ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆಲವು ಡೀಸೆಲ್ ಎಂಜಿನ್‌‌ಗಳ ಉತ್ಪಾದನಾ ತಂತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಡೀಸೆಲ್ ಎಂಜಿನ್‌ಗಳು ಮಾರುಕಟ್ಟೆಯಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ದೇಶಾದ್ಯಂತ ಸದ್ಯ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯತೆ ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ. ಹೀಗಾಗಿ ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಕೆಲವು ಜನಪ್ರಿಯ ಕಾರುಗಳ ಡೀಸೆಲ್ ವರ್ಷನ್‌ಗಳನ್ನು ಮಾರಾಟದಿಂದ ಕೈಬಿಡಲಾಗುತ್ತಿದ್ದು, ಇದರಲ್ಲಿ ಮಹೀಂದ್ರಾ ನಿರ್ಮಾಣದ ಕೆಯುವಿ100 ಡೀಸೆಲ್ ಮಾದರಿಯನ್ನು ಉತ್ಪಾದನೆಯಿಂದ ಕೈಬಿಡಲಾಗಿದೆ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಈ ಹಿಂದೆ ಬಿಎಸ್-4 ಜಾರಿಗೆ ತಂದಿದ್ದ ಕೇಂದ್ರ ಸರ್ಕಾರವು ಮುಂಬರುವ ಏಪ್ರಿಲ್ 1, 2020ಕ್ಕೆ ಬಿಎಸ್-4 ನಿಷೇಧಗೊಳಿಸಿ ಬಿಎಸ್-6 ನಿಯಮವನ್ನು ಜಾರಿಗೆ ತರುತ್ತಿದ್ದು, ಹೊಸ ನಿಯಮದ ಪ್ರಕಾರ ಮರುಅಭಿವೃದ್ಧಿ ಪಡಿಸಲು ಸಾಧ್ಯವಾಗದ ಡೀಸೆಲ್ ಎಂಜಿನ್‌ಗಳನ್ನು ನಿಷೇಧ ಮಾಡುತ್ತಿದೆ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಇದರಲ್ಲಿ ಮಹೀಂದ್ರಾ ಸಂಸ್ಥೆಯ 1.2-ಲೀಟರ್ ಡಿಸೇಲ್ ಎಂಜಿನ್ ಕೂಡಾ ಬಿಎಸ್-6 ನಿಯಮಗಳನ್ನು ಪಾಲಿಸಲು ಸಾಧ್ಯವಾಗದೇ ಮಾರುಕಟ್ಟೆಯಿಂದ ನಿರ್ಗಮಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಲಾಗುವುದು ಎಂದು ಮಹೀಂದ್ರಾ ಖಚಿತಪಡಿಸಿದೆ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಇದರ ಜೊತೆಗೆ ಕೆಯುವಿ100 ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಮಾದರಿಯನ್ನು ಸಹ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಡೀಸೆಲ್ ಎಂಜಿನ್ ಮಾದರಿಗಿಂತ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ವರ್ಷನ್‌ಗಳಲ್ಲಿ ಪೂರೈಸುವ ಭರವಸೆ ನೀಡಿದೆ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಇನ್ನು ಮೂಲಗಳ ಪ್ರಕಾರ, ಕೆಯುವಿ100 ಕಾರಿನಲ್ಲಿ 1.2-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಡೀಸೆಲ್ ಎಂಜಿನ್ ಜೋಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಒಂದು ವೇಳೆ 1.5-ಲೀಟರ್ ಹೊಸ ಎಂಜಿನ್ ಜೋಡಣೆ ಮಾಡಿದ್ದಲ್ಲಿ ಕಾರಿನ ಬೆಲೆಯು ರೂ.2 ಲಕ್ಷದಷ್ಟು ದುಬಾರಿಯಾಗಲಿದೆ ಎನ್ನುವುದು ತಜ್ಞರ ಅಭಿಮತ.

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಹೀಗಿರುವಾಗ ದುಬಾರಿ ಬೆಲೆಯಲ್ಲಿ ಕೆಯುವಿ100 ಖರೀದಿಗೆ ಗ್ರಾಹಕರು ಮನಸ್ಸು ಮಾಡದೆ ಇದ್ದಲ್ಲಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿಯು ಸಹ ಎದುರಾಗಬಹುದಾದ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಹೊಸ ಡೀಸೆಲ್ ಎಂಜಿನ್ ಕುರಿತಾಗಿ ಮಹೀಂದ್ರಾ ಸಂಸ್ಥೆಯೇ ಸ್ಪಷ್ಟಪಡಿಸಲಿದೆ.

ಈ ಮೂಲಕ ಸಣ್ಣ ಗಾತ್ರದ ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿ ಸಾಧಿಸಿರುವ ಕೆಯುವಿ100 ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 4.83 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.94 ಲಕ್ಷ ಬೆಲೆ ಹೊಂದಿದೆ.

MOST READ: ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಮಹೀಂದ್ರಾ ಕೆಯುವಿ100 ಕಾರಿನಲ್ಲಿ ಡೀಸೆಲ್ ವರ್ಷನ್ ಬಂದ್..!

ಹೀಗಿರುವಾಗ ಕೆಯುವಿ100 ನಲ್ಲಿ ಬಿಎಸ್-6 1.5 ಡೀಸೆಲ್ ಎಂಜಿನ್ ಅಳವಡಿಕೆ ಮಾಡಿದ್ದಲ್ಲಿ ಟಾಪ್ ಎಂಡ್ ಮಾದರಿಯು ಬೆಲೆ ಎಕ್ಸ್‌ಶೋರೂಂ ಬೆಲೆಯು ಕನಿಷ್ಠ ರೂ. 10 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್-6 ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಹೊರತುಪಡಿಸಿ ಡೀಸೆಲ್ ಎಂಜಿನ್ ಆಯ್ಕೆ ಸಿಗುವುದು ಕಷ್ಟ ಸಾಧ್ಯ.

Most Read Articles

Kannada
English summary
Mahindra KUV100 1.2L Diesel Engine Discontinued In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X