ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ತಮ್ಮ ಎಸ್‍ಯುವಿ ಕಾರುಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆಯೆ ಇನ್ನಿತರೇ ದೇಶಗಳಲ್ಲಿಯು ಸಹ ಜನಪ್ರೀಯತೆನ್ನು ಪಡೆಯುತ್ತಿರುವ ಮಹೀಂದ್ರಾ ಸಂಸ್ಥೆಯು, ಕೆಲವು ತಿಂಗಳ ಹಿಂದಷ್ಟೆ ಎಕ್ಸ್‌‌ಯುವಿ300 ಎಂಬ ಕಾರನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಗೊಂಡಾಗ ಈ ಕಾರಿನ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಸಂಸ್ಥೆಯು ಪರಿಚಸಲಾಗಿದ್ದು, ಇದೀಗ ಇದೇ ಕಾರಿನ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ದೇಶಿಯ ಮಾರುಕಟ್ಟೆಯಲ್ಲಿ ಎಎಂಟಿ ವರ್ಷನ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಅನುಸಾರ ಮಹೀಂದ್ರಾ ಸಂಸ್ಥೆಯು ಎಕ್ಸ್‌‌ಯುವಿ300 ಕಾರಿನ ಡೀಸೆಲ್ ಮಾದರಿಯಲ್ಲಿ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡಲಾಗಿದ್ದು, ಮ್ಯಾನುವಲ್ ವರ್ಷನ್ ಎಕ್ಸ್‌‌ಯುವಿ300 ಕಾರಿಗಿಂತಲೂ ಬೆಲೆಯಲ್ಲಿ ರೂ. 55,000 ಹೆಚ್ಚಾಗಿದೆ. ಹಾಗೆಯೆ ಎಎಂಟಿ ಮಾದರಿಯ ಎಕ್ಸ್‌‌ಯುವಿ300 ಕಾರುಗಳು ಈ ಕಾರಿನ ಡಬ್ಲ್ಯೂ8 ಹಾಗು ಡಬ್ಲ್ಯೂ8 (ಆಪ್ಷನಲ್ ಪ್ಯಾಕ್) ಎಂಬ ವೇರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮತ್ತು ಮ್ಯಾನುವಲ್ ಗೇರ್‍‍ಬಾಕ್ಸ್ ಮಾದರಿಯಲ್ಲಿ ದೊರೆಯುತ್ತಿರುವ ಮಹೀಂದ್ರಾ ಎಕ್ಸ್‌‌ಯುವಿ300, ಸಂಸ್ಥೆಯ ಮಾರಾಟದ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಯಾವುದೇ ಅನುಮಾನವಿಲ್ಲ. ಎಎಂಟಿ ಮಾದರಿಯ ಮಹೀಂದ್ರಾ ಎಕ್ಸ್‌‌ಯುವಿ300 ಕಾರುಗಳು ಇಂಧನ ದಕ್ಷತೆ ಮತ್ತು ಡ್ರೈವಿಬಿಲಿಟಿಯನ್ನು ಪಂಪ್ ಮಾಡುತ್ತದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಬೆಲೆ ಮತ್ತು ಬಣ್ಣಗಳು

ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರುಗಳು ರೂ. 11.05 ಲಕ್ಷ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಪರ್ಲ್ ವೈಟ್, ಆಕ್ವಾಮರಿನ್ ಮತ್ತು ರೆಡ್ ರೇಂಜ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಕಾರಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಮಹೀಂದ್ರಾ ಡೀಲರ್‍‍ಗಳ ಬಳಿ ಬುಕ್ಕಿಂಗ್ ಅನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕೇವಲ ಗೇರ್‍‍ಬಾಕ್ಸ್ ನಲ್ಲಿ ಮಾತ್ರ ಬದಲಾವಣೆಯನ್ನು ಪಡೆದಿರುವ ಎಕ್ಸ್‌ಯುವಿ300 ಡಿಸೇಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 115-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿದೆ. ಹೀಗಾಗಿ ಡ್ರೈವಿಂಗ್ ವೇಳೆ ಈ ಕಾರು ಉತ್ತಮ ಆಕ್ಸಿಲರೇಷನ್ ಮತ್ತು ಓವರ್‍‍ಟೇಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ವಿಶೇಷ ಎನ್ನಿಸುವ ಎಕ್ಸ್‌ಯುವಿ300 ಮಾದರಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಕ್ರೋಮ್ ಬಳಕೆ, ಬೂಟ್ ಲಿಡ್, ಡ್ಯುಯಲ್ ಟೋನ್ ಇಂಟಿರಿಯರ್, ಎಸಿ ವೆಂಟ್ಸ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಇವುಗಳ ಜೊತೆಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ಸ್ಟಾಪ್/ಸ್ಟಾರ್ಟ್ ಬಟನ್, ರಿಯರ್ ಸೀಟ್ ಆರ್ಮ್‌ ರೆಸ್ಟ್, ಕ್ರೂಸ್ ಕಂಟ್ರೋಲ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಸನ್‌ರೂಫ್, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್‌ಗಳು ಇದರಲ್ಲಿವೆ.

ಹಾಗೆಯೇ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಇಬಿಡಿ, ಸೀಟ್ ಬೆಲ್ಟ್ ಸೆನ್ಸಾರ್, ಪವರ್ ಫೋರ್ಡ್ ರಿಯರ್ ವ್ಯೂ ಒಆರ್‌ವಿಎಂಎಸ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಟು ಜೋನ್ ಕ್ಲೈಮೆಟ್ ಕಂಟ್ರೋಲ್, ಹೈಟ್ ಅಡ್ಜೆಸ್ಟ್ ಸೀಟ್ ಬೆಲ್ಟ್, ಪ್ರತಿ ಸೀಟುಗಳಲ್ಲೂ ಸೀಟ್ ಬೆಲ್ಟ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವು ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಮಹೀಂದ್ರಾ ಎಕ್ಸ್‌‌ಯುವಿ300 ಎಎಂಟಿ ವರ್ಷನ್ ಕಾರು ಟ್ರಾಫಿಕ್ ಭರಿತ ನಗರ ಪ್ರದೇಶಗಳಲ್ಲಿ ಡ್ರೈವಿಂಗ್ ಮಾಡಲು ಬಹು ಸುಲಭವಾಗಿದ್ದು, ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು ನಗರ ನಿವಾಸಿಗಳು, ಮತ್ತು ಮಹಿಳೆಯರಿಗೆ ಡ್ರೈವಿಂಗ್ ಉತ್ತಮ ಅನುಭವ ನೀಡುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಬಿಡುಗಡೆಯಾದ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎಎಂಟಿ ಕಾರು ಪ್ರಿಯರಲ್ಲಿ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ ಹೊಸ ಎಎಂಟಿ ವರ್ಷನ್ ಮಹೀಂದ್ರಾ ಎಕ್ಸ್‌‌ಯುವಿ300 ಕಾರು ಇದೀಗ ಬಿಡುಗಡೆಗೊಂಡಿದೆ. ಮಾರುಕಟ್ಟೆಯಲ್ಲಿ ತನ್ನ ಎದುರಾಳಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರುಗಳಲ್ಲಿ ಎಎಂಟಿ ಆಯ್ಕೆ ಇದ್ದು, ಇದೀಗ ಎಕ್ಸ್‌‌ಯುವಿ300 ಕಾರು ಕೂಡಾ ಎಎಂಟಿ ಆಯ್ಕೆ ಪಡೆದಿದೆ.

Most Read Articles

Kannada
English summary
Mahindra XUV300 AMT Launched In India — Prices Start At Rs 11.34 Lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X