Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಥಾರ್ ಡಿಐ ವೇರಿಯಂಟ್ ಮಾರಾಟ ಬಂದ್
ಮಹೀಂದ್ರಾ ಕಂಪನಿಯು ಡಿಐ ಎಂಜಿನ್ ಹೊಂದಿರುವ ಥಾರ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಮುಂಬರಲಿರುವ ಹೊಸ ಸುರಕ್ಷಾ ನಿಯಮಗಳಿಗೆ ತಕ್ಕಂತೆ ಡಿಐ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಬಂಡವಾಳ ಅಗತ್ಯವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ 2.5 ಲೀಟರಿನ ಸಿಆರ್‍ಡಿಇ ಡೀಸೆಲ್ ಎಂಜಿನ್ ಹೊಂದಿರುವ ಥಾರ್ ಕಾರಿನ ಒಂದು ಮಾದರಿಯ ಮಾರಾಟವನ್ನು ಮುಂದುವರೆಸಲಾಗುವುದು. ಸಿಆರ್‍ಡಿಇ ಎಂಜಿನ್ ಹೊಂದಿರುವ ಥಾರ್ ಕಾರಿನಲ್ಲಿ ಹೆಚ್ಚಿನ ಫೀಚರ್‍ಗಳಿರಲಿವೆ. ಇದರಲ್ಲಿರುವ ಎಸಿ ಹಾಗೂ ಪವರ್ ಸ್ಟೀಯರಿಂಗ್‍ಗಳನ್ನು ಡಿಐ ಎಂಜಿನ್ ಹೊಂದಿದ್ದ ಕಾರಿನಲ್ಲಿ ಅಳವಡಿಸಲಾಗಿರಲಿಲ್ಲ. ಸಿಆರ್‍ಡಿಐ ಮಾದರಿಯ ಕಾರಿನಲ್ಲಿ ಡಿಐ ಮಾದರಿಯಲ್ಲಿದ್ದಂತಹ ಎಂಜಿನ್ ಇರಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪವರ್ ಉತ್ಪಾದಿಸಲಿದೆ.

ಡಿಐ ಮಾದರಿಯಲ್ಲಿ 2.5 ಲೀಟರಿನ ಎಂಜಿನ್ ಇದ್ದು, 63ಬಿಹೆಚ್‍ಪಿ ಹಾಗೂ 195 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಸಿಆರ್‍ಡಿಐ ಎಂಜಿನ್ 105 ಬಿಹೆಚ್‍ಪಿ ಹಾಗೂ 247 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಮಹೀಂದ್ರಾ ಕಂಪನಿಯು 2.5 ಲೀಟರಿನ ಡಿಐ ಎಂಜಿನ್ ಅನ್ನು ಬೊಲೆರೋ ಕಾರಿನಲ್ಲಿಯೂ ಅಳವಡಿಸಿದೆ.

ಈ ಎಂಜಿನ್ ಅನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍ಡೇಟ್ ಮಾಡಲಾಗುವುದು. ಮಹೀಂದ್ರಾ ಡಿಐ ಮಾದರಿಯ ಥಾರ್ ಕಾರ್ ಅನ್ನು ಆರ್‍ಡಬ್ಲ್ಯುಡಿ ಸೆಟ್‍ಅಪ್ ಹಾಗೂ 4 ಡಬ್ಲ್ಯೂ ಸೆಟ್‍ಅಪ್ ಆಯ್ಕೆಗಳೊಂದಿಗೆ ನೀಡಲಾಗಿತ್ತು. ಆದರೆ ಸಿಆರ್‍ಡಿಇ ಎಂಜಿನ್‍ನಲ್ಲಿ 4ಡಬ್ಲ್ಯೂ ಸೆಟ್‍ಅಪ್ ಆಯ್ಕೆಯನ್ನು ಮಾತ್ರ ನೀಡಲಾಗಿದೆ.

ಡಿಐ ಎಂಜಿನ್ ಹೊಂದಿರುವ ಹಳೆಯ ಮಾದರಿಯ ಥಾರ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸಿಆರ್‍ಡಿಐ ಎಂಜಿನ್ ಹೊಂದಿರುವ ಸಿಗ್ನೇಚರ್ ಎಡಿಷನ್ ಅನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಿದೆ. 700 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲಾಗುವುದು. ಈ ಸಿಗ್ನೇಚರ್ ಎಡಿಷನ್ ಕಾರಿನಲ್ಲಿ ಹೊಸ ಸುರಕ್ಷಾ ನಿಯಮಗಳಲ್ಲಿ ಅವಶ್ಯಕವಾಗಿರುವ ಎಬಿಎಸ್, ಡ್ರೈವರ್ ಏರ್‍ಬ್ಯಾಗ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಅಳವಡಿಸಲಾಗುವುದು.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ಸಿಆರ್‍ಡಿಇ ಎಂಜಿನ್ ಹೊಂದಿರುವ ಥಾರ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.6 ಲಕ್ಷಗಳಾಗಿದೆ. ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ವಾಹನವನ್ನು ಅಭಿವೃದ್ಧಿ ಪಡಿಸುತ್ತಿದ್ದು, 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಹೊಸ ಕಾರ್ ಅನ್ನು ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದ್ದು, ಮಹೀಂದ್ರಾ ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ 2.0 ಲೀಟರಿನ ಎಂಜಿನ್ ಹೊಂದಿರಲಿದೆ.