹೀಂದ್ರಾ ಕಂಪನಿಯು ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ತನ್ನ ಮಾರಟವನ್ನು ವಿಸ್ತರಿಸಲು ಸಜ್ಜಾಗುತ್ತಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಜಂಟಿ ಸಹಭಾಗಿತ್ವದಲ್ಲಿ ಬರಲಿವೆ ಮಹೀಂದ್ರಾ - ಫೋರ್ಡ್ ಕಾರುಗಳು

ಅಮೆರಿಕದ ಮತ್ತೊಂದು ಕಂಪನಿಯಾದ ಜನರಲ್ ಮೋಟಾರ್ಸ್ ತನ್ನ ಚೆವ್ರೊಲೆಟ್ ಮಾರಾಟವನ್ನು ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿ ಭಾರತದಿಂದ ಹಿಂದೆ ಸರಿಯಿತು. ಫೋರ್ಡ್ ಭಾರತದಿಂದ ಸಂಪೂರ್ಣವಾಗಿ ಹಿಂದೆ ಸರಿಯದೆ ಮಹೀಂದ್ರಾ ಸಹಾಯದಿಂದ ಮಾರುಕಟ್ಟೆಯಲ್ಲಿ ಉಳಿಯಲು ಪ್ರಯತ್ನಿಸುತ್ತಿದೆ.

Most Read Articles

Kannada
English summary
Mahindra & Ford Announce New Joint Venture - Read in Kannada
Story first published: Tuesday, October 1, 2019, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X